Advertisement
ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆ ನಡೆಯುತ್ತದೆ. ಮತದಾನದ ಪ್ರಾಮುಖ್ಯತೆ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸುವುದಕ್ಕಾಗಿಯೇ ಪ್ರತಿವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಸ್ಥಾಪನೆಯಾಗಿದೆ. ಹೀಗಾಗಿ ಈ ದಿನವನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. 2011 ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನ ಎಂದು ಘೋಷಿಸಿ ಮತದಾನಕ್ಕೊಂದು ಮುನ್ನುಡಿ ಬರೆಯಲಾಗಿದೆ. ಬಳಿಕ ಪ್ರತಿ ವರ್ಷ ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ 10ನೇ ರಾಷ್ಟ್ರೀಯ ಮತದಾರರ ದಿನ. ಈ ದಿನದ ಉದ್ಧೇಶ ಏನು?
ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನವಾಗುತ್ತಿದೆ. ವಿದ್ಯಾವಂತರು ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನ ಆಗುತ್ತಿಲ್ಲ. ಮತದಾನ ಜವಾಬ್ದಾರಿಯ ಅರಿವಿದ್ದೂ ದೂರ ಉಳಿಯುವ ವಿದ್ಯಾವಂತರಿಗೆ ಹಾಗೂ ಅರಿವಿಲ್ಲದೆ ದೂರ ಉಳಿಯುವ ಅವಿದ್ಯಾವಂತರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ.
Related Articles
Advertisement
ಬ್ಯಾಲೆಟ್ ಬಂದ ಬಗೆಪ್ರಜಾಪ್ರಭುತ್ವ ದೇಶಗಳಲ್ಲಿ ಅಧಿಕಾರವನ್ನು ಜನರ ಕೈಗೆ ನೀಡಲಾಗಿದೆ.ಇಲ್ಲಿ ಚುನಾವಣಾ ಪ್ರಕ್ರಿಯೆಯ ಮೂಲಕ ತಮ್ಮ ನಾಯಕನನ್ನು ಆರಿಸಲಾಗುತ್ತದೆ. ಪ್ರಾಚೀನ ಗ್ರೀಕ್ ಪ್ರಜಾಪ್ರಭುತ್ವ ಪದ್ಧತಿಯಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಲು ಬಿಳಿ ಚೆಂಡನ್ನು (ವೈಟ್ ಬಾಲ್) ನೆಲಕ್ಕೆ ಬಡಿಯುತ್ತಿದ್ದರು. ಇದು ಅಲ್ಲಿನ ಕ್ರಮವಾಗಿತ್ತು. ಅದೇ ಪದ್ಧತಿ ಮುಂದುವರಿದು ‘ಬ್ಯಾಲೆಟ್’ ಪದದ ಬಳಕೆಗೆ ನಾಂದಿಯಾಯಿತು. ಯಾಕೆ ಮತದಾನ ಮಾಡಬೇಕು?
ಮತದಾನದ ಹಕ್ಕು ಒಬ್ಬ ಪೌರನನ್ನು ಪೂರ್ಣ ಪ್ರಮಾಣದ ಪೌರನೆಂದು ಗೌರವಿಸುತ್ತದೆ. ಮತದಾನ ಎಂಬುದು ಇಂದು ಕೇವಲ ಸಂವಿಧಾನಾತ್ಮಕ ಹಕ್ಕು ಅಲ್ಲ. ಬದಲಾಗಿ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಹೌದು. ಕಾನೂನು ರೂಪಿಸುವ ಸರಕಾರವನ್ನು ಆರಿಸುವುದು ಎಲ್ಲ ಪೌರರ ಜವಾಬ್ದಾರಿ. ಮತದಾನದ ಒಟ್ಟು ಪ್ರಮಾಣ ಶೇ. 80ರ ಗಡಿ ದಾಟದಿರುವುದು ನಮ್ಮನ್ನು ಕಾಡುತ್ತಿರುವ ಮುಖ್ಯ ಸವಾಲಾಗಿದೆ. ಸ್ವಾತಂತ್ರ್ಯದ ಬಳಿಕ ಎಲ್ಲರಿಗೂ ಮತದಾನದ ಅಧಿಕಾರ
ಸ್ವಾತಂತ್ರ್ಯ ಪೂರ್ವದಲ್ಲಿ ಮತದಾನದ ಅಧಿಕಾರ ಕೆಲವೇ ಮಂದಿಗಷ್ಟೇ ನೀಡಲಾಗಿತ್ತು. ಭಾರತ ಸರಕಾರ 1935ರ ಕಾಯ್ದೆ ಪ್ರಕಾರ ಕೇವಲ ಶೇ. 14ರಷ್ಟು ಜನರಿಗೆ ಮತದಾನದ ಅವಕಾಶವನ್ನು ಕಲ್ಪಿಸಲಾಗಿತ್ತು. ಸ್ವಾತಂತ್ರ್ಯ ಬಳಿಕ 1950ರ ಸಂವಿಧಾನದಲ್ಲಿ 326ನೇ ವಿಧಿ ಅನ್ವಯ 21 ವರ್ಷ ತುಂಬಿದ ಎಲ್ಲ ಭಾರತೀಯ ಪ್ರಜೆಗಳಿಗೆ ಯಾವುದೇ ತಾರತಮ್ಯವಿಲ್ಲದೆ ಮತದಾನದ ಹಕ್ಕನ್ನು ಸಾರ್ವತ್ರಿಕಗೊಳಿಸಲಾಯಿತು. ವಯೋಮಿತ ಇಳಿಕೆ
1989ರಲ್ಲಿ ಮತದಾನದ ವಯೋಮಿತಿಯನ್ನು 21ರಿಂದ 18ಕ್ಕೆ ಇಳಿಸಲಾಯಿತು. ಇದು ಅಗಾದ ಸಂಖ್ಯೆಯಲ್ಲಿ ಯುವ ಸಮುದಾಯವನ್ನು ಪ್ರಜಾಪ್ರಭುತ್ವದ ಪ್ರಧಾನ ಕಕ್ಷೆಗೆ ತರಲು ನೆರವಾಯಿತು. ಸ್ವಾತಂತ್ರ್ಯ ಪಡೆದ ಮೊದಲ ದಿನವೇ ಮತದಾನದ ಹಕ್ಕನ್ನು ಸಾರ್ವತ್ರಿಕಗೊಳಿಸಿದ ಮೊದಲ ಪ್ರಜಾಪ್ರಭುತ್ವ ದೇಶ ಭಾರತ. ಒಟ್ಟು ಮತದಾರರು – 90 ಕೋಟಿ
ಒಟ್ಟು ಜನಸಂಖ್ಯೆ – 133 ಕೋಟಿ
ಒಟ್ಟು ಲೋಕಸಭಾ ಕ್ಷೇತ್ರಗಳು – 545
ಒಟ್ಟು ರಾಜ್ಯಗಳು – 29