Advertisement

ಇಂದು ಮಂಗಳೂರು ಸಹಿತ ವಿವಿಧೆಡೆ ಶೂನ್ಯ ನೆರಳಿನ ದಿನ

12:00 AM Apr 24, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ರವಿವಾರ ಶೂನ್ಯ ನೆರಳು ದಿನದ ವಿಸ್ಮಯ ಆರಂಭ. ಮೊದಲಿಗೆ ರಾಜಧಾನಿ ಬೆಂಗಳೂರು, ಮಂಗಳೂರು, ಹಾಸನದಲ್ಲಿ ಪೂರ್ಣ ಪ್ರಮಾಣದಲ್ಲಿ ಹಾಗೂ ರಾಮನಗರ, ತುಮಕೂರು, ಕೋಲಾರದಲ್ಲಿ ಅರ್ಧ ಪ್ರಮಾಣದಲ್ಲಿ ಕಂಡು ಬರಲಿದೆ.

Advertisement

ಸಾಮಾನ್ಯವಾಗಿ ಬೇಸಗೆ ಸಮಯದಲ್ಲಿ ಸೂರ್ಯನ ಕಿರಣಗಳು ಅತಿಹೆಚ್ಚು ಬೀಳುವುದರಿಂದ ನಮ್ಮ ನೆರಳು ಸ್ಪಷ್ಟವಾಗಿ ಕಾಣಿಸುತ್ತದೆ.

ಆದರೆ ರವಿವಾರ ಮಧ್ಯಾಹ್ನ 12.17ಕ್ಕೆ ಸರಿಯಾಗಿ ನಮ್ಮ ನೆರಳು ಗೋಚರಿಸುವುದಿಲ್ಲ. ಸೂರ್ಯನ ಕಿರಣಗಳು ದೇಹದ ಮೇಲೆ ಅಥವಾ ಯಾವುದೇ ಒಂದು ವಸ್ತುವಿನ ಮೇಲೆ ಬಿದ್ದಾಗ ಸುತ್ತಲಿನ ನೆಲದ ಮೇಲೆ ನೆರಳು ಸಂಭವಿಸುತ್ತದೆ. ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಚಲುಸುತ್ತಿದ್ದಂತೆ ನೆರಳಿನ ಗಾತ್ರವು ಕಡಿಮೆಯಾಗುತ್ತಾ ಹೋಗುತ್ತದೆ. ಆದರೆ, ಇಂದು ಸೂರ್ಯನು ನಮ್ಮ ತಲೆಯ ಮೇಲೆ ನಿಖರವಾಗಿ ಇರುವುದರಿಂದ ನೆರಳು ಕಾಲಿನಡಿಯಲ್ಲಿ ಇರುತ್ತದೆ. ಆಗ ನಮ್ಮ ನೆರಳು ನಮಗೆ ಗೋಚರವಾಗುವುದಿಲ್ಲ.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು
ಭೂಮಿಯು 23.5 ಡಿಗ್ರಿ ಕೋನದಲ್ಲಿ ಓರೆಯಾಗಿ ಬಾಗಿರುವುದರಿಂದ ಅದು ಸೂರ್ಯನ ಸುತ್ತ ಚಲಿಸುವಾಗ ಸೂರ್ಯನು ಉತ್ತರದಿಂದ ದಕ್ಷಿಣಕ್ಕೆ ಚಲಿಸುವಂತೆ ಭಾಸವಾಗುತ್ತದೆ. ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವೆ ವಾಸಿಸುವ ಎಲ್ಲ ಜನರಿಗೆ ವರ್ಷದ ಎರಡು ದಿನಗಳಲ್ಲಿ ಸೂರ್ಯನು ಉತ್ತುಂಗದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎರಡು ದಿನಗಳು ಪ್ರತಿ ವರ್ಷ ಎಪ್ರಿಲ್ -ಮೇ ಮತ್ತು ಆಗಸ್ಟ್‌ನಲ್ಲಿ ಸಂಭವಿಸುತ್ತವೆ. ಆಗಸ್ಟ್‌ ತಿಂಗಳು ಮಳೆಗಾಲವಾಗಿದ್ದರಿಂದ ಶೂನ್ಯ ನೆರಳಿನ ಅನುಭವವಾಗುವುದಿಲ್ಲ. ಯಾವುದೇ ಉಪಕರಣಗಳನ್ನು ಬಳಸದೆ ಗಮನಿಸಬಹುದಾದ ಸುಲಭವಾದ ಖಗೋಳ ವಿದ್ಯಮಾನಗಳಲ್ಲಿ ಇದು ಒಂದು ಎಂದು ಖಗೋಳ ತಜ್ಞ ಅಥುಲ್‌ ತಿಳಿಸಿದರು. ಇದು ಮುಂದಿನ ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಕಾಣಸಿಗಬಹುದು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next