Advertisement
ಇಳುವರಿ ಇಲ್ಲದ ಪರಿಣಾಮ ವರ್ತಕರು ಹೊಗೆಸೊಪ್ಪು ಖರೀದಿಗೆ ಮುಗಿಬಿದ್ದಿದ್ದರು. ಹೀಗಾಗಿ, ಮಾರುಕಟ್ಟೆ ದರ ಸುಧಾರಣೆ ಕಾಣಲಿದ್ದು, ಒಂದು ಕೇಜಿ 300 ರೂ. ಗಡಿ ದಾಟಿ ದಾಖಲೆ ದರ ದೊರಕಲಿದೆ ಎನ್ನುವ ಆಸೆ ರೈತರಲ್ಲಿ ಚಿಗುರೊಡೆದಿತ್ತು.ದುರಾದೃಷ್ಟವಶಾತ್ 300 ರೂ. ಗಡಿ ದಾಟುವುದಿರಲಿ, ಸ್ಥಿರ ಬೆಲೆ ಕೂಡ ಉಳಿಯಲಿಲ್ಲ. 270ಕ್ಕೆ ಮಾರಾಟ ಆಗುತ್ತಿದ್ದ ಬೆಲೆ 245ಕ್ಕೆ ಕುಸಿತ ಕಂಡಿತು.
Related Articles
Advertisement
3 ಮಿಲಿಯನ್ ಕೇಜಿ ಸೊಪ್ಪು ಕುಂಠಿತ: ಕಳೆದ ವರ್ಷ 4.83 ಮಿಲಿಯನ್ ಮಾರಾಟವಾಗಿ 76.84 ಕೋಟಿ ರೂ. ವಹಿವಾಟು ನಡೆದಿತ್ತು. 196 ರೂ. ಗರಿಷ್ಠ, 100 ರೂ. ಕನಿಷ್ಠ ಮತ್ತು 154 ರೂ. ಸರಾಸರಿ ದರ ದೊರೆತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಅಂದಾಜು ಮೂರು ಮಿಲಿಯನ್ ಕೇಜಿ ಹೊಗೆಸೊಪ್ಪು ಇಳುವರಿ ಕುಂಠಿತಗೊಂಡಿದೆ.
ವೆಚ್ಚದ ಹೊಡೆತ: ಪ್ರಸಕ್ತ ವರ್ಷ ಅತಿವೃಷ್ಟಿ ಪರಿಣಾಮ ಇಳುವರಿ ಇಲ್ಲವಾಗಿ ರೈತರು ಹೊಗೆಸೊಪ್ಪು ಬೆಳೆಗೆ ವ್ಯಯಿಸಿದ್ದ ವೆಚ್ಚ ಕೂಡ ಭರಿಸಲಾಗುತ್ತಿಲ್ಲ. ತಂಬಾಕು ನಾಟಿ ಮಾಡಿದ ನಂತರ ಸಾಲ ಮಾಡಿ ರೈತರು ರಸಗೊಬ್ಬರ ನೀಡಿದ್ದರು. ಬೆಳವಣಿಗೆ ಹಂತದಲ್ಲಿ ಶುರುವಾದ ಮಳೆ, ಬೆಳೆ ಕಟಾವು ಮುಗಿಯುವ ತನಕ ಬಿಡುವಿಲ್ಲದೆ ಸುರಿಯಿತು.ಅತಿವೃಷ್ಟಿಗೆ ಸಿಲುಕಿ ಬಹುತೇಕ ಬೆಳೆ ನಾಶವಾಯಿತು.ಇದೀಗ ಅತಿವೃಷ್ಟಿ ಪರಿಣಾಮಗಳನ್ನು ಎದುರಿಸಿ, ಉತ್ಪಾದಿಸಿದ್ದ ಕನಿಷ್ಠ ಪ್ರಮಾಣದ ತಂಬಾಕಿಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ.
ಹುಡಿ ಹೊಗೆಸೊಪ್ಪಿಗೆ ಖುದುರಿದ ದರ: ತಂಬಾಕು ಉತ್ಪಾದಿಸಿ ಬೇಲ್ ಸಿದ್ಧಪಡಿಸಿದ ನಂತರ ಸಿಗುವ ಹೊಗೆಸೊಪ್ಪು ಹುಡಿಗೂ ಈ ಬಾರಿ ಮಾರುಕಟ್ಟೆಯಲ್ಲಿ ಬೇಡಿಕೆ ಬಂದಿತ್ತು. ಅತಿವೃಷ್ಟಿಗೆ ಇಳುವರಿ ಕುಂಠಿತ ಗೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಹುಡಿ ಬೇಲ್ ಗಳನ್ನು ಖರೀದಿಸಲಾಯಿತು. ಸಾಮಾನ್ಯವಾಗಿ ಕೇಳು ವವರೇ ಇಲ್ಲದೆ ಹುಡಿ ಸೊಪ್ಪು ಬಿಸಾಡಲಾಗುತ್ತಿತ್ತು. ಹಳ್ಳಿಗಳಲ್ಲಿ ಟಂ ಟಂ ಗಾಡಿ ತೆಗೆದುಕೊಂಡು ಹೋಗಿ ದಲ್ಲಾಳಿಗಳು, ಸಣ್ಣ ವ್ಯಾಪಾರಿಗಳು ರೈತರಿಂದ ಹುಡಿ ಹೊಗೆಸೊಪ್ಪನ್ನು ಒಂದು ಕೇಜಿಗೆ ಕೇವಲ 10ರಿಂದ 12 ರೂ.ಗೆ ಖರೀದಿಸುತ್ತಿದ್ದರು.
ಚಾಮರಾಜನಗರ, ಗುಂಡ್ಲುಪೇಟೆ ಭಾಗದಲ್ಲಿ ಬೀಡಿ ಕಟ್ಟಲು ಕೊಂಡೊಯ್ಯುತ್ತಿದ್ದ ಹುಡಿ ಸೊಪ್ಪಿಗೆ ಬೇಡಿಕೆ ಬಾರದ ಕಾರಣ, ಹಳ್ಳಿ ಹಳ್ಳಿಗಳಲ್ಲಿ ಪ್ರತಿ ವರ್ಷ ಇವರು ವ್ಯಾಪಾರದ ದಂಧೆ ಮಾಡಿಕೊಂಡಿದ್ದರು. ಅದೃಷ್ಟವಶಾತ್ ಈ ಬಾರಿ ಮಾರುಕಟ್ಟೆಯಲ್ಲಿ ಒಂದು ಕೇಜಿ ಹುಡಿ ಹೊಗೆಸೊಪ್ಪು ಬರೋಬರಿ 80 ರೂ.ಗೆ ಮಾರಾಟವಾಗಿ ಬೆಳೆಗಾರರು ಹುಬ್ಬೇರುವಂತೆ ಮಾಡಿತ್ತು. ಅಲ್ಲದೆ, ಆರಂಭದಲ್ಲಿ ಬೀದಿ ವ್ಯಾಪಾರಿಗಳಿಗೆ 10ರಿಂದ 12 ರೂ.ಗೆ ಹುಡಿ ಸೋಪ್ಪು ಮಾರಾಟ ಮಾಡಿದ್ದ ರೈತ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ಹೊಗೆಸೊಪ್ಪಿಗೆ ವಿದೇಶದಲ್ಲಿ ಉತ್ತಮ ಬೆಲೆ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾತ್ರ ಬೇಕಾಬಿಟ್ಟಿ ಬೆಲೆಗೆ ಖರೀದಿಸಲಾಗುತ್ತಿದೆ. ಬೆಳೆಗಾರರು ಬೆಲೆ ಕುಸಿತದಿಂದ ತತ್ತರಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವಿಗೆ ಬರುತ್ತಿಲ್ಲ. ಬೆಳೆಗಾಗಿ ಖರ್ಚು ಮಾಡಿದ ಹಣ ಕೂಡ ಸಿಗುತ್ತಿಲ್ಲ. ಕಷ್ಟಪಟ್ಟು ಹೊಗೆಸೊಪ್ಪು ಬೆಳೆದ ರೈತರು ಆರ್ಥಿಕವಾಗಿ ಸಬಲರಾಗುತ್ತಿಲ್ಲ. ಇದೇ ತಂಬಾಕು ಖರೀದಿಸುವ ಕಾರ್ಪೊರೇಟ್ ಕಂಪನಿಗಳು ಶ್ರೀಮಂತವಾಗುತ್ತಿವೆ.●ಯೋಗಣ್ಣ, ತಾಲೂಕು ರೈತ ಸಂಘದ ಅಧ್ಯಕ್ಷ ಅತಿವೃಷ್ಟಿ ಪರಿಣಾಮ ಈ ಬಾರಿ 5.8 ಮಿಲಿಯನ್ ಕೇಜಿ ತಂಬಾಕು ಖರೀದಿಸುವ ಗುರಿ ಇತ್ತು. ಸದ್ಯಕ್ಕೆ 4.1 ಮಿಲಿಯನ್ ಮಾರಾಟವಾಗಿದೆ. ಅತಿ ಮಳೆಯಿಂದ ಹೊಗೆಸೊಪ್ಪು ತೂಕದಲ್ಲಿ ಇಳಿಕೆಯಾಗಿದೆ. ಆರಂಭದ ಹರಾಜು ಪ್ರಕ್ರಿಯೆಯಲ್ಲಿ ತಂಬಾಕಿಗೆ ಉತ್ತಮ ಬೇಡಿಕೆ ಬಂದಿದೆ. ಒಂದು ಕೇಜಿಗೆ 265 ರಿಂದ 270 ರೂ. ದಾಖಲೆ ಮಟ್ಟದ ಬೆಲೆ ನೀಡಲಾಗಿತ್ತು. ಉತ್ತಮ ಬೆಲೆ ಇದ್ದಾಗ ಬೆಳೆಗಾರರು ಹೊಗೆಸೊಪ್ಪು ಮಾರಾಟ ಮಾಡಿಕೊಳ್ಳುವಂತೆ ಹೇಳಿದರೂ, ಬೇಲ್‌ಗಳನ್ನು ತರಲು ಹಿಂದೇಟು ಹಾಕಿದರು. ಮಾರುಕಟ್ಟೆ ಹರಾಜು ಮುಕ್ತಾಯ ಹಂತದಲ್ಲಿದೆ. ಎಲ್ಲಾ ರೈತರು ಬೇಲ್ ಗಳನ್ನು ತಂದು ಮಾರಾಟ ಮಾಡಿಕೊಳ್ಳಬೇಕು.
● ಐಸಾಕ್ ಸೊರೆನ್ ದತ್ತ, (ಫ್ಲಾಟ್ ಫಾರಂ 07),ನಿವೇಶ್ ಕುಮಾರ್ ಪಾಂಡೆ, (ಫ್ಲಾಟ್ ಫಾರಂ 63) ಮಾರುಕಟ್ಟೆ ಹರಾಜು ಅಧೀಕ್ಷಕರು. ವಿಜಯ್‌ಕುಮಾರ್