Advertisement

ತಂಬಾಕು ದಿನ; ಪ್ರತಿಜ್ಞಾ ವಿಧಿ ಬೋಧನೆ

06:44 PM Jun 05, 2021 | Team Udayavani |

ಬೀದರ: ನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಂಬಾಕು ದಿನ ಆಚರಿಸಲಾಯಿತು. ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಚಾಲನೆ ನೀಡಿ ಮಾತನಾಡಿ, ಜಿಲ್ಲಾ ಆರೋಗ್ಯಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಪ್ರತಿ ವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳಿಂದ ಪ್ರಸ್ತುತ ಯುವ ಮತ್ತು ವಿದ್ಯಾರ್ಥಿ ಸಮುದಾಯ ತೊಂದರೆ ಅನುಭವಿಸುತ್ತಿದ್ದು, ಅವರನ್ನು ಈ ದುಶ್ಚಟಗಳಿಂದ ಹೊರ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

Advertisement

ಜಿಲ್ಲೆಯಲ್ಲಿ ಇರುವ ತಂಬಾಕು ವ್ಯಸನಿತರು ಜಿಲ್ಲಾಸ್ಪತ್ರೆಯ ತಂಬಾಕು ವ್ಯಸನ ಮುಕ್ತಿ ಕೇಂದ್ರಕ್ಕೆ ಭೇಟಿ ನೀಡಿ ತಂಬಾಕು ದುಶ್ಚಟದಿಂದ ಹೊರ ಬರುವಂತೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿ ಕಾರಿ ಡಾ| ಕೃಷ್ಣಾ ರೆಡ್ಡಿ ಮಾತನಾಡಿ, ಈ ವರ್ಷ ವಿಶ್ವ ತಂಬಾಕು ದಿನಾಚರಣೆ ಧ್ಯೇಯವಾದ ತಂಬಾಕು ತ್ಯಜಿಸಲು ಬದ್ಧರಾಗಿ ಇದಕ್ಕೆ ಪೂರಕವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶವು ಜಿಲ್ಲೆಯಲ್ಲಿ ಶಾಲಾ ಕಾರ್ಯಕ್ರಮಗಳು ಮತ್ತು ತಂಬಾಕು ಜಾಗೃತಿ ದಾಳಿಗಳಿಂದ ಜನರಲ್ಲಿ ತಿಳಿವಳಿಕೆ ಮೂಡಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ತಂಬಾಕು ತ್ಯಜಿಸಲು ಬದ್ಧರಾಗಿ ಎಂಬ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಕಾರ್ಯಕ್ರಮ ಅಧಿ ಕಾರಿ ಡಾ| ರಾಜಶೇಖರ ಪಾಟೀಲ, ಕುಟುಂಬ ಕಲ್ಯಾಣಾಧಿಕಾರಿ ಡಾ| ಶಿವಶಂಕರ ಬಿ., ತಾಲೂಕು ಆರೋಗ್ಯ ಅ ಧಿಕಾರಿ ಡಾ| ಸಂಗಾರೆಡ್ಡಿ, ಡಾ| ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಸಂಗಪ್ಪ ಕಾಂಬ್ಳೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಕಾಶ ವಗ್ಗೆ, ಮಹೇಶ ಬಿ., ಸುದರ್ಶನ ರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next