Advertisement
ಸ್ಪೀಕರ್ ವಿಜಯ ಕುಮಾರ್ ಚೌಧರಿ, ಜೆಡಿಯುನ ಸಚಿವ ರಾದ ಬಿಜೇಂದ್ರ ಪ್ರಸಾದ್ ಯಾದವ್, ನರೇಂದ್ರ ನಾರಾಯಣ ಯಾದವ್, ಮಹೇಶ್ವರ ಹಝಾರಿ, ಬಿಜೆಪಿ ಸಚಿವರಾಗಿರುವ ಪ್ರಮೋದ್ ಕುಮಾರ್, ಸುರೇಶ್ ಶರ್ಮಾ, ವಿನೋದ್ ನಾರಾ ಯಣ ಝಾ, ಕೃಷ್ಣ ಕುಮಾರ್ ರಿಷಿ ಕಣದಲ್ಲಿರುವ ಪ್ರಮುಖರು. ಕೋಸಿ- ಸೀಮಾಂಚಲ ಪ್ರದೇಶದಲ್ಲಿಯೇ ಹೆಚ್ಚಿನ ಕ್ಷೇತ್ರಗಳು ಇವೆ. ಇಲ್ಲಿ ಮಾಜಿ ಸಂಸದ ಪಪ್ಪು ಯಾದವ್ ಅವರ ಜನ ಅಧಿಕಾರ್ ಪಾರ್ಟಿಯ ಛಾಯೆ ಹೆಚ್ಚಾಗಿದೆ. ಎನ್‌ಡಿಎ ಮತ್ತು ಕಾಂಗ್ರೆಸ್-ಆರ್‌ಜೆಡಿ ಮೈತ್ರಿ ಕೂಟಕ್ಕೆ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರ ಎಂಐಎಂ ಪಕ್ಷದ ಸವಾಲೂ ಎದುರಿಸಬೇಕಾಗಿದೆ. ಈ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ ಬಾಹುಳ್ಯ ಇರುವಲ್ಲಿ ಎಂಐಎಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2015ರಲ್ಲಿ ನಡೆದ ಚುನಾವಣೆ ಯಲ್ಲಿ ಎನ್‌ಡಿಎ ಆರು, ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟ 4 ಸ್ಥಾನಗಳನ್ನು ಗೆದ್ದಿದ್ದವು. ಕೊನೆಯ ಹಂತದ ಮತದಾನ ನಡೆಯುವ 78 ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರವೇ ಪ್ರಧಾನವಾಗಿರಲಿದೆ. ಈ ಪ್ರದೇಶ ದಲ್ಲಿ ಯಾದವ ಸಮುದಾಯದ ಮತಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.
ಬಿಹಾರದಲ್ಲಿ ಹೆಚ್ಚು ಪ್ರಮಾಣದ ಸೋಂಕು ಹೊಂದಿರುವ ಐದು ಜಿಲ್ಲೆಗಳಲ್ಲಿಯೂ ಶನಿವಾ ರವೇ ಹಕ್ಕು ಚಲಾವಣೆ ನಡೆಯಲಿದೆ. ಶುಕ್ರವಾರ ಪ್ರಕಟಗೊಂಡ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕೇವಲ 6,356 ಸಕ್ರಿಯ ಪ್ರಕರಣಗಳು ಇವೆ. ನ. 27ಕ್ಕೆ ಲಾಲೂ ಅರ್ಜಿ ವಿಚಾರಣೆ
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ರ ಜಾಮೀನು ಅರ್ಜಿಯ ವಿಚಾರಣೆಯನ್ನು ಝಾರ್ಖಂಡ್ ಹೈಕೋರ್ಟ್ ನ.27ರಂದು ನಡೆಸ ಲಿದೆ. ದುಮ್ಕಾ ಖಜಾನೆಯಿಂದ ಅಕ್ರಮವಾಗಿ ಹಣ ವಿಥ್‌ಡ್ರಾ ಮಾಡಿದ ಪ್ರಕರಣ ಇದಾಗಿದೆ. ಈ ಪ್ರಕರಣ ದಲ್ಲಿ ಜಾಮೀನು ಸಿಕ್ಕಿದರೆ ಆರ್‌ಜೆಡಿ ಸಂಸ್ಥಾಪಕ ಕಾರಾಗೃಹದಿಂದ ಬಿಡುಗಡೆ ಯಾಗಲಿದ್ದಾರೆ.