Advertisement

ದ.ಕ.,ಉಡುಪಿ ಪ್ರವಾಹ ಪೀಡಿತ ಜಿಲ್ಲೆ ಘೋಷಣೆ

01:56 AM Aug 11, 2019 | Sriram |

ಮಂಗಳೂರು: ಕರಾವಳಿಯಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳು ಎಂದು ರಾಜ್ಯ ಸರಕಾರ ಶನಿವಾರ ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿದ್ದು, ಚಾರ್ಮಾಡಿ, ಶಿರಾಡಿ ಘಾಟಿ ರಸ್ತೆ ಮುಚ್ಚಲಾಗಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು, ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Advertisement

ಇಬ್ಬರ ಸಾವು
ದಕ್ಷಿಣ ಕನ್ನಡದಾದ್ಯಂತ ಶನಿವಾರವೂ ಭಾರೀ ಮಳೆ ಮುಂದುವರಿದಿತ್ತು. ಬೆದ್ರಾಳ ಹೊಳೆಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದು, ಅವರನ್ನು ಬೆಟ್ಟಂಪಾಡಿ ನಿವಾಸಿ ಜನಾರ್ದನ ಎಂದು ಗುರುತಿಸಲಾಗಿದೆ. ವಳಚ್ಚಿಲ್‌ ಮಸೀದಿ ಬಳಿ ನೀರಿನಿಂದ ತುಂಬಿ ಹೋಗಿದ್ದ ತೋಡಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದ್ದು, ಅವರನ್ನು ರಝಾಕ್‌ ಎಂದು ಗುರುತಿಸಲಾಗಿದೆ.

ಮಂಗಳೂರು ನಗರದಲ್ಲಿ ಶನಿವಾರ ಮಳೆ ಆರ್ಭಟ ಜೋರಾಗಿತ್ತು. ಭಾರೀ ಮಳೆಯಿಂದಾಗಿ 45 ವರ್ಷಗಳ ಬಳಿಕ ಮಂಗಳೂರಿನ ದಕ್ಕೆಗೆ ನೀರು ನುಗ್ಗಿತ್ತು. ಜಪ್ಪು, ಜಪ್ಪಿನಮೊಗರು, ಕುಡಾ³ಡಿ, ಕಡೆಕಾರು ಮತ್ತು ಸುತ್ತಮುತ್ತಲ ಪ್ರದೇಶ ದ್ವೀಪದಂತಾಗಿತ್ತು.

ಕಂದಮ್ಮಗೆ ರಕ್ಷಣೆಯ ಜೋಗುಳ
ನೆರೆಗೆ ನಲುಗಿದ ಚಾರ್ಮಾಡಿಯ ಹೊಸಮಠ ಸೇತುವೆ ಕೊಚ್ಚಿ ಹೋಗಿದ್ದರಿಂದ ಕಂದಮ್ಮ ಮತ್ತು ಗರ್ಭಿಣಿಯನ್ನು ಎನ್‌ಡಿಆರ್‌ಎಫ್‌ ತಂಡ ಶನಿವಾರ ರಕ್ಷಿಸಿದೆ. ಪ್ರವಾಹದಲ್ಲಿ 85 ಜನರು ಸಿಲುಕಿಕೊಂಡಿದ್ದರು. ತಂಡದ ಸುರಕ್ಷಿತ ಕಾರ್ಯಾಚರಣೆಯಿಂದ ಇಬ್ಬರು ಗರ್ಭಿಣಿ, ಎರಡು ಹಸುಗೂಸುಗಳನ್ನು ಹಗ್ಗದ ಮೂಲಕವೇ ದಡ ತಲುಪಿಸಲಾಯಿತು. ಇವರಲ್ಲಿ ಒಬ್ಟಾಕೆ ಗರ್ಭಿಣಿಗೆ ರವಿವಾರ (ಆ.11) ವೈದ್ಯರು ಡೇಟ್‌ ನೀಡಿದ್ದರು ಎಂದು ತಿಳಿದು ಬಂದಿದೆ. ಶನಿವಾರ ಬಂಟ್ವಾಳ ತಾಲೂಕಿನಲ್ಲಿಯೂ ಭಾರೀ ಮಳೆಯಾಗಿದ್ದು, ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಅವರ ಮನೆಯನ್ನು ನೆರೆ ಆವರಿಸಿತ್ತು. ಅವರನ್ನು ಪಾರು ಮಾಡಲಾಗಿದ್ದು, ಅವರು ಸದ್ಯ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಪಲ್ಗುಣಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಮನೆಗಳನ್ನು ಸ್ಥಳಾಂತರಿಸಲಾಗಿದೆ.

ಎಲ್ಲೆಲ್ಲಿ ಎಷ್ಟು ಮಳೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಎಂಡಿಸಿ) ನೀಡಿದ ಮಾಹಿತಿಯಂತೆ ಶನಿವಾರ ರಾತ್ರಿ 8 ಗಂಟೆ ವೇಳೆಗೆ ಬಡಕಜೆಕಾರು-313.5 ಮಿ.ಮೀ., ಅಮಾrಡಿ 55.6, ವಿಟ್ಲಪಟ್ನೂರು 80.5, ಕೇಪು 91.5, ಇರಾ 79.5, ಬಾಳ್ತಿಲ 65.5, ಪಾಣೆಮಂಗಳೂರು 69, ಸಾಲೆತ್ತೂರು 85, ಪೆರಾಜೆ 78, ಬೆಳ್ತಂಗಡಿ 76, ಕೊಯ್ಯೂರು 39.5, ಇಂದಬೆಟ್ಟು 133.5, ಕಲ್ಮಂಜ 91, ಲಾೖಲ 79.5, ಮಲವಂತಿಗೆ 116, ಮುಂಡಾಜೆ 100, ಉಜಿರೆ 87, ಧರ್ಮಸ್ಥಳ 58, ತಣ್ಣೀರುಪಂತ 57, ಚಾರ್ಮಾಡಿ 88.5, ಪುದುವೆಟ್ಟು 80, ಅಳದಂಗಡಿ 89.5, ಮಂಗಳೂರು 35, ಅಡ್ಯಾರು 93.5, ಗಂಜಿಮಠ 55, ನೀರುಮಾರ್ಗ 77, ಮುಚ್ಚಾರು 60, ಕಿನ್ಯಾ 71.5, ಪಾವೂರು 80.5, ಹೊಸಬೆಟ್ಟು 84.8, ಪುತ್ತಿಗೆ 90, ಕಿನ್ನಿಗೋಳಿ 66.5, ಪುತ್ತೂರು 91, ಬೆಳಂದೂರು 77, ಕಾಣಿಯೂರು 73, ಆರ್ಯಾಪು 71, ಬಡಗನ್ನೂರು 91, ಬಲಾ°ಡು 72.5, ಪಾಣಾಜೆ 81, ಸುಳ್ಯ75.5, ಜಾಲೂÕರು 91 ಮಿ.ಮೀ. ಮಳೆಯಾದ ವರದಿಯಾಗಿದೆ.

Advertisement

ಅಧಿಕಾರಿಗಳಿಗೆ
ರಜೆ ಇಲ್ಲ
ಮುಂದಿನ ಎರಡು ದಿನ ಸಾರ್ವತ್ರಿಕ ರಜೆ ಇದ್ದರೂ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next