Advertisement

ಇಂದು ಪರಂ ವಿಚಾರಣೆ?

10:31 AM Oct 16, 2019 | mahesh |

ಬೆಂಗಳೂರು: ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್‌ ಅವರ ಮೇಲಿನ ಆದಾಯ ತೆರಿಗೆ ದಾಳಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮಂಗಳವಾರ ವಿಚಾರಣೆ ನಡೆಯಲಿದೆ.

Advertisement

ಪರಮೇಶ್ವರ್‌ ಅವರು ತುಮಕೂರು, ನೆಲಮಂಗಲಗಳಲ್ಲಿ ಹೊಂದಿರುವ ಶಿಕ್ಷಣ ಸಂಸ್ಥೆಗಳು, ಬೆಂಗಳೂರಿನ ಸದಾಶಿವನಗರದಲ್ಲಿನ ನಿವಾಸದ ಮೇಲೆ ಅ.10ರಂದು ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯಲಿದೆ. ಈ ಸಂದರ್ಭದಲ್ಲಿ ವಹಿವಾಟುಗಳಿಗೆ ಸಂಬಂಧಿಸಿದಂತೆ ಇರುವ ದಾಖಲೆಗಳನ್ನು ತರುವಂತೆಯೂ ಸೂಚನೆ ನೀಡಲಾಗಿದೆ.

ಸೋಮವಾರ ನಡೆದ ಬೆಳವಣಿಗೆಯಲ್ಲಿ ಪರಮೇಶ್ವರ್‌ಗೆ ಜಮೀನು ಮಾರಾಟ ಮಾಡಿದ್ದ ಮುನಿರಾಮಯ್ಯ ಹಾಗೂ ಅವರ ಆಪ್ತ ಶಿವಕುಮಾರ್‌ ಆದಾಯ ತೆರಿಗೆ ಇಲಾಖೆಯ ವಿಚಾರಣೆಗೆ ಹಾಜರಾದರು. ಅವರನ್ನು ಸಂಜೆ 4 ಗಂಟೆಯವರೆಗೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಬಳಿಕ ಪರಮೇಶ್ವರ್‌ ಜತೆಗಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿ ಇಬ್ಬರನ್ನೂ ಕಳುಹಿಸಲಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ನೆಲಮಂಗಲ ಪುರಸಭೆ ಮಾಜಿ ಅಧ್ಯಕ್ಷ ಕೆ.ಎನ್‌. ಶಿವಕುಮಾರ್‌ರನ್ನು ತೀವ್ರವಾಗಿಯೇ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಪರಮೇಶ್ವರ್‌ ಜತೆ ಹೊಂದಿರುವ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮುನಿರಾಮಯ್ಯ ಇತ್ತೀಚೆಗಷ್ಟೆ 8 ಎಕರೆ ಜಮೀನನ್ನು 5.5 ಕೋ.ರೂ.ಗೆ ಪರಮೇಶ್ವರ್‌ ಅವರಿಗೆ ಮಾರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next