Advertisement
ಕೆಕೆಆರ್ ತಂಡ ಕೂಟದಲ್ಲಿ 3ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಆಡಿದ 4 ಪಂದ್ಯಗಳಲ್ಲಿ 2 ಸೋಲುಂಡಿರುವ ಕೆಕೆಆರ್ ಗೆಲುವಿನ ಅಭಿಯಾನ ಮುಂದುವರಿಸುವ ಕನಸಿನಲ್ಲಿದೆ. ರಾಜಸ್ಥಾನ್ ರಾಯಲ್ಸ್ ಒಟ್ಟು 3 ಪಂದ್ಯವನ್ನು ಆಡಿದ್ದು ಮೊದಲ ಪಂದ್ಯದಲ್ಲಿ ಸೋತದ್ದು ಬಿಟ್ಟರೆ ಉಳಿದಂತೆ ಎರಡು ಪಂದ್ಯವನ್ನು ಸತತವಾಗಿ ಗೆದ್ದಿದ್ದು ಹ್ಯಾಟ್ರಿಕ್ ನಿರೀಕ್ಷೆಯಲ್ಲಿದೆ.
ಒಟ್ಟು ಪಂದ್ಯ: 16
ರಾಜಸ್ಥಾನ್ ಗೆಲುವು: 09
ಕೋಲ್ಕತಾ ಗೆಲುವು: 06
ರದ್ದು: 01 ಅಗ್ರ ತಾರೆಯರು
ಕೋಲ್ಕತಾ: ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಸುನೀಲ್ ನಾರಾಯಣ್
ರಾಜಸ್ಥಾನ್: ಸಂಜು ಸ್ಯಾಮ್ಸನ್, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್
Related Articles
ಬಲ: ಪ್ರಚಂಡ ಫಾರ್ಮ್ನಲ್ಲಿರುವ ಆಲ್‌ರೌಂಡರ್ ಆ್ಯಂಡ್ರೆ ರಸೆಲ್
ದೌರ್ಬಲ್ಯ: ಬೌಲಿಂಗ್‌ನಲ್ಲಿ ಪ್ರಬಲ ವೇಗಿಗಳಿಲ್ಲ. ನಾಗರಕೋಟಿ ಗಾಯಗೊಂಡಿದ್ದಾರೆ.
ರಾಜಸ್ಥಾನ್
ಬಲ: ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ.
ದೌರ್ಬಲ್ಯ: ಸ್ಟಾರ್ ಆಲ್‌ರೌಂಡರ್ ಸ್ಟೋಕ್ಸ್‌ರಿಂದ ರನ್ ಹರಿಯುತ್ತಿಲ್ಲ.
Advertisement
ಅಂಕಣ ಹೇಗಿದೆ?ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ 160 ರನ್ ಅತ್ಯುತ್ತಮ ಸ್ಕೋರ್. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಅನುಕೂಲ ಹೆಚ್ಚು. ಸ್ಪಿನ್ನರ್‌ಗಳಿಗಿಂತ ವೇಗಿಗಳೇ ಈ ಪಿಚ್‌ನಲ್ಲಿ ಹೆಚ್ಚು ಯಶಸ್ಸು ಸಾಧಿಸಬಹುದು. ಸ್ಥಳ: ಜೈಪುರ, ಸಮಯ: ರಾತ್ರಿ 8.00ಕ್ಕೆ
ನೇರ ಪ್ರಸಾರ: ಸ್ಟಾರ್ ನ್ಪೋರ್ಟ್ಸ್ 1, ಸುವರ್ಣ ಪ್ಲಸ್ (ಕನ್ನಡ)