Advertisement
ತುಂಡು ಭೂಮಿಗಾಗಿ ಪರಿತಪಿ ಸುವ ಚೋಮನ ಮನದ ತುಡಿತಗಳನ್ನು ಚೋಮನ ದುಡಿಯ ಮೂಲಕ ಹೇಳುತ್ತಾ ಹೋಗುವ ಕಾರಂತರು ಇಂದಿಗೂ ಹೊರ ಜಗತ್ತಿನ ಮರೆಯಲ್ಲೇ ಬದುಕ ಬಯ ಸುವ ಕೊರಗ ಜನಾಂಗದ ಅಸ್ಪೃ ಶ್ಯತೆ, ಅಸಹಾಯಕತೆ, ನೋವು- ನಲಿವುಗಳನ್ನೆಲ್ಲ ಕಥೆಯ ಮೂಲಕ ತೆರೆದಿಡುತ್ತಾ, ಚೋಮನ ತುಂಡು ಭೂಮಿಯಾಸೆಯೊಂದಿಗೆ ಅವನು ನಂಬಿದ ದೈವಗಳ ಭಯಭಕ್ತಿಯ ಬದುಕನ್ನು ಬಿಡಲಾಗದೆ ಚಡಪಡಿಕೆಯನ್ನು ಅನುಭವಿಸುವ ಚೋಮ, ಇತ್ತ ಭೂಮಿಯಾಸೆಯ ದರಿ, ಅತ್ತ ನಂಬಿಕೆಯ ಪುಲಿ ಇವೆರಡರ ನಡುವೆ ಅಸಹಾಯಕತೆ ಮತ್ತು ಗೊಂದಲದ ಗೂಡಾಗುತ್ತಾನೆ.
Related Articles
Advertisement
ಕಾರಂತರ ಬರೆಹ ಲೋಕದಲ್ಲಿ “ಬೆಟ್ಟದ ಜೀವ’ ಅತ್ಯಂತ ಚಿಕ್ಕ ಕಾದಂಬರಿಗಳಲ್ಲೊಂದು. ಗೋಪಾಲಯ್ಯ ಮತ್ತು ಶಂಕರಿ ಎಂಬ ವೃದ್ಧ ದಂಪತಿಯ ಕಥೆಯದು. ಕಥೆಯ ಆಳ, ಅಗಲ ಕಾರಂತರು ಬಿಂಬಿಸಿದ ರೀತಿ ಬೆಟ್ಟದ ಜೀವಕ್ಕೊಂದು ವಿಶಿಷ್ಟತೆ ತಂದುಕೊಡುತ್ತದೆ. ಪಶ್ಚಿಮ ಘಟ್ಟಗಳ ನಡುವೆ ಸುಬ್ರಹ್ಮಣ್ಯದ ಸಮೀಪ ಕುಮಾರ ಪರ್ವತದ ತಪ್ಪಲಲ್ಲಿ ಮನೆಯಿಂದ ಹೊರನಡೆದ ಮಗನ ನೋವನ್ನು ಒಡಲಲ್ಲಿ ತುಂಬಿಕೊಡು ಸುಖ ಎನ್ನುವ ಪದಕ್ಕೆ ಶ್ರಮ ಎನ್ನುವ ಅರ್ಥದೊಂದಿಗೆ ಬದುಕುವ ವೃದ್ಧರ ಜೀವನಗಾಥೆಯನ್ನು ಬೆಟ್ಟದ ಜೀವದ ಮೂಲಕ ತೆರೆದಿಟ್ಟ ಕಾರಂತರ ಲೇಖನಿ ನಿಸರ್ಗದ ಸೊಬಗನ್ನು ಘಟ್ಟಗಳ ನಡುವಿನ ಸೌಂದರ್ಯದ ರಾಶಿಯನ್ನು ಮೊಗೆ-ಮೊಗೆದು ಓದುಗನಿಗೆ ಬಡಿಸಿ ಬಿಡುತ್ತದೆ.
ಹೀಗೆ ಕಾರಂತರು ನೆಲ, ಜಲ, ಪರಿಸರ ಕಾಡು, ಮೇಡು, ಗುಡ್ಡ, ಬೆಟ್ಟ ಜರಿ, ತೊರೆಗಳೊಂದಿಗೆ ಬರೆಹದ ಬದುಕನ್ನು ಕಟ್ಟಿಕೊಳ್ಳುತ್ತಾ ಸಂಪ್ರದಾಯದ ಹೆಸರಿನಲ್ಲಿ ಮೂಢನಂಬಿಕೆಗಳು, ಅಧ್ಯಾತ್ಮದ ಹೆಸರಿನಲ್ಲಿ ಆಗುವ ಬದುಕಿನ ಅವಘಡಗಳು, ಅಧುನಿಕತೆ ಹೆಸರಿನಲ್ಲಿ ಪರಿಸರದ ನಾಶವನ್ನು ಬರೆಹದ ಮೂಲಕ ಸಮಾಜಕ್ಕೆ ಎತ್ತಿ ತೋರಿಸುತ್ತಲೇ ಊರುಗೋಲು ಹಿಡಿದು ದಾರಿತಪ್ಪುತ್ತಿರುವ ಸಮಾಜಕ್ಕೆ ಸರಿದಿಕ್ಕು ತೋರಿಸಲು ಶ್ರಮ ಪಟ್ಟಿದ್ದಾರೆ. ಒಟ್ಟಾರೆ ಶಿವರಾಮ ಕಾರಂತ ಎಂಬ “ನಡೆದಾಡುವ ವಿಶ್ವಕೋಶ’ ಸಮಾಜಕ್ಕೊಂದು ಹೆಮ್ಮೆ.
ರಮೇಶ್‌ಗೆ ಪ್ರಶಸ್ತಿ ಪ್ರದಾನಇಂದು ಕೋಟ ಶಿವರಾಮ ಕಾರಂತರ ಜನ್ಮದಿನವಾಗಿದ್ದು, ಅವರು ಹುಟ್ಟಿ ಬೆಳೆದ ಈಗಿನ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡುತ್ತಿದೆ. ಈ ಬಾರಿ ಪ್ರಶಸ್ತಿಗೆ ಆಯ್ಕೆಯಾದವರು ಕಲಾವಿದ ರಮೇಶ್ ಅರವಿಂದ್. ಶಿವರಾಮ ಕಾರಂತರ ತಂದೆ ಶೇಷ ಕಾರಂತರು ಕಟ್ಟಿದ ಶಾಂಭವಿ ಗಿಳಿಯಾರು ಶಾಲೆಯ ಆವರಣದಲ್ಲಿ ನಡೆಯುವ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಮ್ಮೂರಿಗೊಂದು ಕಳೆ ಮತ್ತು ಸಂಭ್ರಮ. -ಕೋಟ ಶ್ರೀನಿವಾಸ ಪೂಜಾರಿ
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು