Advertisement

ಅರಳುವ ಕನಸುಗಳನ್ನು ಚಿವುಟದಿರಿ

09:10 PM Jun 11, 2019 | mahesh |

ಬಾಲ ಕಾರ್ಮಿಕತ್ವವೂ ಇಂದು ಜಗತ್ತಿನಾದ್ಯಂತ ಆವರಿಸಿರುವ ಪಿಡುಗು. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ಹಣಕ್ಕಾಗಿ ದುಡಿಯುತ್ತಿದ್ದರೆ ಅದು ಬಾಲ ಕಾರ್ಮಿಕತ್ವ ಎಂದು ಕರೆ ಸಿ ಕೊಳ್ಳುತ್ತದೆ. ಬಾಲ್ಯಾವಸ್ಥೆಯ ಲ್ಲಿ ಮಕ್ಕಳನ್ನು ದುಡಿಸುವುದು ಅಥವಾ ದುಡಿಸಿಕೊಳ್ಳವುದು ಕಾನೂನು ಪ್ರಕಾರ ಅಪರಾಧ. ಇದನ್ನು ಗಂಭೀರವಾಗಿ ಪರಿಗಣಿಸಿದ ಇಂಟರ್‌ ನ್ಯಾಶನಲ್‌ ಲೇಬರ್‌ ಆರ್ಗನೈಸೇಶನ್‌ (ಐಎಲ್‌ಒ) ಬಾಲ ಕಾರ್ಮಿಕ ಪ್ರಕರಣಗಳನ್ನು ಜಾಗತಿಕ ಮಟ್ಟದಲ್ಲಿ ಕೊನೆಗೊಳಿಸಲು ಜೂ. 12ರಂದು ವಿಶ್ವ ಬಾಲ ಕಾರ್ಮಿಕ ವಿರೋಧಿ ನೀತಿಯನ್ನು ತಂದಿತು. ಅನಿವಾರ್ಯ ಕಾರಣಗಳಿಂದ ಬಾಲ ಕಾರ್ಮಿಕರಾಗಬೇಕಾದ ಮಕ್ಕಳನ್ನು ರಕ್ಷಿಸಿ ಅವರಿಗೆ ಉತ್ತಮ ಭವಿಷ್ಯ ರೂಪಿಸುವುದು ಮೂಲ ಉದ್ದೇಶ.

Advertisement

ಜಾಗೃತಿ ದಿನ
ಶಿಕ್ಷಣದಿಂದ ವಂಚಿತರಾಗಿ, ಹಿಂಸಾತ್ಮಕವಾಗಿ ದುಡಿಸಿಕೊಳ್ಳುತ್ತಿರುವ ಬಾಲ ಕಾರ್ಮಿಕರನ್ನು ರಕ್ಷಿಸಿ, ಅವ ರಿಗೆ ಶಿಕ್ಷಣ ನೀಡ ಬೇಕು ಎಂದು ಇಂಟರ್‌ ನ್ಯಾಶ ನಲ್‌ ಲೇಬರ್‌ ಆರ್ಗನೈಸೇಶನ್‌ (ಐಎಲ…ಒ) 2002ರಲ್ಲಿ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಯನ್ನು ಮುನ್ನೆಲೆಗೆ ತಂದಿತು. ಬಾಲ ಕಾರ್ಮಿಕತ್ವದ ಕರಾಳ ಮುಖವನ್ನು ಜಾಗತಿಕ ಮಟ್ಟದಲ್ಲಿ ತೊಡೆದು ಹಾಕಲು ಬೇಕಾದ ಪ್ರಯತ್ನಗಳನ್ನು ಮಾಡಲು ಈ ಸಂಸ್ಥೆ ಪ್ರಾರಂಭಿಸಿತು. ಅನಂತರ ಪ್ರತಿ ವರ್ಷ ಜೂ. 12ರಂದು ಬಾಲ ಕಾರ್ಮಿಕರ ವಿರೋಧಿ ದಿನವನ್ನು ಜಾಗೃತಿ ದಿನವನ್ನಾಗಿಆಚರಿಸಲಾಯಿತು.

2015ರಲ್ಲಿ ಅಳವಡಿಸಿಕೊಂಡ ಸಸ್ಟೇ ನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್ ನಲ್ಲಿ (SDGS)ನಂತೆ ಬಲ ವಂತದ ಕಾರ್ಮಿಕರನ್ನು ನಿರ್ಮೂಲನೆ ಮಾಡಲು, ಆಧುನಿಕ ಗುಲಾಮಗಿರಿ ಮತ್ತು ಮಾನವ ಕಳ್ಳಸಾಗಣೆ ಅಂತ್ಯಗೊಳಿಸಲು ತಕ್ಷಣ ಪರಿಣಾಮ ಕಾರಿ ಕ್ರಮಗಳನ್ನು ಕೈಗೊಳ್ಳಲು ಮತ್ತು ಬಾಲ ಸೈನಿಕರ ಬಳಕೆಯನ್ನು ನಿಷೇಧಿಸಲು ಕರೆ ಕೊಟ್ಟಿತು. 2025ರೊಳಗೆ ಬಾಲ ಕಾರ್ಮಿ ಕತ್ವವನ್ನು ಸಂಪೂರ್ಣವಾಗಿ ನಿಷೇಧಿಸುವ ಆಶಯವನ್ನು ಈ ಸಂಸ್ಥೆ ಹೊಂದಿದೆ.

ಮಕ್ಕಳನ್ನು ದುಡಿಸಬೇಡಿ; ಕನಸು ಕಾಣಲು ಬಿಡಿ
ಇಂದಿಗೂ ಜಗ ತ್ತಿ ನಲ್ಲಿ 152 ಮಿಲಿ ಯನ್‌ ಬಾಲ ಕಾರ್ಮಿಕರಿದ್ದಾರೆ. ಬಾಲ ಕಾರ್ಮಿಕ ಪದ್ಧತಿಯೂ ಎಲ್ಲ ವಲಯಗಳಿಗೂ ಆವರಿಸಿದ್ದು ಪ್ರತಿ ಹತ್ತು ಬಾಲ ಕಾರ್ಮಿಕರಲ್ಲಿ ಏಳು ಮಕ್ಕಳು ಕೃಷಿಯಲ್ಲಿ ದುಡಿಯುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಅಗತ್ಯವಿದ್ದು 2019ರ ದಿನಾಚರಣೆಯನ್ನು ಮಕ್ಕಳನ್ನು ದುಡಿಸಬೇಡಿ; ಕನಸು ಕಾಣಲು ಬಿಡಿ ಎಂಬ ಥೀಮ್‌ ನೊಂದಿಗೆ ಆಚರಿಸಿ, ಕಾಳಜಿ ಮೂಡಿಸಲಾಗುತ್ತದೆ.

ಬಾಲ್ಯ ದುಡಿಯುವ ಹೊತ್ತಲ್ಲ ಬದಲಾಗಿ ಸುಂದರ ಕನಸುಗಳನ್ನು ಕಟ್ಟುವ ಹೊತ್ತು ಅದನ್ನು ಅನುಭವಿಸಲು ಅವರಿಗೆ ಎಲ್ಲ ಅವಕಾಶವಿದೆ.ಅದರಿಂದ ಅವರನ್ನು ದೂರವಿಡಬೇಡಿ ಎಂಬುದೇ ಈ ವರ್ಷದ ಧ್ಯೇಯ ವಾಕ್ಯ.

Advertisement

ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಮಾತಿದೆ. ಮಕ್ಕಳು ದೇವರ ಪ್ರತಿರೂಪ. ಅವರಲ್ಲಿ ಸರಿ ತಪ್ಪು, ನ್ಯಾಯ, ಮೋಸದ ಭಾವನೆಯಿಲ್ಲ. ಮುಗ್ಧತೆ ಮಾತ್ರ ಅಲ್ಲಿರುವುದು. ಆ ಬಾಲ್ಯವನ್ನು ಕೆಲಸದ ನೆಪಹೇಳಿ ಅವರಿಂದ ಕಿತ್ತುಕೊಳ್ಳಬೇಡಿ. ಮುಗ್ಧ ಮುಖದಲ್ಲಿ ನಗುವೊಂದು ಸದಾ ಅರಳಿರಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಬಾಂಗ್ಲಾದೇಶ ಮೊದಲ ಸ್ಥಾನ
ಬಾಲ ಕಾರ್ಮಿಕರನ್ನು ಅತೀ ಹೆಚ್ಚಾಗಿ ದುಡಿಸಿಕೊಳ್ಳುವ ದೇಶಗಳಲ್ಲಿ ಬಾಂಗ್ಲಾದೇಶ ಮೊದಲನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಶೇ. 20 ನಷ್ಟು ಬಾಲ ಕಾರ್ಮಿಕರು ಇದ್ದಾರೆ. ಭಾರತದಲ್ಲಿ ಬಾಲ ಕಾರ್ಮಿಕರನ್ನು ದುಡಿಸುವವರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 50,000 ರೂ.ಗಳವರೆಗೆ ದಂಡ ವಿಧಿಸಲಾಗುವುದು.

-  ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next