Advertisement
ನಗರದ ಶಾರದಾ ಸಭಾ ಭವನದಲ್ಲಿ ಸಂಸ್ಕಾರ ಭಾರತಿ ಸಂಘಟನೆ ವತಿಯಿಂದ ಭೂ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪರಿಸರ ಸಂರಕ್ಷಣೆಗೆ ಮಾರ್ಗೊಪಾಯಗಳು ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಅವರುಮಾತನಾಡಿದರು. ಶಾಲಾ-ಕಾಲೇಜುಗಳಲ್ಲಿ ಪರಿಸರದ ದಿನಾಚರಣೆ ಗಂಭೀರವಾಗಿ ಪರಿಗಣಿಸಿ ಪರಿಸರದ ಹಬ್ಬಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದರು.
ಪ್ರೌಢಶಾಲೆಗೆ ಬಂದ ಮಕ್ಕಳಿಗೂ ಪರಿಸರದ ಹಬ್ಬಗಳ ಉದ್ದೇಶ ಅರ್ಥವಾಗುತ್ತಿಲ್ಲ. ವಿಶ್ವ ಜೀವ ವೈವಿಧ್ಯ ದಿನಾಚರಣೆ, ಭೂ ದಿನಾಚರಣೆ, ವಿಶ್ವ ಜಲ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ, ವಿಶ್ವ ಅರಣ್ಯ ದಿನಾಚರಣೆ, ಹೀಗೆ ತಿಂಗಳಿಗೊಂದು ಹಬ್ಬವನ್ನು ಶಾಲೆಗಳಲ್ಲಿ ಆಚರಿಸಬಹುದು. ಇಂತಹ ಹಬ್ಬಗಳು ಜನಸಾಮಾನ್ಯರಿಗೆ ತಲುಪಿಯೇ ಇಲ್ಲ
ಎಂದು ಹೇಳಿದರು.
Related Articles
ಕುಮಾರ್ ಮಾತನಾಡಿ, ನಾವೀಗ ಬಾಹ್ಯಾಕಾಶ ಯುಗದಲ್ಲಿದ್ದೇವೆ. ಹಾಗೆಂದು ಭೂಮಿಯ ಯುಗವನ್ನು ಮರೆತುಬಿಟ್ಟರೆ ಹೇಗೆ? ಪಂಚ ಭೂತಗಳ ಪೈಕಿ ಅಗ್ನಿ, ನೀರು ಮತ್ತು ಭೂಮಿಯನ್ನು ಪೂಜಿಸುವ ನಾವು, ಗಾಳಿ ಮತ್ತು ಆಕಾಶವನ್ನು ಕಡೆಗಣಿಸುತ್ತಿದ್ದೇವೆ. ಆಕಾಶವನ್ನು ಕಸದ ತೊಟ್ಟಿಯಂತೆ ಬಳಸಲು ಶುರು ಮಾಡಿದ್ದೇವೆ. ನಿಸರ್ಗದ ಮೇಲೆ ಮನುಷ್ಯನ ಆಕ್ರಮಣ ಅತಿಯಾಗುತ್ತಿದೆ. ಭೂಮಿಯ ಎಲ್ಲ ಸಂಪನ್ಮೂಲಗಳನ್ನು ಮನುಷ್ಯರ ಭೋಗಕ್ಕೆ ಸಿದ್ಧಪಡಿಸಿ, ಮಾರಿ ಹಣ ಗಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
Advertisement
ಸಂಸ್ಕಾರ ಭಾರತೀಯ ಅಧ್ಯಕ್ಷ ಟಿ.ಆರ್.ನಾಗರಾಜ್ ಮಾತನಾಡಿ, ಸಂಸ್ಕಾರ ಭಾರತೀಯ ಕಾರ್ಯಕ್ರಮಗಳಲ್ಲಿ ಗ್ರಾಮೀಣ ಮತ್ತು ಸ್ವದೇಶಿ ವಸ್ತ್ರವಾದ ಖಾದಿಯನ್ನು ಹೆಚ್ಚು ಬಳಸುತ್ತೇವೆ ಎಂದು ಭರವಸೆ ನೀಡಿದರು.
ಚಾರ್ಟೆಡ್ ಅಕೌಂಟೆಂಟ್ ಮುರಳಿಧರ್ ರಾವ್, ಪ್ರೇಮಾ, ದೇಸಾಯಿ, ಜಯಾ ಪ್ರಾಣೇಶ್, ಗುರುರಾಜ್, ರವಿಶಂಕರ್, ಲಕ್ಷ್ಮೀ ಇದ್ದರು.