Advertisement

ಕಾವೇರಿಗಾಗಿ ಇಂದು ರಾಜಭವನಕ್ಕೆ ಮುತ್ತಿಗೆ

06:30 AM Apr 12, 2018 | Team Udayavani |

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಒತ್ತಡಕ್ಕೆ
ಮಣಿಯಬಾರದು ಎಂದು ಆಗ್ರಹಿಸಿರುವ ಕನ್ನಡ ಚಳವಳಿ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌, ರಾಜ್ಯದ ಹಿತ ಕಾಯುವಲ್ಲಿ
ವಿಫ‌ಲರಾಗಿರುವ ರಾಜ್ಯದ ಸಂಸದರು ಹಾಗೂ ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಗುರುವಾರ “ರಾಜಭವನಕ್ಕೆ
ಮುತ್ತಿಗೆ’ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆಈಗಾಗಲೇತಮಿಳುನಾಡಿನ
ಸಂಸದರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬದಟಛಿತೆ ತೋರಿದ್ದಾರೆ. ಆದರೆ ನಮ್ಮ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಚಾರದಲ್ಲಿ ಮಾತನಾಡುತ್ತಿಲ್ಲ. ಕಾವೇರಿ ಉಳಿಸಿಕೊಳ್ಳುವ ಇಚ್ಛಾಶಕ್ತಿ ನಮ್ಮ ಸಂಸದರಿಗೆ ಮತ್ತು ಕೇಂದ್ರ ಸಚಿವರಿಗೆ ಇದ್ದರೆ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡಿನ ನಡೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಿದೆ. ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರದ ಮಾತಿಗೂ ಮನ್ನಣೆ ನೀಡದೆ ಮೊಂಡಾಟ ತೋರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಅಪಾಯಕಾರಿ.
– ಶಿವರಾಮೇಗೌಡ, ಕರವೇ ಮುಖಂಡ.

ಮಹಾದಾಯಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ನಾಯಕರು ಮಾತನಾಡುವುದಿಲ್ಲ. ಅವರಿಗೆ ಕನ್ನಡ
ನೆಲ, ಜಲದ ಬಗ್ಗೆ ಕಾಳಜಿ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಕನ್ನಡಪರ ಹೋರಾಟಗಾರನ್ನು ಗೆಲ್ಲಿಸಬೇಕು.

ವಾಟಾಳ್‌ ನಾಗರಾಜ್‌, ವಾಟಾಳ್‌ ಪಕ್ಷದ ನಾಯಕ

ಕಾವೇರಿ ಸಮಸ್ಯೆ ಕುರಿತಂತೆ ಗುರುವಾರ ಕರ್ನಾಟಕ ಬಂದ್‌ಗೆ ಕರೆ ಕೊಡಲಾಗಿತ್ತು. ಆದರೆ,ಸುಪ್ರೀಂಕೋರ್ಟ್‌ ತೀರ್ಪು ಕಾಯ್ದಿರಿಸಿದ ಹಿನ್ನೆಲೆಯಲ್ಲಿ ಬಂದ್‌ ಮುಂದೂಡಲಾಗಿದೆ.
– ಸಾ.ರಾ.ಗೋವಿಂದು, ಅಧ್ಯಕ್ಷರು,ಫಿಲ್ಮ್ಚೇಂಬರ್‌

Advertisement

ಇಲ್ಲಿ ನಮಗೇ ನೀರಿಲ್ಲವೆಂದ ಮೇಲೆ, ಅಲ್ಲಿಗೆ ಹೇಗೆ ತಾನೆ ಬಿಡಬೇಕು? ಈ ವಿಷಯವಾಗಿ, ಎಷ್ಟೇ ಪ್ರತಿಭಟನೆ, ಹೋರಾಟ ಮಾಡಿದರೂ ಪ್ರಯೋಜನವಿಲ್ಲ. ಎರಡು ಸರ್ಕಾರಗಳು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು.
– ನೆನಪಿರಲಿ ಪ್ರೇಮ್‌,ನಟ

ಕಾವೇರಿ ನೀರನ್ನು ಕನ್ನಡಿಗರು ಕೊಡುತ್ತಲೇ ಬಂದಿದ್ದಾರೆ. ಇರುವಷ್ಟು ನೀರು ಕೊಟ್ಟರೂ ಅವರಿಗೆ ಸಾಲುತ್ತಿಲ್ಲವೆಂದರೆ ಹೇಗೆ?
ನಮಗಿಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರೆ, ಅವರಿಗೆ ಹೇಗೆ ಕೊಡುವುದು? ಇದು ನಮ್ಮಿಬ್ಬರ ನಡುವಿನ ಸಮಸ್ಯೆ. ಮೂರನೆಯವರು ನ್ಯಾಯ ಹೇಳುವುದು ಸರಿಯಲ್ಲ.

– ದುನಿಯಾ ವಿಜಿ, ನಟ

ರಜನಿಕಾಂತ್‌ ಮತ್ತು ಕಮಲ್‌ ಹಾಸನ್‌ ತಮ್ಮ ಸ್ವಾರ್ಥಕ್ಕಾಗಿ ಕನ್ನಡಿಗರನ್ನು ಮತ್ತು ಕಾವೇರಿ ವಿಚಾರವನ್ನು ಬಳಕೆ 
ಮಾಡಿಕೊಳ್ಳುತ್ತಿದ್ದಾರೆ. ಈ ಧೋರಣೆಯನ್ನು ಅವರು ಮೊದಲು ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ನಟರ ಚಿತ್ರಗಳನ್ನು ಕನ್ನಡ ನಾಡಿನಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ.

– ಪ್ರವೀಣ್‌ ಶೆಟ್ಟಿ, ಕರವೇ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next