Advertisement
ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಈ ದಿನ ಮನೆ ಮಂದಿ, ಸಂಬಂಧಿಕರಿಗೆಲ್ಲ ಬೇವು ಬೆಲ್ಲ ಹಂಚುವುದು ವಿಶೇಷ. ಜೀವನದಲ್ಲಿ ಸುಖ ದುಃಖವನ್ನು ಒಂದೇ ರೀತಿಯಲ್ಲಿ ತೆಗೆದುಕೊಳ್ಳಬೇಕು. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ನಡೆಯಬೇಕು. ಸುಖ ದುಃ ಖವನ್ನು ಸಮಾನವಾಗಿ ಬೇವು ಬೆಲ್ಲದಂತೆ ಸ್ವೀಕರಿಸಬೇಕು ಎಂಬ ಸಂದೇಶದೊಂದಿಗೆ ಹಂಚುತ್ತಾರೆ.
ಮೆಣಸು ಖಾರದ ರುಚಿಯನ್ನು ಹೊಂದಿದ್ದು ಕೋಪದ ಸಂಕೇತ. ಉಪ್ಪು ಭಯದ ಸಂಕೇತ, ಹುಣಿಸೆಹಣ್ಣು ವಾಕರಿಕೆ ತರಿಸುವಂತಹ
ಸಂದರ್ಭದ ಸಂಕೇತ. ಬಲಿಯದ ಮಾವಿನ ಕಾಯಿ ಒಗರಿನ ಗುಣ ಹೊಂದಿದ್ದು ಇದು ಅಹಿತ ಕರ ಸಂದರ್ಭದ ಸಂಕೇತವಾಗಿದೆ. ಜೀವನ ದಲ್ಲಿ ಬರುವ ಎಲ್ಲ ಘಟನೆಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬುದು ಇತರ ತಾತ್ಪರ್ಯ. ವೈಜ್ಞಾನಿಕ ಮಹತ್ವ
ಪ್ರತಿಯೊಂದು ಆಚರಣೆಗಳ ಹಿಂದೆ ಒಂದು ಕಾರಣ, ಸಂದೇಶ ಇದ್ದೇ ಇರುತ್ತದೆ. ಯುಗಾದಿಯ ಬೇವು ಬೆಲ್ಲ ಆಚರಣೆಯು
ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬೇವು ಔಷಧೀಯ ಸಸ್ಯವಾಗಿದ್ದು, ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿದೆ. ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಪ್ರೋಟಿನ್ ಮತ್ತು ಖನಿಜಾಂಶವನು ಹೊಂದಿದೆ.
Related Articles
ಪುಡಿ, ಹಸಿ ಹುಣಸೆಹಣ್ಣು, ಮಾವಿನ ಕಾಯಿಯ ತುರಿ ಮಿಶ್ರ ಮಾಡಿ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಕೋಪ ಕಡಿಮೆ ಮಾಡಲು ಇದು ಸಹಕಾರಿ. ಮನಸ್ಸಿಗೆ ಹರ್ಷ ನೀಡಿ ಚಟುವಟಿಕೆಯಿಂದಿರಲು, ದೇಹಕ್ಕೆ ಶಕ್ತಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇವು ಬೆಲ್ಲವನ್ನು ಊಟದ ಮೊದಲು ಸವಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
Advertisement
ಪಂಚಾಂಗ ಶ್ರವಣದ ಮಹತ್ವಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದು ಹಬ್ಬದ ವೈಶಿಷ್ಟ್ಯ ಹಾಗೂ ಸಂಪ್ರದಾಯ. ಅಂದು ಮಧ್ಯಾಹ್ನ ಅಥವಾ ಸಂಜೆ ಹಳ್ಳಿಗಳಲ್ಲಿ ಆಲದ ಮರದ ಕೆಳಗೆ, ದೇವಸ್ಥಾನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪಂಚಾಂಗ ಪಠಣ, ಸಾಮೂಹಿಕ ಶ್ರವಣ
ನಡೆಯುತ್ತದೆ. ಇದು ಮಹಾಭಾರತದ ಕಾಲದಿಂದಲೂ ನಡೆದುಕೊಂಡು ಬಂದಿದೆ. ಚಂದ್ರನ ಸ್ಥಾನ, ವಿವಿಧ ರಾಶಿ, ಗೃಹಗಳ ಸ್ಥಿತಿಗತಿ ಮುಂತಾದ ವಿಷಯಗಳ ಜತೆಗೆ ಧರ್ಮ, ಭಗವದ್ಗೀತೆ, ಪುರಾಣಗಳ ಸಾರವನ್ನು ತಿಳಿಸುವ ಅದ್ಭುತ ಕಾರ್ಯವೇ ಈ ಪಂಚಾಂಗ ಶ್ರವಣ. ಇದು ಹನುಮನ ದೇಗುಲದಲ್ಲಿ ಹೆಚ್ಚಾಗಿ ನಡೆಯುತ್ತದೆ. ಈ ಹಬ್ಬದ ದಿನ ಪಂಚಾಂಗ ಶ್ರವಣ ಮಾಡುವಾಗ ಸಂಪತ್ತು, ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗ ನಾಶ, ಕರಣದಿಂದ ಚಿಂತಿಸುವ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತದೆ ಎಂಬ ನಂಬಿಕೆ ಇದೆ. ಇದರಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ ಬೆಳೆ, ಆಯವ್ಯಯ, ಭವಿಷ್ಯ, ಯುದ್ಧ, ಶಾಂತಿ, ಹೀಗೆ ಮನುಕುಲದ ಒಳಿತು ಅಡಗಿರುವ
ವಿಚಾರಗಳೇ ಪ್ರಮುಖವಾಗಿರುತ್ತದೆ. ಬೇವಿನ ಎಲೆಗಳ ಆಯ್ಕೆ
ಬೇವಿನಲ್ಲಿ ನಾನಾ ಬಗೆಗಳಿವೆ. ಕಾಡುಬೇವು, ಸಿಹಿಬೇವು
ಇತ್ಯಾದಿ. ಕಾಡುಬೇವು ಒರಟಾದ ಎಲೆಯಾಗಿದ್ದು, ಕಹಿಯೊಂದಿಗೆ
ಸ್ವಲ್ಪ ಒಗರಾಗಿರುತ್ತದೆ. ಸಿಹಿಬೇವು ರುಚಿಯಾಗಿರುತ್ತದೆ ಮತ್ತು
ಎಲೆಗಳು ತೆಳುವಾಗಿ ತಿಳಿ ಹಸಿರಾಗಿರುತ್ತದೆ. ಸಾಮಾನ್ಯವಾಗಿ
ಸಿಹಿಬೇವು ಸವಿಯಲು ಉತ್ತಮ. ಬೆಲ್ಲ ಹೀಗಿರಲಿ
ಕೆಂಪಾದ ಬಂಗಾರದ ಬಣ್ಣದ ಆಕರ್ಷಕ ಬೆಲ್ಲದ ಅಚ್ಚುಗಳು
ಹೆಚ್ಚಾಗಿ ಆಕರ್ಷಕವಾಗಿ ಕಾಣುತ್ತದೆ. ಆದರೆ
ಇವುಗಳು ಹೆಚ್ಚು ಸುಣ್ಣದ ಅಂಶವನ್ನು ಹೊಂದಿದ್ದು
ಆರೋಗ್ಯದ ದೃಷ್ಟಿಯಿಂದ ಉತ್ತಮವಾದುದಲ್ಲ. ಕಪ್ಪಾದ
ಕಡು ಕೆಂಪು ಬಣ್ಣದ ಆರ್ಗಾನಿಕ್ ಬೆಲ್ಲ ಉತ್ತಮವಾದುದು. ವಿಶೇಷ ವರದಿ