Advertisement

ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬಿಜೆಪಿ ಧ್ವಜ, ನಮ್ಮ ಗುರಿ: ಶಾ

11:33 AM Feb 02, 2019 | udayavani editorial |

ಡೆಹರಾಡೂನ್‌ : ‘ಭಾರತೀಯ ಜನತಾ ಪಕ್ಷ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ತನ್ನ ಧ್ವಜವನ್ನು ಹಾರಿಸುವ ಗುರಿ ಹೊಂದಿರುವುದರಿಂದ 2019ರ ಲೋಕಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

Advertisement

‘ಪಶ್ಚಿಮ ಬಂಗಾಲ, ತಮಿಳು ನಾಡು, ಕೇರಳ, ತೆಲಂಗಾಣ, ಒಡಿಶಾ ಮತ್ತು ಆಂಧ್ರ ಪ್ರದೇಶ ರಾಜ್ಯಗಳನ್ನು ಗೆಲ್ಲುವುದು ಬಿಜೆಪಿಯ ಗುರಿಯಾಗಿದೆ’ ಎಂದು ಅಮಿತ್‌ ಶಾ ಅವರು ಉತ್ತರ ಪ್ರದೇಶದ ಆಮ್‌ರೋಹಾ ಜಿಲ್ಲೆಯ ಗಜರೂಲಾ ದಲ್ಲಿ  ಇಂದು ಶನಿವಾರ ಮಧ್ಯಾಹ್ನ ನಡೆದ ಬೃಹತ್‌ ರಾಲಿಯಲ್ಲಿ  ಹೇಳಿದರು. 

‘2019ರಲ್ಲಿ ನಾವು ಕೇಂದ್ರದಲ್ಲಿ ನಮ್ಮ ಸರಕಾರವನ್ನು ರಚಿಸುವ ವರೆಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಬಿಜೆಪಿ ಧ್ವಜವನ್ನು ಹಾರಿಸಲು ಸಾಧ್ಯವಾಗದು’ ಎಂದು ಶಾ ಹೇಳಿದರು. 

ಇದಕ್ಕೆ ಮೊದಲು ಶಾ ಅವರು ಉತ್ತರಾಖಂಡದ ರಾಜಧಾನಿ ಡೆಹರಾಡೂನ್‌ನಲ್ಲಿ  ಬೃಹತ್‌ ರಾಲಿಯನ್ನು ಉದ್ದೇಶಿಸಿ ಮಾತನಾಡಿ “ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತ ತನ್ನ ನಿಲುವನ್ನು ಕಾಂಗ್ರೆಸ್‌ ಸ್ಪಷ್ಟ ಪಡಿಸಬೇಕು’ ಎಂದು ಆಗ್ರಸಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next