Advertisement

ಕೋಟೇಶ್ವರ ದೇಗುಲದಲ್ಲಿ ಇಂದು ಕೊಡಿ ಹಬ್ಬ

11:27 AM Dec 03, 2017 | |

ಕೋಟೇಶ್ವರ: ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರದ ಶ್ರೀ ಕೋಟಲಿಂಗೇಶ್ವರ ದೇವಸ್ಥಾನದ ರಥೋತ್ಸವ (ಕೊಡಿ ಹಬ್ಬ) ರವಿವಾರ ನಡೆಯಲಿದೆ.

Advertisement

ರವಿವಾರ ಬೆಳಗ್ಗೆ 11.30 ಕ್ಕೆ ನಡೆಯುವ ರಥೋತ್ಸವದ ಸಂದರ್ಭ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವ ಸಲುವಾಗಿ ಸ್ವಯಂಸೇವಕರು ಸಿದ್ಧರಾಗಿದ್ದು, ವಿಶೇಷ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ವಾಹನ ನಿಲುಗಡೆಗೆ ಅಂಕದಕಟ್ಟೆಯ ಸಹನಾ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಮುಂಭಾಗ ಸ್ಥಳಾವಕಾಶ ನೀಡಲಾಗಿದೆ.

 ಕೋಟೇಶ್ವರದ ಪೇಟೆ ಒಳಗಡೆ ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಕಾರ್ಯ ನಿರ್ವಹಣಾಧಿಕಾರಿ ಗಣೇಶ್‌ ರಾವ್‌ ಹಾಗೂ ವ್ಯವಸ್ಥಾಪನಾ ಅಧ್ಯಕ್ಷ ಸಮಿತಿಯ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next