Advertisement
ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾಕಾಣಿಸಿಕೊಂಡ ಪ್ರಾರಂಭಿಕ ಹಂತದಲ್ಲಿ ದಾವಣಗೆರೆಗೆ ಫ್ರಾನ್ಸ್‌ನಿಂದ ಹಿಂತಿರುಗಿದ್ದ ವೈದ್ಯಕೀಯವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿತ್ತು.ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರಗುಣಮುಖವಾಗಿ 28 ದಿನಗಳ ಯಾವುದೇ ಪ್ರಕರಣ ಪತ್ತೆಯಾಗದ ಕಾರಣ ಕೇಂದ್ರದ ಆರೋಗ್ಯಇಲಾಖೆ ದಾವಣಗೆರೆ ಜಿಲ್ಲೆಯನ್ನು ಏ.29 ರಂದುಹಸಿರು ವಲಯಕ್ಕೆ ಸೇರಿಸಿತ್ತು.
Related Articles
Advertisement
ಆ ರೀತಿಯ ಅಘೋಷಿತಭಯದ ವಾತಾವರಣ ನಿರ್ಮಾಣವಾಗಿತ್ತು. 28ದಿನಗಳ ನಂತರ ಪತ್ತೆಯಾದ ಪ್ರಕರಣದ ಬೆನ್ನಹಿಂದೆಯೇ ಮತ್ತೂಂದು ಪ್ರಕರಣ ಪತ್ತೆಯಾಗಿದ್ದಲ್ಲದೆಮರಣವೂ ಸಂಭವಿಸಿದ್ದರಿಂದ ದಾವಣಗೆರೆ ಜನರುನಲುಗಿ ಹೋಗಿದ್ದರು.ಮೇ 3 ರಂದು ಒಂದೇ ದಿನ 21 ಜನರಲ್ಲಿಕೊರೊನಾ ಕಾಣಿಸಿಕೊಂಡ ನಂತರವಂತೂದಾವಣಗೆರೆಯ ಎಲ್ಲ ಕಡೆ ಅಘೋಷಿತ ಬಂದ್‌ನವಾತಾವರಣ ನಿರ್ಮಾಣವಾಗಿತ್ತು. ಎಲ್ಲಿ ನೋಡಿದರೂರಸ್ತೆಗಳು ಬಂದ್ ಆಗಿದ್ದವು. ಕೆಲವಾರು ರಸ್ತೆಗಳಿಗೆಮುಳ್ಳಿನ ಬೇಲಿ ಹಾಕಲಾಗಿತ್ತು.
ಕೆಲ ರಸ್ತೆಗಳಲ್ಲಿ ತಗಡಿನತಡೆಗೋಡೆಗಳನ್ನೇ ಕಟ್ಟಲಾಗಿತ್ತು.ದಾವಣಗೆರೆ ಜನರು ಅಷ್ಟೊಂದು ಭಯದಲ್ಲಿದ್ದರು.ಜಾಲಿನಗರ, ಶಿವನಗರ, ಎಸ್.ಎಂ. ಕೃಷ್ಣ ನಗರ, ಕೆಟಿಜೆನಗರ, ಬೇತೂರು ರಸ್ತೆ, ಆನೆಕೊಂಡ, ಬಸವರಾಜಪೇಟೆ,ಒಳಗೊಂಡಂತೆ ಅನೇಕ ಪ್ರದೇಶಗಳು ತಿಂಗಳುಗಟ್ಟಲೆಕಂಟೈನ್‌ಮೆಂಟ್ ಪ್ರದೇಶಗಳಾಗಿದ್ದವು. ಆ ಪ್ರದೇಶಗಳಜನರು ಅಕ್ಷರಶಃ ಬಂಧಿಯಾಗಿದ್ದರು.
ಕಂಟೈನ್‌ಮೆಂಟ್‌ಝೋನ್ ತೆರವಿಗೆ ಒತ್ತಾಯಿಸಿ ಪ್ರತಿಭಟನೆಗಳು ಸಹನಡೆದಿದ್ದವು. ಎಲ್ಲಿ ನೋಡಿದರೂ ಕಂಟೈನ್‌ಮೆಂಟ್‌ಝೋನ್ ಸಾಮಾನ್ಯ ಎನ್ನುವಂತಾಗಿತ್ತು.ಈಗಲೂ ಅದೇ ಸ್ಥಿತಿ: ಕಳೆದ ವರ್ಷಕ್ಕೆ ಹೋಲಿಕೆಮಾಡಿದಲ್ಲಿ ಜಿಲ್ಲೆಯಲ್ಲಿ ಈಗ ಗಂಭೀರ ಎನ್ನುವಪರಿಸ್ಥಿತಿ ಇದೆ.
1624 ಸಕ್ರಿಯ ಪ್ರಕರಣಗಳಿವೆ.ಕೊರೊನಾದ ಎರಡನೇ ಅಲೆ ಪ್ರಬಲವಾಗಿಅಪ್ಪಳಿಸುತ್ತಿದೆ. ಡಿ.10 ರಿಂದ ಕೊರೊನಾ ಸಂಬಂಧಿತಮರಣ ಸಂಭವಿಸಿರಲಿಲ್ಲ. ಈಗ ಮತ್ತೆ ಸಾವಿನಪ್ರಕರಣ ವರದಿ ಆಗುತ್ತಿವೆ.ರಾಜ್ಯ ಸರ್ಕಾರ ಕೊರೊನಾ ತಡೆಗಟಲು 14ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ.ಬೆಳಗ್ಗೆ 6 ರಿಂದ 10ರ ವರೆಗೆ ಮಾತ್ರ ಅವಶ್ಯಕವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ.
ಕಳೆದ ವರ್ಷದ ಲಾಕ್‌ಡೌನ್‌ನಿಂದ ಕುಸಿದಿರುವವ್ಯಾಪಾರ-ವಹಿವಾಟು ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.ಅಂದೇ ದುಡಿದು ಜೀವನ ನಡೆಸಬೇಕಾದವರ ಸ್ಥಿತಿಯಬಗ್ಗೆ ಹೇಳುವಂತೆಯೇ ಇಲ್ಲ. ಕೊರೊನಾ ಎಂಬಕಣ್ಣಿಗೆ ಕಾಣಿಸದ ವೈರಸ್ ಜನರ ಜಂಘಾಬಲವನ್ನೇಉಡುಗಿಸುತ್ತಿದೆ.
ರಾ. ರವಿಬಾಬು