Advertisement
ಆಂಧ್ರಪ್ರದೇಶದ ಎಲ್ಲ 25 ಲೋಕಸಭಾ ಕ್ಷೇತ್ರ, ತೆಲಂಗಾಣದ 17 ಲೋಕಸಭಾ ಕ್ಷೇತ್ರ ಸಹಿತ ಉತ್ತರಾ ಖಂಡದಲ್ಲಿ 5, ಅರುಣಾಚಲ ಪ್ರದೇಶ, ಜಮ್ಮು- ಕಾಶ್ಮೀರ, ಮೇಘಾಲಯದಲ್ಲಿ ತಲಾ 2, ಛತ್ತೀಸ್‌ಗಢ, ನಾಗಾಲ್ಯಾಂಡ್, ಮಿಜೋರಂ, ಮಣಿಪುರ, ತ್ರಿಪುರಾ, ಅಂಡಮಾನ್-ನಿಕೋಬಾರ್‌ನಲ್ಲಿ ತಲಾ 1 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ.
80 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಕೇವಲ 8 ಕ್ಷೇತ್ರಗಳಲ್ಲಿ ನಡೆಯಲಿದೆ. ಇವುಗಳಲ್ಲಿ ಸಹರಣ್‌ಪುರ, ಕೈರಾನಾ, ಗಾಜಿಯಾಬಾದ್, ಬಾಗ್‌ಪತ್ ಮತ್ತು ಗೌತಮ್ ಬುದ್ಧ ನಗರ ಪ್ರಮುಖವಾದವು. ಈ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಮೂವರು ಕೇಂದ್ರ ಸಚಿವರಾದ ಜನರಲ್ ವಿ.ಕೆ. ಸಿಂಗ್ (ಗಾಜಿಯಾಬಾದ್), ಸತ್ಯಪಾಲ್ ಸಿಂಗ್ (ಬಾಗ್‌ಪತ್), ಮಹೇಶ್ ಶರ್ಮಾ (ಗೌತಮ ಬುದ್ಧ ನಗರ) ಮತ್ತು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ಮತ್ತು ಅವರ ಪುತ್ರ ಜಯಂತ್ ಚೌಧರಿಯವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ. ಆಂಧ್ರದಲ್ಲಿ ಮೋದಿ- ಚಂದ್ರಬಾಬು ನಾಯ್ಡು ನಡುವಿನ ವಾಕ್ಸಮರ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿಚಾರಗಳು ಹೆಚ್ಚು ಪ್ರಭಾವ ಬೀರಿ ದರೆ, ವಿಧಾನಸಭೆ ಚುನಾವಣೆಯ ಮೇಲೆ ಆಡಳಿತ ವಿರೋಧಿ ಅಲೆ, ವೈಎಸ್‌ಆರ್ ಪಾರ್ಟಿಯ ಜನಪ್ರಿಯತೆ ಇತ್ಯಾದಿ ವಿಚಾರಗಳು ಪ್ರಭಾವ ಬೀರುವ ನಿರೀಕ್ಷೆಯಿದೆ. 2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾದ ಅನಂತರ ಇದೇ ಮೊದಲ ಬಾರಿಗೆ ಅಲ್ಲಿ ಲೋಕಸಭಾ ಚುನಾವಣೆ ನಡೆ ಯುತ್ತಿದೆ. ಒಟ್ಟು 48 ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಮೊದಲ ಹಂತದ ಮತದಾನದ ವ್ಯಾಪ್ತಿಗೆ ಏಳು ಕ್ಷೇತ್ರಗಳು ಮಾತ್ರ ಒಳಪಡಲಿವೆ.
Related Articles
ಆಂಧ್ರಪ್ರದೇಶ ವಿಧಾನಸಭೆ ಚುನಾವಣ ಅಖಾಡದಲ್ಲಿ ಸಿಎಂ ಚಂದ್ರಬಾಬು ನಾಯ್ಡು (ಕುಪ್ಪಂ), ವೈಎಸ್‌ಆರ್‌ಪಿಯ ಜಗನ್ ರೆಡ್ಡಿ (ಪುಲಿವೆಂದುಲ), ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ (ಭೀಮಾವರಂ, ಗಜುವಾಕ) ನಡುವೆ ಜಿದ್ದಾಜಿದ್ದಿ ಹೋರಾಟದ ನಿರೀಕ್ಷೆಯಿದೆ. ಚಂದ್ರಬಾಬು ನಾಯ್ಡು ಪುತ್ರ ನರಾ ಲೋಕೇಶ್ ಮಂಗಳಗಿರಿಯಿಂದ, ಎನ್‌ಟಿ ರಾಮರಾವ್ ಪುತ್ರ ಬಾಲಕೃಷ್ಣ (ಹಿಂದೂಪುರ) ಸ್ಪರ್ಧಿಸುತ್ತಿದ್ದಾರೆ.
Advertisement