Advertisement

ಇಂದು ಶ್ರೀನಿವಾಸಪುರ ತಾಲೂಕು ಕನ್ನಡ ಸಮ್ಮೇಳನ

10:47 AM Jun 29, 2019 | Suhan S |

ಶ್ರೀನಿವಾಸಪುರ: ಗಡಿಭಾಗದಲ್ಲಿ ಶನಿವಾರ ಏರ್ಪಡಿಸಿರುವ 10ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನುಡಿ ಹಬ್ಬ ಯಶಸ್ವಿಗೊಳಿಸಿ ಎಂದು ಕಸಾಪ ಅಧ್ಯಕ್ಷ ಜಿ.ಎನ್‌.ಕುಬೇರಗೌಡ ಮನವಿ ಮಾಡಿದರು.

Advertisement

ತಾಲೂಕಿನ ಗೌನಿಪಲ್ಲಿ ಗ್ರಾಪಂ ಕೇಂದ್ರದಲ್ಲಿನ ಸಪ್ತಗಿರಿ ವಿದ್ಯಾಸಂಸ್ಥೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಗ್ಗೆ 8.30ಕ್ಕೆ ರಾಷ್ಟ್ರ ಧ್ವಜ, ನಾಡಧ್ವಜ ಮತ್ತು ಪರಿಷತ್‌ನ ಧ್ವಜಾರೋಹಣವನ್ನು ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ್‌ ಕೆಂಪರಾಜ್‌, ತಾಲೂಕು ಅಧ್ಯಕ್ಷರಿಂದ ನೆರವೇರಿಸುವರು ಎಂದರು. ನಂತರ ಬಸ್‌ ನಿಲ್ದಾಣ ರಸ್ತೆ ಮೂಲಕ ರಥ ಬೀದಿಯಲ್ಲಿ ಸಮ್ಮೇಳನಾಧ್ಯಕ್ಷ ಎಂ.ಶ್ರೀರಾಮರೆಡ್ಡಿ ಅವರನ್ನು ಡೊಳ್ಳು ಕುಣಿತ ವಾದ್ಯಗೋಷ್ಠಿಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ಸಪ್ತಗಿರಿ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ವೇದಿಕೆಗೆ ಕರೆ ತರಲಾಗುತ್ತದೆ ಎಂದು ಹೇಳಿದರು. ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅಧ್ಯಕ್ಷತೆ ವಹಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿ ಲೇಖಕಿ ಡಾ.ಪದ್ಮಿನಿ ನಾಗರಾಜ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಡಾ.ವೈ.ವಿ.ವೆಂಕಟಾಚಲ, ಸಂಸದ ಎಸ್‌.ಮುನಿಸ್ವಾಮಿ, ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ, ಸಪ್ತಗಿರಿ ಶಾಲೆಯ ಆಡಳಿತಾಧಿಕಾರಿ ವೆಂಕಟೇಶ್‌, ಜಿಪಂ ಸದಸ್ಯ ಗೋವಿಂದಸ್ವಾಮಿ, ಮೇಕಲ ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಕೆ.ಎಂ.ನರೇಶ್‌, ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷ ರಾಜಣ್ಣ, ತಾಪಂ ಸದಸ್ಯ ಸರಸಿಂಹಯ್ಯ, ಪ್ರಭಾರ ಇಒ ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ಮೋಹನ್‌ ಕುಮಾರ್‌, ಗಣ್ಯರು ಭಾಗವಹಿಸಲಿದ್ದಾರೆ. ಗೋಷ್ಠಿಯಲ್ಲಿ ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಸಮ್ಮೇಳನಾಧ್ಯಕ್ಷರ ಬದಕು ಸಾಧನೆಗಳ ಕರಿತ ವಿಷಯವನ್ನು ಮಂಡಿಸುವರು. ಸಮಾರೋಪ ಸಮಾರಂಭಕ್ಕೆ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಧ್ಯಕ್ಷತೆ ವಹಿಸುವರು, ಎಂಎಲ್ಸಿ ಆರ್‌.ಚೌಡರೆಡ್ಡಿ, ಜಿಪಂ ಸದಸ್ಯ ರತ್ನಮ್ಮ ಗಣೇಶ್‌, ಎಂ.ವಿ.ಶ್ರೀನಿವಾಸ್‌, ತಾಪಂ ಉಪಾಧ್ಯಕ್ಷೆ ಮಂಜುಳಾ ರಾಮಚಂದ್ರೇಗೌಡ, ಪ್ರೊ.ಮುನಿರತ್ನಪ್ಪ ಸೇರಿ ಇತರೆ ಗಣ್ಯರು ಭಾಗವಹಿಸುತ್ತಾರೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next