Advertisement

ಇಂದು ಬಾಂಗ್ಲಾ-ಲಂಕಾ ಮೇಲಾಟ

12:45 AM Jun 11, 2019 | Sriram |

ಬ್ರಿಸ್ಟಲ್‌: ಏಶ್ಯದ ತಂಡಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಮಂಗಳವಾರದ ವಿಶ್ವಕಪ್‌ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಈವರೆಗೆ ಎರಡೂ ತಂಡಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ಕುತೂಹಲ ಹೆಚ್ಚಿದೆ.

Advertisement

ಲಂಕಾ ಮತ್ತು ಬಾಂಗ್ಲಾ ತಂಡಗಳೆರಡೂ ಈವರೆಗೆ 3 ಪಂದ್ಯಗಳನ್ನಾಡಿವೆ. ಒಂದನ್ನಷ್ಟೇ ಗೆದ್ದಿವೆ. ಬಾಂಗ್ಲಾ ಎರಡರಲ್ಲಿ ಸೋತರೆ, ಲಂಕಾದ ಒಂದು ಪಂದ್ಯ ರದ್ದಾಗಿದೆ.

ಬಾಂಗ್ಲಾ ಬಲಿಷ್ಠ!
ವಿಶ್ವಕಪ್‌ ಇತಿಹಾಸವನ್ನು ಗಮಿಸಿದರೆ ಲಂಕೆಯ ಮೇಲುಗೈ ಸ್ಪಷ್ಟವಾಗುತ್ತದೆ. ಆದರೆ ಈಗಿನ ತಂಡಗಳ ಬಲಾಬಲವನ್ನು ಅವಲೋಕಿಸಿದರೆ ಬಾಂಗ್ಲಾ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತಿದೆ. ಮುಖ್ಯವಾಗಿ ಬ್ಯಾಟಿಂಗ್‌ ವಿಭಾಗದಲ್ಲಿ ಮೊರ್ತಜ ಪಡೆ ಹೆಚ್ಚು ಬಲಶಾಲಿಯಾಗಿದೆ. ಶಕಿಬ್‌ ಅಲ್‌ ಹಸನ್‌ ಅವರಂತೂ ಪ್ರಚಂಡ ಫಾರ್ಮ್ ಹೊಂದಿದ್ದಾರೆ. ಆದರೆ ಲಂಕಾ ತಂಡದಲ್ಲಿ ಸ್ಟಾರ್‌ ಬ್ಯಾಟ್ಸ್‌ ಮನ್‌ಗಳ ಕೊರತೆ ಕಾಡುತ್ತಿದೆ.

ಇತ್ತಂಡದಲ್ಲೂ ಬೌಲಿಂಗ್‌ ಸಮಸ್ಯೆ
ಬೌಲಿಂಗ್‌ನಲ್ಲಿ ಎರಡೂ ಸಮಬಲ ಎನ್ನಲಡ್ಡಿಯಿಲ್ಲ. ಅರ್ಥಾತ್‌, ಯಾವ ತಂಡದಲ್ಲೂ ಘಾತಕ ಬೌಲರ್‌ಗಳಿಲ್ಲ. ಹೀಗಾಗಿ ಬೌಲಿಂಗ್‌ ಸಾಮರ್ಥ್ಯದಿಂದಲೇ ಪಂದ್ಯ ಗೆಲ್ಲುವುದು ಅಸಾಧ್ಯ ಎಂದೇ ಹೇಳಬೇಕಾಗುತ್ತದೆ.

ಸಂಭಾವ್ಯ ತಂಡಗಳು
ಶ್ರೀಲಂಕಾ:
ದಿಮುತ್‌ ಕರುಣರತ್ನೆ (ನಾಯಕ), ಕುಸಲ್‌ ಪೆರೆರ, ಲಹಿರು ತಿರಿಮನ್ನೆ, ಕುಸಲ್‌ ಮೆಂಡಿಸ್‌, ಏಂಜೆಲೊ ಮ್ಯಾಥ್ಯೂಸ್‌, ಧನಂಜಯ ಡಿ ಸಿಲ್ವ, ತಿಸರ ಪೆರೆರ, ಇಸುರು ಉದಾನ, ಸುರಂಗ ಲಕ್ಮಲ್‌, ಲಸಿತ ಮಾಲಿಂಗ, ನುವಾನ್‌ ಪ್ರದೀಪ್‌/ಜೆಫ್ರಿ ವಾಂಡರ್ಸೆ.

Advertisement

ಬಾಂಗ್ಲಾದೇಶ:
ತಮಿಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಕಿಬ್‌ ಅಲ್‌ ಹಸನ್‌, ಮುಶ್ಫಿಕರ್‌ ರಹೀಂ, ಶಬ್ಬೀರ್‌ ರಹಮಾನ್‌, ಮಹಮದುಲ್ಲ, ಮೊಸದ್ದೆಕ್‌ ಹೊಸೈನ್‌, ಮೊಹಮ್ಮದ್‌ ಸೈಫ‌ುದ್ದೀನ್‌, ಮೆಹಿದಿ ಹಸನ್‌, ಮಶ್ರಫೆ ಮೊರ್ತಜ (ನಾಯಕ), ಮುಸ್ತಫಿಜುರ್‌ ರಹಮಾನ್‌.


Advertisement

Udayavani is now on Telegram. Click here to join our channel and stay updated with the latest news.

Next