Advertisement
ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಣcಪ್ಪಾಡಿ ಗ್ರಾಮದ ಸಾರಕರೆಯಲ್ಲಿರುವ ಕಿಂಡಿ ಅಣೆಕಟ್ಟು ನಿರ್ವಹಣೆ ಕೊರತೆಯಿಂದ ಸಂಪೂರ್ಣವಾಗಿ ನೆಲಕಚ್ಚುವ ಸ್ಥಿತಿಯಲ್ಲಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ ನಿರ್ಮಾಣಗೊಂಡ ಈ ಕಿಂಡಿ ಅಣೆಕಟ್ಟು ಸೂಕ್ತ ನಿರ್ವಹಣೆಯ ಕೊರತೆಯಿಂದ ಉಪಯೋಗ ಶೂನ್ಯವಾಗಿದೆ. ಮಾತ್ರವಲ್ಲದೆ ಸಂಪೂರ್ಣ ನಾದುರಸ್ತಿಯಲ್ಲಿದ್ದು ಕುಸಿದು ಬೀಳುವ ಹಂತದಲ್ಲಿದೆ.
ಗ್ರಾಮೀಣ ಭಾಗದ ನೀರಿನ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ನಿರ್ಮಾಣ ಮಾಡಲಾದ ಇಂತಹ ಅಣೆಕಟ್ಟುಗಳ ಸ್ಥಿತಿಯನ್ನು ಸುಧಾರಿಸಲು ಇಲಾಖೆ ಗಮನಹರಿಸಬೇಕಾಗಿದೆ. ಸರಕಾರದಿಂದ ಅನುದಾನ ಬರುತ್ತದೆ. ಅದನ್ನು ಬಳಸಿ ನಿರ್ಮಾಣ ಮಾಡಿದರೆ ಯೋಜನೆಯ ಉದ್ದೇಶ ಈಡೇರುವುದಿಲ್ಲ. ಕಿಂಡಿ ಅಣೆಕಟ್ಟಿನ ಗುಣಮಟ್ಟ ಮತ್ತು ಪ್ರಯೋಜನಗಳ ಕುರಿತು ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದೆ.
Related Articles
ಈ ಭಾಗದ ಜಲಸಂರಕ್ಷಣೆಯ ಮೂಲವಾಗಿದ್ದ ಈ ಕಿಂಡಿ ಅಣೆಕಟ್ಟು ಕೃಷಿಕರಿಗೆ ವರದಾನವಾಗಿತ್ತು. ಈ ಭಾಗದ ಅನೇಕ ಕೃಷಿಕರಿಗೆ ನೀರೊದಗಿಸುತ್ತಿತ್ತು. ಸುತ್ತಮುತ್ತಲಿನ ಕೆರೆ, ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕಾರಣವಾಗಿದ್ದ ಈ ಅಣೆಕಟ್ಟಿನ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತಿದೆ.
Advertisement
ಗಮನ ಹರಿಸಲಿಅಂತರ್ಜಲ ಹೆಚ್ಚಳದ ಜತೆಗೆ ಈ ಭಾಗದ ಕೃಷಿಕರಿಗೆ ಬಲು ಉಪಯೋಗಕಾರಿಯಾಗಿದ್ದ ಕಿಂಡಿ ಅಣೆಕಟ್ಟು ದುರಸ್ತಿ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.
– ಕರುಣಾಕರ ಸಾರಕರೆ ಸ್ಥಳೀಯರು ಗಮನಕ್ಕೆ ತರಲಾಗಿದೆ
ಪುಣಪ್ಪಾಡಿ ಗ್ರಾಮದ ಸಾರಕರೆ ಕಿಂಡಿ ಅಣೆಕಟ್ಟು ಸಂಪೂರ್ಣವಾಗಿ ಕುಸಿದು ಬೀಳುವ ಹಂತದಲ್ಲಿದೆ. ಕಾಮಗಾರಿ ನಡೆಸುವಾಗ ಗುಣಮಟ್ಟದ ಕುರಿತು ಗಮನಹರಿಸದೇ ಇದ್ದುದೇ ಈ ರೀತಿಯ ಅವ್ಯವಸ್ಥೆಗೆ ಕಾರಣವಾಗಿದೆ. ಈ ಕುರಿತು ಜಲಾನಯನ ಇಲಾಖೆ, ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತರಲಾಗಿದೆ.
– ಗಿರಿಶಂಕರ ಸುಲಾಯ ಸವಣೂರು ಗ್ರಾ.ಪಂ. ಸದಸ್ಯರು – ಪ್ರವೀಣ್ ಚೆನ್ನಾವರ