Advertisement

ವಿದ್ಯಾರ್ಥಿ ವೇತನ ನೀಡಲು ಒತ್ತಾಯಿಸಿ ಎಸ್‌ಐಒ ಮನವಿ

02:18 PM Dec 14, 2019 | Team Udayavani |

ಕುಷ್ಟಗಿ: ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಏಕಾಏಕಿ ರದ್ದತಿ ಸರ್ಕಾರ ಪುನರ್‌ ಪರಿಶೀಲಿಸುವಂತೆ ಆಗ್ರಹಿಸಿ ಎಸ್‌ಐಒ ಸಂಘಟನೆ ತಹಶೀಲ್ದಾರ್‌ ಎಂ. ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಎಸ್‌ಐಒ ಜಿಲ್ಲಾಧ್ಯಕ್ಷ ಮಹದ್ಮದ್‌ ಮುಸ್ತಾಫಾ ನಾಲಬಂದ್‌ ಪ್ರತಿಕ್ರಿಯಿಸಿ, ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ ಹಣದ ಇಲ್ಲ ಕಾರಣ ನೀಡಿ 2019-20ರ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ರದ್ದುಪಡಿಸಿ ಸುತ್ತೋಲೆ ಹೊರಡಿಸಿದೆ. ಇದರಿಂದ 15 ಲಕ್ಷ ವಿದ್ಯಾರ್ಥಿಗಳು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2 ಲಕ್ಷಕ್ಕೂ ಅಧಿ ಕ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಪ್ರಸಕ್ತ ವರ್ಷದ 2019-20ನೇ ಸಾಲಿನಲ್ಲಿ ಹೊಸದಾಗಿ ಸಲ್ಲಿಸಿರುವ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿಗಳ ಶಿಷ್ಯ ವೇತನ ರದ್ದು ಮಾಡಿರುವ ಸರ್ಕಾರದ ನಿರ್ಧಾರ ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದರು.

ಹೊಸ ಅರ್ಜಿಗಳನ್ನು ಬಿಟ್ಟು ಕೇವಲ ಈಗಾಗಲೇ ನವೀಕರಣ ಮಡಿದ ಅರ್ಜಿಗಳಿಗೆ ವಿದ್ಯಾರ್ಥಿ ವೇತನ ಕೊಡುವುದು ವಿದ್ಯಾರ್ಥಿಗಳಲ್ಲಿ ತಾರತಮ್ಯ ನೀತಿಯಂತಾಗಿದೆ. ವಿದ್ಯಾರ್ಥಿ ವೇತನ ನಿರೀಕ್ಷೆಯಿಂದ ಹಲವಾರುವಿದ್ಯಾರ್ಥಿಗಳ ಅರ್ಜಿ ಸಲ್ಲಿಸಿದ್ದು, ಇದೀಗ ಏಕಾಏಕಿ ರದ್ದತಿ ನಿರ್ಧಾರ ಹಣಕಾಸಿನ ನೆಪವೊಡ್ಡಿರುವುದು ಸರ್ಕಾರಕ್ಕೆ ಬಡತನವೇ ಎಂದು ಪ್ರಶ್ನಿಸಿದರು. ಕೂಡಲೇ ವಿದ್ಯಾರ್ಥಿ ವೇತನ ಎಂದಿನಂತೆ ಮುಂದುವರಿಸಬೇಕೆಂದು ತಾಲೂಕು ಅಧ್ಯಕ್ಷ ಮುಜೀಬ್‌ ಆಗ್ರಹಿಸಿದರು. ಈ ವೇಳೆ ಇಮ್ರಾನ್‌, ಸಮೀರ್‌, ರಾಘವೇಂದ್ರ, ಪ್ರವೀಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next