Advertisement

ಇಂದು “ಲವ್‌ ಮಾಕ್ಟೇಲ್‌’ವಿಡಿಯೋ ಸಾಂಗ್‌ ರಿಲೀಸ್‌

10:12 AM Jan 12, 2020 | Lakshmi GovindaRaj |

ಇದೇ ಮೊದಲ ಬಾರಿಗೆ ನಟನೆಯ ಜೊತೆ ನಿರ್ದೇಶನಕ್ಕಿಳಿದಿರುವ ಹೀರೋ “ಮದರಂಗಿ’ ಕೃಷ್ಣ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ “ಲವ್‌ ಮಾಕ್ಟೇಲ್‌’ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿದ್ದು, ಕೃಷ್ಣ ಶನಿವಾರ (ಇಂದು) ತಮ್ಮ ಚಿತ್ರದ ವಿಡಿಯೋ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. “ಲವ್‌ ಯು ಚಿನ್ನ…’ ಎಂಬ ಹಾಡನ್ನು ರಾಘವೇಂದ್ರ ಕಾಮತ್‌ ಬರೆದಿದ್ದಾರೆ. ರಘು ದೀಕ್ಷಿತ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

Advertisement

ಶ್ರುತಿ ಹಾಗು ನಕುಲ್‌ ಅಭ್ಯಯಂಕರ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು, ಈ ಹಾಡನ್ನು ಬಿಡುಗಡೆ ಮಾಡಿದ ಬಳಿಕ ಆಡಿಯೋ ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು. ಇಷ್ಟರಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ರೂಪುರೇಷೆ ನಡೆಸುತ್ತಿರುವ ಕೃಷ್ಣ, ವಿಶೇಷ ವ್ಯಕ್ತಿಯೊಬ್ಬರಿಂದ ಹಾಡುಗಳನ್ನು ಬಿಡುಗಡೆ ಮಾಡಿಸ ಲಿದ್ದಾರಂತೆ. ಅದು ಯಾರು ಎಂಬುದು ಸಸ್ಪೆನ್ಸ್‌ ಆಗಿದ್ದು, ಆಡಿಯೋ ಕಾರ್ಯಕ್ರಮದ ದಿನದಂದೇ ಗೊತ್ತಾಗಲಿದೆ ಎನ್ನುತ್ತಾರೆ ಅವರು.

ಈಗಾಗಲೇ ಚಿತ್ರದ ಟ್ರೇಲರ್‌ಗೆ ಸುದೀಪ್‌ ಅವರು ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ. ಆ ವಾಯ್ಸಗೆ ಸಖತ್‌ ರೆಸ್ಪಾನ್ಸ್‌ ಕೂಡ ಸಿಕ್ಕಿದೆ. ತಮ್ಮ ಚಿತ್ರದ ಬಗ್ಗೆ ಹೇಳುವ “ಮದರಂಗಿ’ ಕೃಷ್ಣ, “ಇದೊಂದು ಎಮೋಷನಲ್‌ ಲವ್‌ಸ್ಟೋರಿಯಾಗಿದ್ದು, ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ಕೂಡ ಇದೆ. ನಾಯಕನ ಬದುಕಿನಲ್ಲಿ ಮೂರು ಹಂತಗಳು ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ ಕಥೆ ಮೂಲಕ ನಾಯಕನ ಲೈಫ್ ಕೂಡ ಬದಲಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ಹಲವು ವಿಶೇಷತೆಗಳಿದ್ದು, ಅವೆಲ್ಲವನ್ನೂ ಚಿತ್ರಮಂದಿರದಲ್ಲೇ ನೋಡಬೇಕು’ ಎಂದಷ್ಟೇ ಹೇಳುತ್ತಾರೆ ಅವರು.

ಅಂದಹಾಗೆ, ಜಾಕ್‌ಮಂಜು ಚಿತ್ರ ವಿತರಣೆ ಮಾಡುತ್ತಿದ್ದು, ಜನವರಿ ಅಂತ್ಯದಲ್ಲಿ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಸುಮಾರು 100 ಪ್ಲಸ್‌ ಥಿಯೇಟರ್‌ಗಳಲ್ಲಿ “ಲವ್‌ ಮಾಕ್ಟೇಲ್‌’ ಬಿಡು ಗಡೆ ಮಾಡುವ ಯೋಚನೆ ನಿರ್ದೇಶಕರದ್ದು. ಚಿತ್ರಕ್ಕೆ ಯು/ಎ ಸರ್ಟಿ ಪಿಕೆಟ್‌ ಸಿಕ್ಕಿದ್ದು, ಚಿತ್ರದಲ್ಲಿ ಮಿಲನ ನಾಗರಾಜ್‌, ಅಮೃತ ಅಯ್ಯಂಗಾರ್‌, ರಚನಾ ನಾಯಕಿಯರು. ಉಳಿದಂತೆ ಅಭಿ ಇತರರು ನಟಿಸಿದ್ದಾರೆ. ಚಿತ್ರಕ್ಕೆ ಶ್ರೀ ಕ್ರೇಜಿಮೈಂಡ್ಸ್‌ ಸಂಕಲ ನದ ಜೊತೆಯಲ್ಲಿ ಛಾಯಾ ಗ್ರಹಣವನ್ನೂ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next