Advertisement

ಕೃಷಿ ವಲಯಕ್ಕೆ 8496 ಕೋಟಿ ಮೀಸಲು

03:32 PM Dec 17, 2019 | Team Udayavani |

ಬಾಗಲಕೋಟೆ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಸಿದ್ಧಪಡಿಸಿದ 2020-21ನೇ ಸಾಲಿನ ಸಂಭಾವ್ಯ ಲಿಂಕ್ಡ್ ಕ್ರೆಡಿಟ್‌ ಯೋಜನೆಗೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಚಾಲನೆ ನೀಡಿದರು.ಜಿಪಂ ಸಭಾ ಭವನದಲ್ಲಿ ನಡೆದ ಜಿಲ್ಲಾ ಅಗ್ರಣಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಲಿಂಕ್ಡ್ಕ್ರೆ ಡಿಟ್‌ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ನಬಾರ್ಡ್‌ನ ಸಂಭಾವ್ಯ ಲಿಂಕ್ಡ್ಯೋ ಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಜನರಿಗೆ ಇದರ ಪ್ರಯೋಜನವಾಗುವಂತೆ ಮಾಡಲು ತಿಳಿಸಿದರು. ಜಿಲ್ಲಾ ಅಗ್ರಣಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಗೋಪಾಲ್‌ ರೆಡ್ಡಿ ಮಾತನಾಡಿ, ಈ ಕ್ರೆಡಿಟ್‌ ಯೋಜನೆಯಲ್ಲಿ ದೀರ್ಘಾವ ಯ ಭೌತಿಕ ಸಾಮರ್ಥ್ಯ, ಮೂಲಸೌಕರ್ಯ ಬೆಂಬಲದ ಲಭ್ಯತೆ, ಮಾರ್ಕೆಟಿಂಗ್‌ ಸೌಲಭ್ಯಗಳು, ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಗಣನೆಗೆ ತೆಗೆದುಕೊಂಡು ಬ್ಯಾಂಕ್‌ ಕ್ರೆಡಿಟ್‌ ಮೂಲಕ ಅಸ್ತಿತ್ವದಲ್ಲಿರುವ ಅಭಿವೃದ್ದಿಯ ಸಾಮರ್ಥ್ಯ ನಕ್ಷೆ ಮಾಡುವ ಮೂಲ ಉದ್ದೇಶದಿಂದ ಸಂಭಾವ್ಯ ಲಿಂಕ್ಡ್ ಕ್ರೆಡಿಟ್‌ ಯೋಜನೆ (ಪಿಎಲ್‌ಪಿ) ಸಿದ್ದಪಡಿಸಲಾಗಿದೆ ಎಂದರು.

ಪಿಎಲ್‌ಪಿ ಯೋಜನೆ ಆದ್ಯತೆ ವಲಯದ ಅಡಿಯಲ್ಲಿ ಬಳಸಬಹುದಾದ ಸಾಲದ ಸಾಮರ್ಥ್ಯ 9952.97 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಪ್ರಸ್ತುತ 2019-20 ವಾರ್ಷಿಕ ಸಾಲ ಯೋಜನೆಗಿಂತ 1216.82 ಕೋಟಿ ರೂ. ಹೆಚ್ಚಾಗಿರುತ್ತದೆ. ಈ ಪಿಎಲ್‌ಪಿ ದಾಖಲೆಯಲ್ಲಿ ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ 2020-21ರ ಜಿಲ್ಲೆಯ ಎಸಿಪಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯ ಪ್ರಕಾರ ಕೃಷಿ ಬೆಳೆ ಉತ್ಪಾದನೆ ಮತ್ತು ಕೃಷಿ 8496.70 ಕೋಟಿ ರೂ., ಎಂಎಸ್‌ಎಂಇ 834.12 ಕೋಟಿ ರೂ., ರಫ್ತು ಸಾಲ 111.28 ಕೋಟಿ ರೂ., ಶಿಕ್ಷಣ 52.66 ಕೋಟಿ, ವಸತಿ 279.40 ಕೋಟಿ, ನವೀಕರಿಸಬಹುದಾದ ಶಕ್ತಿ 60.76 ಕೋಟಿ ಮತ್ತು ಸಾಮಾಜಿಕ ಮೂಲಸೌಕರ್ಯ 118.05 ಕೋಟಿ ರೂ. ಒಳಗೊಂಡಿದೆ. ಸಂಭಾವ್ಯ ಲಿಂಕ್‌ ಕ್ರೆಡಿಟ್‌ ಯೋಜನೆಯ ವಿಷಯ ಹೈಟೆಕ್‌ ಅಗ್ರಿಕಲ್ಚರ್‌ ಆಗಿದೆ ಎಂದು ಹೇಳಿದರು.

ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಯಮುನಾ ಪೈ ಮಾತನಾಡಿ, ಬ್ಯಾಂಕ್‌ಗಳು ಈ ಡಾಕ್ಯೂಮೆಂಟ್‌ ಬಳಸಿಕೊಂಡು ಸ್ಥಳೀಯ ಆರ್ಥಿಕತೆ ಉತ್ತೇಜಿಸಲು ತಿಳಿಸಿದರು. ಬ್ಯಾಂಕ್‌ ಗಳು ಗ್ರಾಮೀಣ ಸಾಲ ತಲುಪಿಸಲು ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಕೆವಿಕೆಗಳ ಲೈನ್‌ ಇಲಾಖೆಗಳ ಬೆಂಬಲವೂ ಬಹಳ ನಿರ್ಣಾಯಕವಾಗಿದೆ ಎಂದರು.

Advertisement

ಜಿಪಂ ಸಿಇಒ ಗಂಗೂಬಾಯಿ ಮಾನಕರ, ಸಿಂಡಿಕೇಟ್‌ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಶ್ರೀನಿವಾಸ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next