Advertisement

Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ

08:38 AM May 20, 2024 | Team Udayavani |

ಹೊಸದಿಲ್ಲಿ: ಯುವ ಜನರಿಗೆ ಉದ್ಯೋಗಗಳು ಸಿಗಬೇಕಾದರೆ ಮತ್ತು ಯುವಕರ ಭವಿಷ್ಯ ಉತ್ತಮವಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಿಂದ ನಿವೃತ್ತಿಯಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Advertisement

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, “ನರೇಂದ್ರ ಮೋದಿ ಏನು ಹೇಳಬೇಕೆಂದು ನಾನು ಬಯಸುತ್ತೇನೋ ಅದನ್ನು ನಾನು ಹೇಳಬಲ್ಲೆ. ಅವರ ಬಾಯಿಂದ ಹೊರಬರಲು ಇನ್ನೂ ಒಂದೇ ಒಂದು ಪದವಿದೆ: ನಿರುದ್ಯೋಗ. ಯುವಕರು ಉದ್ಯೋಗ ಪಡೆಯಲು ಮೋದಿಯವರ ನಿವೃತ್ತಿ ಅಗತ್ಯವಾಗಿದೆ” ಎಂದಿದ್ದಾರೆ.

ಮಾರ್ಚ್‌ನಲ್ಲಿ, ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ನಿರುದ್ಯೋಗ ದರವು ದ್ವಿಗುಣವಾಗಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರ ಕಳಪೆ ಹಣಕಾಸು ರಾಜಕೀಯದ ಪರಿಣಾಮವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

“ದೇಶವು ಅನೇಕ ರಂಗಗಳಲ್ಲಿ ಅನ್ಯಾಯವನ್ನು ಎದುರಿಸುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ಅನ್ಯಾಯವಿದೆ. ರೈತರು ಅನ್ಯಾಯವನ್ನು ಎದುರಿಸುತ್ತಿದ್ದಾರೆ. ನಮ್ಮ ದೇಶವು ಕಳೆದ 40 ವರ್ಷಗಳಲ್ಲಿ ಅತ್ಯಂತ ಕೆಟ್ಟ ನಿರುದ್ಯೋಗ ದರವನ್ನು ಎದುರಿಸುತ್ತಿದೆ. ಭಾರತದ ನಿರುದ್ಯೋಗ ದರ ಪಾಕಿಸ್ತಾನಕ್ಕಿಂತ ದ್ವಿಗುಣವಾಗಿದೆ. 23 ಶೇಕಡಾ ಯುವಕರು ಭಾರತದಲ್ಲಿ ನಿರುದ್ಯೋಗಿಗಳಾಗಿದ್ದಾರೆ, ಪಾಕಿಸ್ತಾನದಲ್ಲಿ 12 ಪ್ರತಿಶತದಷ್ಟು ಮಾತ್ರ. ನಮ್ಮ ನಿರುದ್ಯೋದ ದರ ಭೂತಾನ್ ಮತ್ತು ಬಾಂಗ್ಲಾದೇಶಕ್ಕಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

2022 ರ ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಭಾರತದ ಯುವ ನಿರುದ್ಯೋಗ ದರವು 23.22 ಪ್ರತಿಶತದಷ್ಟಿದೆ, ಅದರ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ (11.3 ಶೇಕಡಾ) ಮತ್ತು ಬಾಂಗ್ಲಾದೇಶವನ್ನು (12.9 ಶೇಕಡಾ) ಮೀರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next