ಬೆಂಗಳೂರು: ತಂಬಾಕು ಸೇವನೆ ನಿಯಂತ್ರಣಕ್ಕೆ ದೇಶದಲ್ಲಿ ಸಮಗ್ರ ಕಾನೂನು ವ್ಯವಸ್ಥೆ ಇದರೂ, ಸಾರ್ವಜನಿಕವಾಗಿ ತಂಬಾಕು ಸೇವನೆ ತಡೆಯುವುದೇ ದೊಡ್ಡ ಸವಾಲಾಗಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವಾ ಹೇಳಿದ್ದಾರೆ.
ತಂಬಾಕು ದುಷ್ಪರಿಣಾಮಗಳ ಕುರಿತು ರಾಜ್ಯಮಟ್ಟದ ಲೋಗೋ ರಚನೆ ಸ್ಪರ್ಧೆಯ ವಿಜೇತರಿಗೆ ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗದ ಕಚೇರಿಯಲ್ಲಿ ಬುಧವಾರ ಬಹುಮಾನ ವಿತರಿಸಿ ಮಾತನಾಡಿದ ಅವರು, ಮಾದಕ ವಸ್ತು ಮಾರಾಟ ಜಾಲಕ್ಕೆ ಪಂಜಾಬ್ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಎಲ್ಲಾ ಮಾದರಿಯ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ನಿಷೇಧಿಸುವ ಅಗತ್ಯವಿದೆ ಎಂದು ತಿಳಿಸಿದರು.
ತಂಬಾಕು ಸೇವನೆ ನಿಯಂತ್ರಣಕ್ಕೆ ಆಯೋಗದಿಂದ ಹಲವು ಕಾರ್ಯಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿಯೇ ಪ್ರತ್ಯೇಕ ಕಾನೂನು ಇದ್ದರೂ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆ ನಿಷೇಧಕ್ಕೆ ಕಟ್ಟು ನಿಟ್ಟಿನ ಕ್ರಮ ಅಗತ್ಯ ಎಂದು ಹೇಳಿದರು.
ತಂಬಾಕು ನಿಯಂತ್ರಣ ಉನ್ನತ್ತ ಮಟ್ಟದ ಸಮಿತಿಯ ಸದಸ್ಯ ಡಾ.ವಿಶಾಲ್‌ರಾವ್ ಮಾತನಾಡಿ, ರಾಜ್ಯದಲ್ಲಿ ಇ-ಸಿಗರೇಟ್‌ಗಳ ಮಾರಾಟಕ್ಕೆ ನಿಷೇಧವಿದ್ದರೂ ಅಂಗಡಿಗಳಲ್ಲಿ ಸಲೀಸಾಗಿ ಸಿಗುತ್ತಿದೆ. ಇದರಿಂದ ಕ್ಯಾನ್ಸರ್ ಪೀಡಿತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಲಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ರಾಜ್ಯದ ಶೇ.15ರಷ್ಟು ಹದಿಹರೆಯದ ಮಕ್ಕಳು ತಂಬಾಕು ವ್ಯಸನಿಗಳಾಗಿದ್ದಾರೆ ಎಂದರು.
ಸಾಗರದ ಪವನ್ ಕುಮಾರ್ ಪ್ರಥಮ ತಂಬಾಕು ದುಷ್ಪರಿಣಾಮಗಳ ಕುರಿತು ಏರ್ಪಡಿ ಸಲಾಗಿದ್ದ ರಾಜ್ಯಮಟ್ಟದ ಲೋಗೋ ರಚನೆ ಸ್ಪರ್ಧೆಯಲ್ಲಿ ಸಾಗರದ ರಾಮಕೃಷ್ಣ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಎಸ್.ಪಿ ಪವನ್‌ಕುಮಾರ್ ಪ್ರಥಮ (10 ಸಾವಿರ ರೂ.), ಬಾಗಲಕೋಟೆಯ ರಬಕವಿಯ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ನಿಖೀತಾ ಸಿಕ್ಕಲಗಾರ 2ನೇ ಬಹುಮಾನ(8 ಸಾವಿರ ರೂ.)ಕ್ಕೆ ಭಾಜನರಾಗಿದ್ದಾರೆ. ದಾವಣಗೆರೆಯ ಜಯದೇವ ಮುರಗರಾ ಜೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿ ಎಲ್.ಸೋಮಶೇಖರ್‌ಗೆ 3ನೇ(2500 ರೂ.) ಹಾಗೂ ದೊಡ್ಡಬಳ್ಳಾಪುರದ ಕಾರ್ಮೆಲ್ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭಾವನ ಚೌಧರಿ 4ನೇ ಬಹುಮಾನ (2500 ರೂ.) ಪಡೆದುಕೊಂಡಿದ್ದಾರೆ.