Advertisement
ಹೆಚ್ಚಾಗಿ ತಂಬಾಕು ಬಳಕೆ ಮಾಡುವ ಪೆಟ್ಟಿ ಅಂಗಡಿ, ವೈನ್‌ಶಾಪ್ ಸಹಿತ ಮತ್ತಿತರ ಪ್ರದೇಶಗಳ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣು ಇಟ್ಟಿದ್ದು, ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸುವ ಪಣ ತೊಟ್ಟಿದೆ. ಈವರೆಗೆ ಜಿಲ್ಲಾ ಮಟ್ಟದಲ್ಲಿ ನಗರ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಯುತ್ತಿತ್ತು. ಇದೀಗ ತಾ| ಮಟ್ಟಕ್ಕೆ ವಿಸ್ತರಣೆ ಮಾಡಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಎಚ್ಚರಿಕೆಯ ಫಲಕ ಇಲ್ಲದಿರುವುದು ಅಲ್ಲದೆ, ಸಾರ್ವಜನಿಕ ಸ್ಥಳದಲ್ಲಿ ಲೈಟರ್, ಬೆಂಕಿ ಕಡ್ಡಿ ಪೊಟ್ಟಣ ಇಟ್ಟರೆ 200 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ತಂಬಾಕು ಬ್ರಾಂಡ್ ಹೆಸರಿನೊಂದಿಗೆ ಜಾಹೀರಾತು ಫಲಕ, ಯಾವುದೇ ರೂಪ ದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಮೊದಲ ಅಪರಾಧಕ್ಕೆ 1,000 ರೂ. ದಂಡ ಅಥವಾ 2 ವರ್ಷ ಜೈಲು ಶಿಕ್ಷೆ ಅಥವಾ ಈ ಎರಡೂ ಶಿಕ್ಷೆ ವಿಧಿಸಬ ಹುದು. ಪದೇ ಪದೇ ಅಪರಾಧ ಎಸಗಿ ದರೆ 5,000 ರೂ. ದಂಡ ಅಥವಾ 5 ವರ್ಷ ಜೈಲು ಶಿಕ್ಷೆ ನೀಡಬಹುದು. 18 ವರ್ಷ ಒಳಗಿನವರಿಗೆ ತಂಬಾಕು ಉತ್ಪನ್ನಗಳ ಮಾರಾಟ, ಚಿಲ್ಲರೆ ಅಂಗಡಿಗಳಲ್ಲಿ ಸೂಚನ ಫಲಕ ಹಾಕದಿ ರುವುದು, ತಂಬಾಕು ಉತ್ಪನ್ನಗಳ ಪ್ರದರ್ಶನಕ್ಕೆ 200 ರೂ. ದಂಡ ವಿಧಿಸಬ ಹುದು. ತಂಬಾಕು ಉತ್ಪನ್ನ ಪ್ಯಾಕ್‌ನಲ್ಲಿ ಆರೋಗ್ಯ ಎಚ್ಚರಿಕೆಯ ಚಿತ್ರಗಳು ಇರದಿರುವುದು, ಎಚ್ಚರಿಕೆ ಚಿತ್ರ ಗಳು ಶೇ.85ಕ್ಕಿಂತ ಕಡಿಮೆ ಅಳತೆಯ ಲ್ಲಿರು ವುದು, ಹಳೆಯ ಎಚ್ಚರಿಕೆ ಚಿತ್ರ ಹಾಕಿ ದ್ದರೆ ತಯಾರಕರಿಗೆ ಮೊದಲನೇ ಅಪರಾ ಧಕ್ಕೆ 2 ವರ್ಷ ಶಿಕ್ಷೆ ಅಥವಾ 5,000 ರೂ. ದಂಡ, ಎರಡನೇ ಅಪರಾಧಕ್ಕೆ 5 ವರ್ಷ ಶಿಕ್ಷೆ ಅಥವಾ 5.000ರೂ. ದಂಡ ವಿಧಿಸ ಬ ಹುದು. ಚಿಲ್ಲರೆ ವ್ಯಾಪಾರಿಗಳಿಗೆ ಮೊದಲ ಅಪ ರಾಧಕ್ಕೆ 1 ವರ್ಷ ಶಿಕ್ಷೆ ಅಥವಾ 1,000 ರೂ. ದಂಡ, ಎರಡನೇ ಅಪರಾಧಕ್ಕೆ 2 ವರ್ಷ ಶಿಕ್ಷೆ ಅಥವಾ 3,000 ರೂ. ದಂಡ ವಿಧಿ ಸಲು ಕಾನೂನಿ ನಲ್ಲಿ ಅವಕಾಶವಿದೆ.
Related Articles
ಎಲ್ಲ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ 100 ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ತಂಬಾಕು ಸೇವನೆ ನಿಷೇಧ ಎಂಬ ನಿಯಮವಿದೆ. ಶೇ.98.36ರಷ್ಟು ಶಾಲೆ ಮತ್ತು ಶೇ.97.5ರಷ್ಟು ಕಾಲೇಜುಗಳಲ್ಲಿ ನೋ ಸ್ಮೋಕಿಂಗ್ ವಲಯ ಮಾಡಲಾಗಿದೆ. ತಂಬಾಕು ನಿಯಂತ್ರಣ ಘಟಕವು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಕಾರ್ನರ್ ಮಾಡುವ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ವಿನೂತನವಾಗಿ ಡಿಸೈನ್ ಮಾಡಲಾದ ತಂಬಾಕು ಸೇವನೆ ಪರಿಣಾಮಗಳ ಕುರಿತು ಕಿರುಚಿತ್ರಗಳನ್ನು ತೋರಿಸುವುದು, ಜಾಗೃತಿ ಮೂಡಿಸುವುದು
Advertisement
ಈ ಕಾರ್ನರ್ ಉದ್ದೇಶ. ಅನಧಿಕೃತ ತಂಬಾಕು ಮಾರಾಟ ತಡೆಗೆ ಕ್ರಮ ದಕ್ಷಿಣ ಕನ್ನಡ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪ್ರತೀ ತಾಲೂಕು ಮಟ್ಟದಲ್ಲಿ ಅನಧಿಕೃತ ತಂಬಾಕು ಮಾರಾಟ ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆಗೆ ತಂಡ ರಚಿಸಲಾಗುವುದು. ಇದೇ ತಿಂಗಳು ತರಬೇತಿ ಬಳಿಕ, ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು.- ಸಿಂಧೂ ಬಿ. ರೂಪೇಶ್, ಜಿಲ್ಲಾಧಿಕಾರಿ - ನವೀನ್ ಭಟ್ ಇಳಂತಿಲ