Advertisement

ಪ್ರೊ ಕಬಡ್ಡಿ ಎಲಿಮಿನೇಟರ್‌ ಕಾದಾಟ: ಇಂದು ಬೆಂಗಳೂರು ಬುಲ್ಸ್‌ಗೆ ಗುಜರಾತ್‌ ಜೈಂಟ್ಸ್‌ ಸವಾಲು

11:18 PM Feb 20, 2022 | Team Udayavani |

ಬೆಂಗಳೂರು: ಪ್ರೊ ಕಬಡ್ಡಿ ಲೀಗ್‌ ಮುಖಾಮುಖಿ ಅಂತ್ಯ ಕಂಡಿದೆ. ಸೋಮವಾರ ಎರಡು ಎಲಿಮಿನೇಟರ್‌ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಯುಪಿ ಯೋಧಾ-ಪುಣೇರಿ ಪಲ್ಟಾನ್‌, ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌-ಗುಜರಾತ್‌ ಜೈಂಟ್ಸ್‌ ಸೆಣಸಲಿವೆ..

Advertisement

ಬುಲ್ಸ್‌ಗೆ ಪವನ್‌ ಬಲ
2018ರ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ನಾಯಕ ಪವನ್‌ ಸೆಹ್ರಾವತ್‌ ಅವರನ್ನು ನೆಚ್ಚಿಕೊಂಡಿದೆ. ಅವರ ರೈಡಿಂಗ್‌ ಮೇಲೆ ಪಂದ್ಯದ ಫ‌ಲಿತಾಂಶ ನಿರ್ಣಾಯವಾಗಿದೆ. ಪ್ರತೀ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡಿ ಅಂಕಗಳನ್ನು ಬಾಚುತ್ತಿದ್ದುದ್ದು ಇದಕ್ಕೆ ಉತ್ತಮ ನಿದರ್ಶನ. ಮತ್ತೋರ್ವ ರೈಡರ್‌ ಚಂದ್ರನ್‌ ರಂಜಿತ್‌ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರದಿರುವುದು ತಂಡಕ್ಕೆ ದೊಡ್ಡ ಹಿನ್ನೆಡೆಯಾಗಿದೆ. ಆದರೆ ಡಿಫೆಂಡಿಂಗ್‌ ವಿಭಾಗದಲ್ಲಿ ಯುವ ಆಟಗಾರರಾದ ಸೌರಭ್‌ ಮತ್ತು ಅಮಾನ್‌ ಬಲಿಷ್ಠವಾಗಿ ಗೋಚರಿಸಿದ್ದಾರೆ, ಇವರಿಗೆ ಮತ್ತೋರ್ವ ಆಲ್‌ರೌಂಡರ್‌ ಭರತ್‌ ಉತ್ತಮ ಸಾಥ್‌ ನೀಡಿದರೆ ಬುಲ್ಸ್‌ ಮೇಲುಗೈ ಸಾಧಿಸುವುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ:ಭಾರತದ ಅವಳಿ ವೈಟ್‌ವಾಶ್‌ ಪರಾಕ್ರಮ

ಗುಜರಾತ್‌ ಸಮತೋಲಿತ
ಆರಂಭಿಕ ಪಂದ್ಯದಲ್ಲಿ ಸತತವಾಗಿ ಎಡವುತ್ತಿದ್ದ ಗುಜರಾತ್‌ ಸೂಪರ್‌ ಜೈಂಟ್ಸ್‌ ಬಳಿಕ ಸಂಘಟಿತ ಹೋರಾಟ ನೀಡುವ ಮೂಲಕ ಪ್ಲೇ ಆಫ್ ಹಂತ ತಲುಪುವಲ್ಲಿ ಯಶಸ್ವಿಯಾಯಿತು. ತಂಡ ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಸಮತೋಲನ ಹೊದಿದೆ. ರೈಡಿಂಗ್‌ನಲ್ಲಿ ಬುಲ್ಸ್‌ ತಂಡದ ಮಾಜಿ ಆಟಗಾರ ಅಜಯ್‌ ಕುಮಾರ್‌, ಮಹೇಂದರ್‌ ರಜಪೂತ್‌, ರಾಕೇಶ್‌ ಉತ್ತಮ ಲಯದಲ್ಲಿದ್ದಾರೆ. ರಕ್ಷಣಾ ವಿಭಾಗದಲ್ಲಿ ನಾಯಕ ಸುನೀಲ್‌ ಕುಮಾರ್‌ ಹಾಗೂ ಕನ್ನಡಿಗ ಗಿರೀಶ್‌ ಮಾರುತಿ ಎದುರಾಳಿಗಳನ್ನು ಕಟ್ಟಿಹಾಕಬಲ್ಲರು.

ಗೆದ್ದ ತಂಡ ಸೆಮಿಫೈನಲ್‌ಗೆ
ಎಲಿಮಿನೇಟೆರ್‌ ಪಂದ್ಯಗಳಲ್ಲಿ ಗೆದ್ದ ತಂಡಗಳು ಸೆಮಿಫೈನಲ್‌ಗೆ ತೇರ್ಗಡೆಯಾಗಲಿವೆ. ಅದರಂತೆ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ತಂಡ ಪಾಟ್ನಾ ವಿರುದ್ಧ, ದ್ವಿತೀಯ ಎಲಿಮಿನೇಟರ್‌ ವಿಜೇತ ತಂಡ ದಬಾಂಗ್‌ ದಿಲ್ಲಿ ಜತೆ ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ಪಾಟ್ನಾ, ದಿಲ್ಲಿ ನೇರವಾಗಿ ಸೆಮಿಫೈನಲ್‌ ಪ್ರವೇಶಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next