Advertisement
ಮೇಷ: ಆರ್ಥಿಕವಾಗಿ ಅತೀ ಹೆಚ್ಚಿನ ಜಾಗ್ರತೆ ವಹಿಸಬೇಕಾದೀತು. ಹೆಚ್ಚಿನ ಹೂಡಿಕೆಗಳು ಈಗಿನ ಪರಿಸ್ಥಿತಿಯಲ್ಲಿ ಸಮಸ್ಯೆಯನ್ನು ತಂದು ಕೊಟ್ಟಾವು. ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ತೋರಿಬಂದು ಹಿನ್ನಡೆ ತಂದೀತು.
Related Articles
Advertisement
ಸಿಂಹ: ವೈಯಕ್ತಿಕವಾಗಿ ಮಾಡಿದ ತಪ್ಪುಗಳ ವಿಮರ್ಶೆ ಮಾಡಬೇಕಾದೀತು. ಅತೀ ಹೆಚ್ಚಿನ ಕಾಳಜಿ ವಹಿಸಬೇಕಾದೀತು. ಗ್ರಹಗಳ ಪ್ರತಿಕೂಲತೆಗಳಿಂದ ಆಗಾಗ ಹೆಚ್ಚಿನ ಕಾರ್ಯಗಳಿಗೆ ಹಿನ್ನಡೆ ತೋರಿಬರುವುದು.
ಕನ್ಯಾ: ಗುರುವಿನ ಪ್ರತಿಕೂಲತೆಯಿಂದ ಆಗಾಗ ನಾನಾ ರೀತಿಯಲ್ಲಿ ಪರಿಣಾಮ ಬೀರಲಿದೆ. ಮುಖ್ಯವಾಗಿ ಮಾನಸಿಕ ಗೊಂದಲಗಳ ಬಗ್ಗೆ ಕಾಳಜಿ ವಹಿಸಬೇಕಾದೀತು. ಪ್ರತಿಷ್ಠೆಗಾಗಿ ನಾನಾ ರೀತಿಯಲ್ಲಿ ಹಣ ವ್ಯಯ ಕಂಡು ಬರಲಿದೆ.
ತುಲಾ: ಕಾರ್ಯಕ್ಷೇತ್ರದ ಒತ್ತಡದಿಂದ ದೇಹಾರೋಗ್ಯದ ಮೇಲೆ ಪರಿಣಾಮ ಬೀರಿತು. ಕೌಟುಂಬಿಕವಾಗಿ ಅಸಮಾಧಾನದ ವಾತಾವರಣದಿಂದ ಕಿರಿಕಿರಿಯೆನಿಸಲಿದೆ. ವೃಥಾ ಮಾನಾಪಮಾನಗಳಿಗೆ ನೀವು ಬಲಿಯಾಗಲಿದ್ದೀರಿ.
ವೃಶ್ಚಿಕ: ದೈವಾನುಗ್ರಹ ಪಡೆದ ನೀವು ಭಾಗ್ಯಶಾಲಿಗಳೇ ಸೈ. ಉದಾಸೀನತೆ ತೋರದೆ ಅಹಂಭಾವ ಬಿಟ್ಟು ನೈತಿಕ ಮಾರ್ಗದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಲಾಭದ ಸೂಚನೆ ತಂದೀತು.
ಧನು: ಇದ್ದುದರಲ್ಲೇ ಪರಿವರ್ತನೆ ತೋರಿಬರಲಿದೆ. ಧೈರ್ಯದಿಂದ ಮುನ್ನುಗ್ಗಿ ಕಾರ್ಯಸಾಧಿಸಲು ನೋಡಿರಿ. ಅದರಲ್ಲಿ ಯಶಸ್ಸು ನಿಮಗೆ ದೊರಕಲಿದೆ. ರಾಜಕೀಯ ಕ್ಷೇತ್ರದವರಿಗೆ ಹರಸಾಹಸದಿಂದ ಸ್ಥಾನಮಾನ ದೊರಕಲಿದೆ.
ಮಕರ: ವ್ಯಾಪಾರ, ವ್ಯವಹಾರಗಳು ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿದಾಯಕವಾಗಿ, ನಿಮ್ಮ ಹೂಡಿಕೆ ಗಳು ಲಾಭದಾಯಕವಾಗಲಿದೆ. ಆದರೂ ಆಲೋಚನೆ ಮಾಡಿ ಮುಂದುವರಿದಲ್ಲಿ ಯಶಸ್ಸು ದೊರಕಲಿದೆ. ಅವಕಾಶಗಳಿಗೆ ಸ್ಪಂದಿಸಿರಿ.
ಕುಂಭ: ಸಂದಿಗ್ಧಕ್ಕೊಳಗಾದ ವಾತಾವರಣ ಆಗಾಗ ಆತಂಕಕ್ಕೆ ಕಾರಣವಾದರೂ ನಿಮ್ಮ ಮನೋಬಲ ನಿಮ್ಮನ್ನು ಕಾಪಾಡಲಿದೆ. ವ್ಯಾಪಾರಸ್ಥರು, ಸ್ವಂತ ದುಡಿಮೆಯವರು ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿರುತ್ತದೆ.
ಮೀನ: ಗುರುವಿನ ಅನುಗ್ರಹದಿಂದಾಗಿ ಸಾಮಾಜಿಕ ರಂಗದಲ್ಲಿ ಗೌರವ ದೊರಕಲಿದೆ. ಹಾಗೂ ವೃತ್ತಿರಂಗದಲ್ಲಿ ನೆಮ್ಮದಿಯ ಜತೆಗೆ ಹೊಸ ಅವಕಾಶಗಳು ಒದಗಿ ಬರಲಿವೆ. ಕಿರಿಕಿರಿ ಇದ್ದರೂ ನೆಮ್ಮದಿಯಿಂದ ಸಂತಸವಿದೆ.
ಎನ್.ಎಸ್ ಭಟ್