Advertisement

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಭೂ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಿದೆ

07:48 AM Jan 10, 2021 | Team Udayavani |

10-01-2021

Advertisement

ಮೇಷ: ಹಿರಿಯರೊಡನೆ ಭಿನ್ನಾಭಿಪ್ರಾಯವು ಮೂಡಿಬಂದು ಮನಃಶಾಂತಿಗೆ ಭಂಗ ಬರಲಿದೆ. ಉದ್ಯೋಗದಲ್ಲಿ ಎಷ್ಟು ಉತ್ತಮ ಕೆಲಸ ಮಾಡಿದರೂ ಅಪವಾದ ತಪ್ಪದು. ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ.

ವೃಷಭ: ಸಹೋದರರೊಡನೆ ಲೇವಾದೇವಿ ವ್ಯವಹಾರದಲ್ಲಿ ಅಸಮಾಧಾನವು ಕಾಡಲಿದೆ. ಸಾಮಾಜಿಕವಾಗಿ ನಿಮ್ಮ ಗೌರವ, ಘನತೆ ಹೆಚ್ಚಾದರೂ ಆರೋಗ್ಯದಲ್ಲಿ ಸುಧಾರಣೆಯಾಗುತ್ತಲೇ ಹೋಗಲಿದೆ. ಕಿರು ಸಂಚಾರ ಕೂಡಿ ಬರಲಿದೆ.

ಮಿಥುನ: ಉತ್ತರದ ಪ್ರದೇಶಗಳಿಗೆ ಪ್ರವಾಸ, ತೀರ್ಥಯಾತ್ರಾದಿಗಳ ಸಂಭವ ಕಂಡುಬರಲಿದೆ. ಕಾರ್ಯರಂಗದಲ್ಲಿ ಸಣ್ಣ ತಪ್ಪು ಕಂಡುಬಂದು ಮನಸ್ತಾಪ ಹಾಗೂ ಸ್ಥಾನಕ್ಕೂ ಕುತ್ತು ಬಂದೀತು. ಭೂ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಿದೆ.

ಕರ್ಕ: ಸಾಹಿತ್ಯ, ಕಲೆ ವಿಭಾಗಗಳಲ್ಲಿ ನಿಮ್ಮನ್ನು ಗುರುತಿಸುವ ಕೆಲಸ ನಡೆಯಲಿದೆ. ಗೆಳೆಯರು, ಹಿತಬಂಧುಗಳು ನಿಮ್ಮಿಂದ ಸಹಾಯವನ್ನು ನಿರೀಕ್ಷಿಸಿಯಾರು. ತೋಟಗಾರಿಕೆ, ಕೃಷಿ, ಹೈನುಗಾರಿಕೆಯವರಿಗೆ ಆದಾಯ ವೃದ್ಧಿಯಾಗಲಿದೆ.

Advertisement

ಸಿಂಹ: ನೂತನ ವಸ್ತ್ರ ಹಾಗೂ ಆಭರಣಗಳ ಖರೀದಿಯಿಂದ ಸಂತಸವಾದೀತು. ದಾಂಪತ್ಯ ಸುಖದ ಸುಯೋಗವು ವಿವಾಹಿತರಿಗೆ ಕಂಡುಬರಲಿದೆ. ಆರೋಗ್ಯದಲ್ಲಿ ಸ್ವಲ್ಪ ಸಣ್ಣಪುಟ್ಟ ತೊಂದರೆಗಳು ಕಂಡುಬಂದು ಕಿರಿಕಿರಿ.

ಕನ್ಯಾ: ಸಮೀಪದ ಬಂಧುಗಳ ಸಮಾಗಮದಿಂದ ಹರ್ಷ ತಂದೀತು. ಗೃಹಿಣಿಗೆ ವಾತದೋಷದಿಂದ ಸಂದುನೋವು ಕಂಡುಬಂದೀತು. ದೇವತಾ ಹಾಗೂ ಪುಣ್ಯಕ್ಷೇತ್ರದ ದರ್ಶನದಿಂದ ಸಮಾಧಾನ ಹಾಗೂ ಸಂತಸವಾಗಲಿದೆ.

ತುಲಾ: ವ್ಯಾಪಾರ, ವ್ಯವಹಾರದಲ್ಲಿ ಧನವಿನಿಯೋಗದಲ್ಲಿ ಎಚ್ಚರವಿರಲಿ. ಸಾಲಸೋಲಗಳನ್ನು ಮಾಡಲು ಹೋಗದಿರಿ. ಸಂಯಮದಿಂದ ಕಾರ್ಯಸಿದ್ಧಿಯಾಗಲಿದೆ. ಇಷ್ಟಪ್ರಾಪ್ತಿಗಾಗಿ ದೇವತಾನುಗ್ರಹ ಮಾಡಿಕೊಳ್ಳಿರಿ. ಮುನ್ನಡೆಯಿರಿ.

ವೃಶ್ಚಿಕ: ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಧರ್ಮಕಾರ್ಯಗಳು ವಿಘ್ನ ಭಯದಿಂದಲೇ ನಡೆಯಲಿದೆ. ಕರಕುಶಲ, ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರಕಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಇದೆ.

ಧನು: ವಾಹನ ರಿಪೇರಿಗಳಿಗಾಗಿ ಖರ್ಚು ಬರಲಿದೆ. ಸಂಚಾರದಿಂದಾಗಿ ಆರೋಗ್ಯದಲ್ಲಿ ಏರುಪೇರು ಕಂಡು ಬಂದೀತು. ದೈವಾನುಕೂಲದಿಂದ ವೃದ್ಧಿ ಕಂಡುಬಂದು ಮನಸ್ಸು ಹಗುರವಾಗಲಿದೆ. ಕುಟುಂಬದಲ್ಲಿ ಅಸಮಾಧಾನ ಕಂಡೀತು.

ಮಕರ: ಕಚೇರಿಯಲ್ಲಿ ಮುಂಭಡ್ತಿಗೆ ಕ್ಲೇಶ ಕಂಡು ಬರುವುದು. ವ್ಯವಹಾರದಲ್ಲಿ ನಿಮ್ಮ ಅಭೀಷ್ಟ ಸಿದ್ದಿಯಾಗಲಿದೆ. ನೂತನ ವ್ಯವಹಾರಕ್ಕೆ ಕೈಹಾಕುವುದು ಬೇಡ. ಕುಟುಂಬದ ಆಸ್ತಿ ವಿಚಾರದಲ್ಲಿ ತಕರಾರು ಎದ್ದೀತು.

ಕುಂಭ: ನಿಮ್ಮ ಆತ್ಮೀಯರ ಭೇಟಿ ಅನಿರೀಕ್ಷಿತವಾಗಿ ಆಗಲಿದೆ. ಪ್ರವಾಸ ಯತ್ರಾದಿಗಳಿಂದ ಸಂತೃಪ್ತಿ ಕಂಡು ಬರಲಿದೆ. ಮನೆ ರೀಪೇರಿ ಯಾ ವಿಸ್ತರಣೆಯ ಕಾರ್ಯ ಕೈಗೊಳ್ಳುವಿರಿ. ಜಾಗ್ರತೆ ಮಾಡುವುದು.

ಮೀನ: ಸರಕಾರೀ ಉದ್ಯೋಗಸ್ಥರಿಗೆ ಸ್ಥಾನ ಪ್ರಾಪ್ತಿ ಇದ್ದರೂ ಕಿರಿಕಿರಿ ಜೊತೆಗೆ ವಿರೋಧಿಗಳ ಅಸೂಯಾದೃಷ್ಟಿಯು ನಿಮ್ಮ ಮೇಲಿರುವುದು. ಹಾಗಾಗಿ ಅಲೋಚಿಸಿ, ನಿಧಾನವಾಗಿ ಹೆಜ್ಜೆ ಇಡಿರಿ. ಸಹನೆ, ತಾಳ್ಮೆಯ ಅಗತ್ಯವಿದೆ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next