ಲಂಡನ್: ಹೈದರಾಬಾದ್‌ನ ನಿಜಾಮರ ಸುಮಾರು 35 ದಶಲಕ್ಷ ಪೌಂಡ್(308.20 ಕೋಟಿ ರೂ.) ಹಣವು ಯಾರಿಗೆ ಸೇರಬೇಕು ಎಂಬ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಕಾನೂನು ಸಮರ ಈಗ ನಿರ್ಣಾಯಕ ಹಂತ ತಲುಪಿದೆ.
ಲಂಡನ್‌ನ ನ್ಯಾಯಾಲಯದಲ್ಲಿ 2 ವಾರಗಳ ಕಾಲ ನಡೆದ ವಿಚಾರಣೆಯು ಪೂರ್ಣಗೊಂಡಿದ್ದು, ಇನ್ನು 6 ವಾರದೊಳಗಾಗಿ ತೀರ್ಪು ಹೊರಬೀಳಲಿದೆ. ನಿಜಾಮರ ವಂಶಸ್ಥರಾದ ಪ್ರಿನ್ಸ್ ಮುಕರ್ರಮ್ ಜಾ ಹಾಗೂ ಅವರ ಕಿರಿಯ ಸಹೋದರ ಮುಫ‌್ಫಖಾಮ್ ಜಾ, ಈ ಕಾನೂನು ಸಮರದಲ್ಲಿ ಭಾರತದ ಕೈಜೋಡಿಸಿದ್ದಾರೆ. ನಿಜಾಮರಿಗೆ ಸೇರಿದ್ದ ಆ 308 ಕೋಟಿ ರೂ.ಗಳು ಪ್ರಸ್ತುತ ಲಂಡನ್‌ನ ನ್ಯಾಟ್ವೆಸ್ಟ್ ಬ್ಯಾಂಕ್ ನಲ್ಲಿದೆ. 1948ರಲ್ಲಿ ಅಂದಿನ ಹೈದರಾಬಾದ್ ನಿಜಾಮರು, ಆಗ ನೇಮಕವಾಗಿದ್ದ ಬ್ರಿಟನ್‌ನಲ್ಲಿದ್ದ ಪಾಕ್ ಹೈಕಮಿಷನರ್ ಕೈಗೆ ಈ ಮೊತ್ತ ನೀಡಿ, ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಸೂಚಿಸಿದ್ದರು ಎನ್ನಲಾಗಿದ್ದು, ಆ ಮೊತ್ತ ಪಾಕ್‌ಗೆ ನಿಜಾಮರು ಉಡುಗೊರೆಯಾಗಿ ನೀಡಿದ ಮೊತ್ತ ಎಂದು ಪಾಕ್ ವಾದಿಸಿದೆ. ಈ ವ್ಯಾಜ್ಯದ ತೀರ್ಪು ಹೊರಬೀಳಲಿದೆ.
Advertisement