Advertisement
ಈವರೆಗಿನ ಟಿ20 ಸರಣಿ ಇತಿಹಾಸದಲ್ಲಿ ಯಾವ ತಂಡವೂ 5 0 ಅಂತರದ ಕ್ಲೀನ್‌ಸ್ವೀಪ್ ಪರಾಕ್ರಮ ಮೆರೆದಿಲ್ಲ. ಇದು 5 ಪಂದ್ಯಗಳ ಕೇವಲ 4ನೇ ಸರಣಿಯಾಗಿದ್ದು, ಟಿ20 ವಿಶ್ವಕಪ್ ವರ್ಷದಲ್ಲಿ ಭಾರತ ನೂತನ ಅಧ್ಯಾಯವೊಂದನ್ನು ಬರೆಯಲು ಸಜ್ಜಾಗಿದೆ.
ಅಂತಿಮ ಪಂದ್ಯದಲ್ಲಿ ಭಾರತ ಇನ್ನಷ್ಟು ಪ್ರಯೋಗ ಮಾಡುವುದರಲ್ಲಿ ಅನುಮಾನವಿಲ್ಲ. ನಾಯಕ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಆಗ, ಕಳೆದ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನಿಂಗ್ಸ್ ಆರಂಭಿಸಲು ಸಂಜು ಸ್ಯಾಮ್ಸನ್‌ಗೆ ಇನ್ನೊಂದು ಅವಕಾಶ ಲಭಿಸಲಿದೆ.
ತಂಡದ ಪ್ರಧಾನ ಕೀಪರ್ ಕೂಡ ಆಗಿರುವ ರಾಹುಲ್ ಆಡದೇ ಹೋದರೆ ರಿಷಭ್ ಪಂತ್ ಮರಳಿ ಕೀಪಿಂಗ್ ಹೊಣೆ ನಿಭಾಯಿಸಬೇಕಾಗುತ್ತದೆ.
Related Articles
Advertisement
ಆಸ್ಟ್ರೇಲಿಯದಲ್ಲೇ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಸೀಸ್ ಉಪಖಂಡದಲ್ಲೇ ನಡೆದ ಈ ಸರಣಿ ಭಾರತಕ್ಕೆ ಭಾರೀ ಬೂಸ್ಟ್ ಆಗಿ ಪರಿಣಮಿಸಿದೆ. ಅಲ್ಲದೇ ಐಪಿಎಲ್ ಹೊರತುಪಡಿಸಿದರೆ, ಈ ವಿಶ್ವಕಪ್ ಕೂಟಕ್ಕೂ ಮುನ್ನ ಭಾರತದ ಮತ್ತೂಂದು ಟಿ20 ಸರಣಿ ಇನ್ನೂ ಅಧಿಕೃತಗೊಂಡಿಲ್ಲ.
ವಿಲಿಯಮ್ಸನ್ ಫಿಟ್?ಭುಜದ ನೋವಿಗೆ ಸಿಲುಕಿ 4ನೇ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಫಿಟ್‌ನೆಸ್ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಅವರು ಆಡಲೂಬಹುದು. ಅಥವಾ ಮುಂಬರುವ ಏಕದಿನ ಸರಣಿಯ ಹಿನ್ನೆಲೆಯಲ್ಲಿ ವಿಶ್ರಾಂತಿ ಮುಂದುವರಿಯಲೂಬಹುದು. ಆದರೆ ಯಾರೇ ಬಂದರೂ ನ್ಯೂಜಿಲ್ಯಾಂಡ್ ತಂಡದ ಅದೃಷ್ಟವನ್ನು ಬದಲಿಸಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದಂತೂ ಸತ್ಯ! ಅಂಕಿ ಅಂಶ
ಮೌಂಟ್ ಮೌಂಗನಿಯಲ್ಲಿ ಆಡಿದ 6 ಟಿ20 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ನಾಲ್ಕನ್ನು ಗೆದ್ದಿದೆ. ಒಂದು ರದ್ದುಗೊಂಡಿದೆ. 2018ರಲ್ಲಿ ಪಾಕ್ ವಿರುದ್ಧ 18 ರನ್ ಸೋಲನುಭವಿಸಿದೆ. ಅನಂತರ ಇಲ್ಲಿ ಟಿ20 ಪಂದ್ಯ ನಡೆದಿಲ್ಲ. ಭಾರತ ಇಲ್ಲಿ ಟಿ20 ಪಂದ್ಯ ಆಡುತ್ತಿರುವುದು ಇದೇ ಮೊದಲು.
ರೋಹಿತ್ ಶರ್ಮ ಇನ್ನು 31 ರನ್ ಮಾಡಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ 8ನೇ ಕ್ರಿಕೆಟಿಗನಾಗಲಿದ್ದಾರೆ. ಭಾರತ
ರೋಹಿತ್ ಶರ್ಮ (ನಾಯಕ), ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾದೂìಲ್ ಠಾಕೂರ್, ಕುಲದೀಪ್ ಯಾದವ್, ನವದೀಪ್ ಸೈನಿ, ಮೊಹಮ್ಮದ್ ಶಮಿ.
ನ್ಯೂಜಿಲ್ಯಾಂಡ್
ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಟಿಮ್ ಸೀಫರ್ಟ್, ರಾಸ್ ಟೇಲರ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ (ನಾಯಕ), ಹಾಮಿಶ್ ಬೆನೆಟ್, ಸ್ಕಾಟ್ ಕ್ಯುಗೆಲೀನ್.