ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾನುವಾರ ಉದ್ಘಾಟನೆಯಾಗಲಿದೆ. ಕಣ್ಣೂರಿನಿಂದ 16 ಕಿ.ಮೀ. ದೂರದ ಮಟ್ಟನ್ನೂರ್‌ನಲ್ಲಿರುವ ಏರ್‌ಪೋರ್ಟ್ ಅನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಲೋಕಾರ್ಪಣೆ ಮಾಡಲಿದ್ದಾರೆ. ನಿಲ್ದಾಣದಲ್ಲಿ ಇಂದಿನಿಂದ ಆರಂಭಗೊಳ್ಳಲಿರುವ ವಿಮಾನಯಾನ ಸೌಲಭ್ಯಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು, ಸಹಾಯಕ ಸಚಿವ ಜಯಂತ್ ಸಿನ್ಹಾ, ಪಿಣರಾಯಿ ವಿಜಯನ್ ಜಂಟಿಯಾಗಿ ಹಸಿರು ನಿಶಾನೆ ತೋರಲಿದ್ದಾರೆ. ಭಾನುವಾರದಿಂದಲೇ ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈಗೆ ವಿಮಾನ ಸೇವೆ ಆರಂಭಿಸುವುದಾಗಿ “ಏರ್ ಗೋ’ ಸಂಸ್ಥೆ ತಿಳಿಸಿದೆ.
ಕೇರಳಕ್ಕೆ ಹೆಗ್ಗಳಿಕೆ: ಇಡೀ ಭಾರತದಲ್ಲಿ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ಏಕೈಕ ರಾಜ್ಯ ವೆಂಬ ಖ್ಯಾತಿಗೆ ಕೇರಳ ಭಾಜನವಾಗ ಲಿದೆ. ದೇವರ ರಾಜ್ಯಕ್ಕೆ ಈ ಹೆಗ್ಗಳಿಕೆ ತಂದು ಕೊಟ್ಟಿರುವುದು ಕಣ್ಣೂರು ವಿಮಾನ ನಿಲ್ದಾಣ. ಇದಲ್ಲದೆ, ತಿರು ವನಂತ ಪುರ, ಕೊಚ್ಚಿ, ಕಲ್ಲಿಕೋಟೆಗಳಲ್ಲಿ ಉಳಿದ ಮೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ.
2016ರಲ್ಲೇ ಶುರುವಾಗಿತ್ತು ಹಾರಾಟ: 2 ವರ್ಷಗಳ ಹಿಂದಿನಿಂದಲೂ ನಿಲ್ದಾಣ ದಲ್ಲಿ ಪ್ರಾಯೋಗಿಕ ಹಾರಾಟ ನಡೆಸ ಲಾಗಿತ್ತು. 2016ರಲ್ಲಿ ಮೊದಲ ಬಾರಿಗೆ ವಾಯುಪಡೆ ವಿಮಾನವೊಂದನ್ನು ಪ್ರಾಯೋಗಿಕವಾಗಿ ಇಲ್ಲಿ ಇಳಿಸಲಾಗಿತ್ತು. ಆಗ, ಕೇರಳದ ಸಿಎಂ ಆಗಿದ್ದ ಉಮ್ಮನ್ ಚಾಂಡಿ, ವಿಮಾನವನ್ನು ಸ್ವಾಗತಿಸಿದ್ದರು. ನಂತರ ಇಲ್ಲಿ ಇಂಥ ಹಲವಾರು ಪ್ರಯೋಗಗಳಾಗಿವೆ.
ನಿಲ್ದಾಣದ ಪ್ರಾಮುಖ್ಯತೆ: ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಕೇರಳ ಹೊಂದಿರುವ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಈ ಹೊಸ ವಿಮಾನ ನಿಲ್ದಾಣ. ಕೊಡಗು, ಮೈಸೂರು, ಬೇಕಲ್ ಹಾಗೂ ವಯ ನಾಡ್ ಗಳಿಗೆ ಬರುವ ದೇಶೀಯ, ಅಂತಾ ರಾಷ್ಟ್ರೀಯ ಪ್ರವಾಸಿಗರಿಗೆ ಪ್ರಮುಖ ಗಮ್ಯ ತಾಣವಾಗಲಿದೆ. ಹಾಗಾಗಿ, ಕೇರಳ, ಕರ್ನಾಟಕ ರಾಜ್ಯಗಳ ಪ್ರವಾ ಸೋದ್ಯಕ್ಕೆ ಮತ್ತಷ್ಟು ಪುಷ್ಟಿ ನೀಡಲಿದೆ.
ವಿಡಿಯೋ ಸಾಂಗ್
ನಿಲ್ದಾಣ ಉದ್ಘಾಟನೆ ಹಿನ್ನೆಲೆಯಲ್ಲಿ ನಿರ್ಮಾಪಕ, ನಿರ್ದೇಶಕ ವಿನೀತ್ ಶ್ರೀನಿವಾಸನ್ ವಿಡಿಯೋ ಹಾಡೊಂ ದನ್ನು ಬಿಡುಗಡೆ ಮಾಡಿ ದ್ದಾರೆ. ಈ ಹಾಡು ಸೂಪರ್ ಹಿಟ್ ಆಗಿದೆ. “ಆಕಾಶಪಕ್ಷಿ ಚೆಕೇರುವನ್’ ಎಂಬ ಸಾಲಿ ನೊಂದಿಗೆ ಶುರುವಾಗುವ ಈ ಹಾಡನ್ನು ಅತ್ಯಂತ ಭಾವುಕತೆಯಿಂದ, ಸುಶ್ರಾವ್ಯ ವಾಗಿ ಹಾಡಿರುವ ವಿನೀತ್, ಕೋಟ್ಯಂತರ ಕೇರಳಿಗರ ಹೃದಯದ ಭಾವನೆ ಗಳನ್ನು ತೆರೆದಿಟ್ಟಿ ದ್ದಾರೆಂದು ಮಾಧ್ಯಮಗಳು ಬಣ್ಣಿಸಿವೆ.
ಏನಿದರ ವಿಶೇಷ?
ನಿರ್ಮಾಣ ವೆಚ್ಚ – 1,892 ಕೋಟಿ ರೂ.
ನಿಲ್ದಾಣದ ವ್ಯಾಪ್ತಿ – 2,330 ಎಕರೆ
ಸದ್ಯಕ್ಕಿರುವ ರನ್ ವೇ ಉದ್ದ – 10,006 ಅಡಿ
ವಿಸ್ತರಣೆ ನಂತರ ರನ್ ವೇ ಉದ್ದ – 13,123 ಅಡಿ
ವಾರ್ಷಿಕ ಪ್ರಯಾಣಿಕರ ನಿರೀಕ್ಷೆ – 1.5 ಕೋಟಿ