Advertisement
ನಗರದ ಬಾಪೂಜಿ ಎಂಬಿಎ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರಕು ಮತ್ತು ಸೇವಾ ತೆರಿಗೆ ವಿಚಾರ ಸಂಕಿರಣದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ವೈವಿಧ್ಯತೆ ಹೊಂದಿರುವ ಭಾರತದಂತಹ ರಾಷ್ಟ್ರದಲ್ಲಿ ಏಕರೂಪ ತೆರಿಗೆ ಆಡಳಿತ ಒಂದು ದಿಟ್ಟ ನಿರ್ಧಾರವಾಗಿದೆ.
Related Articles
Advertisement
ಜಿಎಸ್‌ಟಿ ಬಗ್ಗೆ ವಿವರವಾಗಿ ತಿಳಿದ ನಂತರ ಎಲ್ಲವೂ ಸುಲಭವಾಗುತ್ತದೆ. ಪಾರದರ್ಶಕತೆ, ತೆರಿಗೆ ಸುಧಾರಣೆ ಸೇರಿದಂತೆ ಅನೇಕ ಅನುಕೂಲಗಳು ಇವೆ ಎಂದರು. ಆಡಳಿತದಲ್ಲಿ ಪಾರದರ್ಶಕತೆ, ಸರಳ ಮತ್ತು ಸುಲಭ ತೆರಿಗೆ ವ್ಯವಸ್ಥೆ ಇದಾಗಿದೆ. ತೆರಿಗೆ ವಂಚನೆ ಕಡಿತ, ಎಲ್ಲರೂ ತೆರಿಗೆ ವ್ಯವಸ್ಥೆಗೆ ಒಳಪಡುವುದುದರಿಂದ ರಾಜ್ಯಗಳ ರಾಜಸ್ವ ಹೆಚ್ಚಿ, ಉದ್ಯೋಗಾವಕಾಶ ಹೆಚ್ಚಳ ಆಗುವುದು.
ತೆರಿಗೆ ಕಡಿತಗೊಳಿಸುವ ಸಾಧ್ಯತೆಯೂ ಇದೆ. 20 ಲಕ್ಷಗಳ ಕ್ರೋಢೀಕೃತ ವ್ಯವಹಾರಕ್ಕೆ ಜಿಎಸ್‌ಟಿ ವಿನಾಯಿತಿ ಇದ್ದು, 1.5 ಕೋಟಿಗಿಂತ ಹೆಚ್ಚಿರುವ ವ್ಯವಹಾರಗಳಲ್ಲಿ 50:50 ಅನುಪಾತದಲ್ಲಿ ರಾಜ್ಯ ಮತ್ತು ರಾಷ್ಟ್ರದ ಪಾಲು ಇರುತ್ತದೆ. ಮದ್ಯ, ಪೆಟ್ರೋಲಿಯಂ ಗಳಂತಹ ಕೆಲ ಸರಕು ಹೊರತುಪಡಿಸಿ ಸರಕು ಮತ್ತು ಸೇವೆಗಳ ಬಹುಪಾಲು ಎಲ್ಲ ರೀತಿಯ ಪೂರೈಕೆಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದು.
ಒಂದು ಜಿಎಸ್‌ಟಿ ಯಲ್ಲಿ ಮೂರು ರೀತಿಯ ತೆರಿಗೆ ಒಳಗೊಂಡಿರುತ್ತದೆ. ತೆರಿಗೆದಾರರು ಆದಷ್ಟು ಬೇಗ ಜಿಎಸ್ ಟಿಗೆ ವರ್ಗಾವಣೆ ಮಾಡಿಕೊಂಡರೆ ಒಳಿತು ಎಂದು ಹೇಳಿದರು. ದಾವಣಗೆರೆ ವಲಯದ ಸಹಾಯಕ ಆಯುಕ್ತ ದ್ಯಾಮಪ್ಪ ಐರಣಿ, ಗ್ರಾಸಿಮ್ ಇಂಡಸ್ಟ್ರಿಯ ಉಪಾಧ್ಯಕ್ಷ ಮಹಾವೀರ ಜೈನ್, ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ಕಿರಣ್ ಪಾಟಿಲ್, ಸುದೀಂದ್ರ ರಾವ್ ಮತ್ತಿತರರು ಇದ್ದರು.