Advertisement

ಇಂದು ಭಾವೈಕ್ಯತೆಯ ಹುಣಸೂರು ಹಬ್ಬ

11:11 AM Dec 08, 2018 | Team Udayavani |

ಹುಣಸೂರು: ನಗರದಲ್ಲಿ ಶನಿವಾರ ನಡೆಸಲುದ್ದೇಶಿಸಿರುವ ಭಾವೈಕ್ಯತೆ ಮೆರೆಯುವ ಹುಣಸೂರು ಹಬ್ಬವನ್ನು ಅದ್ಧೂªರಿಯಾಗಿ ಆಚರಿಸಲು ಎಲ್ಲರೂ ಸಹಕರಿಸಬೇಕೆಂದು ಶಾಸಕ ಎಚ್‌.ವಿಶ್ವನಾಥ್‌ ಕೋರಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ನಡೆದ ಸಂಘ-ಸಂಸ್ಥೆ ಮುಖ್ಯಸ್ಥರ, ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅನೇಕ ಕಾರಣಗಳಿಂದಾಗಿ ಕನ್ನಡ ರಾಜ್ಯೋತ್ಸವ, ಗ್ರಾಮೀಣ ದಸರಾ ಮುಂದೂಡಲಾಗಿತ್ತು.

ಇದೀಗ ಎಲ್ಲಾ ಹಬ್ಬಗಳನ್ನು ಮೇಳೆ„ಸುವ ಹಾಗೂ ಎಲ್ಲಾ ಧರ್ಮ,ಭಾಷಿಕರ ಭಾವೈಕ್ಯತೆ ಮೆರೆಯುವ  ಹಬ್ಬ ಆಚರಿಸುತ್ತಿದ್ದು, ಪಕ್ಷ, ಧರ್ಮ ರಹಿತವಾದ ಈ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು.  ಈಗಾಗಲೇ ವೈಯಕ್ತಿಕವಾಗಿ ಎಲ್ಲಾ ಪಕ್ಷಗಳವರು, ಸಂಘಸಂಸ್ಥೆಗಳ ಪ್ರಮುಖರನ್ನು ಆಹ್ವಾನಿಸಿದ್ದು, ವಿಶಿಷ್ಟವಾಗಿ ಆಚರಿಸಲಾಗುತ್ತಿದೆ ಎಂದರು. 

ಶನಿವಾರ ಬೆಳಗ್ಗೆ 11ಕ್ಕೆ ರಂಗನಾಥ ಬಡಾವಣೆಯಿಂದ ಮೆರವಣಿಗೆ ಆರಂಭಗೊಳ್ಳಲಿದ್ದು, ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಮಾಜಿ ಸಂಸದ ವಿಜಯಶಂಕರ್‌, ನಗರಸಭೆ ಅಧ್ಯಕ್ಷ ಎಚ್‌.ವೈ.ಮಹದೇವ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು. 

ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಹಾಯ್ದು ಮಧ್ಯಾಹ್ನದ ವೇಳೆಗೆ ನಗರಸಭೆ ಮೈದಾನ ಸೇರಲಿದ್ದು, ಅಲ್ಲಿ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗುವುದು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಸನ್ಮಾನ ನಡೆಸಲಾಗುವುದೆಂದರು. 

Advertisement

ತಾಪಂ ಇಒ ಕೃಷ್ಣಕುಮಾರ್‌ ಮಾತನಾಡಿ, ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ 13 ಸ್ತಬ್ಧಚಿತ್ರಗಳು, ಪೊಲೀಸ್‌ ಬ್ಯಾಂಡ್‌ ವಾದನ, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ಥಳೀಯ 20 ಕ್ಕೂ ಹೆಚ್ಚು ಕಲಾತಂಡಗಳು ಹಾಗೂ ವಿವಿಧ ದೇಶಗಳ ಯುವ ಸಮೂಹ ಸಹ ಭಾಗವಹಿಸಲಿವೆ. ಭುವನೇಶ್ವರಿ ದೇವಿಯ ಭವ್ಯ ಮಂಟಪದಲ್ಲಿರಿಸಿ ಮೆರವಣಿಗೆ ಸಾಗಲಿದೆ.

ನಂತರ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಟಿಬೇಟಿಯನ್ನರು ಹಾಗೂ ಗಾವಡಗೆರೆ ಕಾಲೇಜಿನ ತಂಡದಿಂದ ನಾಟಕ, ಮತ್ತು ಸುಗಮ ಸಂಗೀತ ಆಯೋಜಿಸಲಾಗಿದೆ ಎಂದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಚ್‌.ವೈ.ಮಹದೇವ್‌, ತಹಶೀಲ್ದಾರ್‌ ಮೋಹನ್‌, ಪೌರಾಯುಕ್ತ ಶಿವಪ್ಪನಾಯಕ, ಬಿಇಒ ನಾಗರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next