Advertisement

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ : “ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ”

10:14 AM Oct 12, 2019 | Hari Prasad |

ಹೆಣ್ಣು ಮಕ್ಕಳ ವಿರುದ್ಧ  ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳ ಅಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ  ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್‌ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಗುತ್ತದೆ.

Advertisement

2012 ರಲ್ಲಿ  ಪ್ರಾರಂಭ
ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆ  2012ರ ಅಕ್ಟೋಬರ್‌ 11ರಂದು  ಈ ದಿನವನ್ನು ಆಚರಣೆಗೆ ತಂದಿತು.

ಸಾಮಾಜಿಕ ಪಿಡುಗು ಮುಕ್ತ ಸಮಾಜ
ವಿಶ್ವದಾದ್ಯಂತ ಹೆಣ್ಣು ಮಕ್ಕಳು ಎದುರಿಸುತ್ತಿರುವ ವರದಕ್ಷಿಣೆ ಕಿರುಕುಳ, ಭೇದಭಾವ ಮತ್ತು ಬಾಲ್ಯವಿವಾಹ ಅಂತಹ ಹಲವಾರು ಸಮಸ್ಯೆಗಳ ಬಗ್ಗೆ  ಅರಿವು  ಮೂಡಿಸುವುದರೊಂದಿಗೆ,  ಸಾಮಾಜಿಕ ಪಿಡುಗು ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬದು ಇದರ ಉದ್ದೇಶವಾಗಿದೆ.

2019ರ ಧ್ಯೇಯ
ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಕ್ಕೆ ಪ್ರತ್ಯೇಕ ಧ್ಯೇಯಗಳನ್ನು ಇಟ್ಟುಕೊಳ್ಳಲಾಗುತ್ತದೆ. 2019ರ ಈ ದಿನಕ್ಕೆ “ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ” ಎಂಬ ಧ್ಯೇಯ ವಾಕ್ಯವನ್ನು ಹಾಕಿಕೊಳ್ಳಲಾಗಿದೆ.

ಈ ಕೆಳಗಿನ ಅಂಶಗಳಿಗೆ ಹೆಚ್ಚು ಫೋಕಸ್:
1. ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವುದು.

Advertisement

2. ಹೆಣ್ಣುಮಕ್ಕಳಿಗೆ ಸೂಕ್ತ ಗೌರವ ನೀಡುವುದು.

3. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ವಿಚಾರದ ಕುರಿತಾಗಿ ಜಾಗೃತಿ ಮೂಡಿಸುವುದು.

4. ಅಸಮಾನತೆ ಮತ್ತು ಲಿಂಗತಾರತಮ್ಯದಂತಹ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವುದು.

5. ಅಭಿಯಾನ ಕೈಗೊಳ್ಳುವ ಮೂಲಕ ಲಿಂಗಭೇದದ ಬಗ್ಗೆ ಇರುವ ತಪ್ಪುಕಲ್ಪನೆ ಮತ್ತು ಮೂಢನಂಬಿಕೆಗಳನ್ನು ದೂರ ಮಾಡುವುದು.

Advertisement

Udayavani is now on Telegram. Click here to join our channel and stay updated with the latest news.

Next