Advertisement

ಸಹಜ ಕೃಷಿಯಲ್ಲಿ ರೈತರ ನಂಬುಗೆ ದೃಢೀಕರಿಸಬೇಕಿದೆ

12:03 PM May 10, 2017 | |

ಬೆಂಗಳೂರು: ಸಹಜ ಕೃಷಿಯಲ್ಲಿ ಕ್ರಾಂತಿ ಮಾಡಲು ಉತ್ತಮ ಇಳುವರಿ ನೀಡುವ ದೇಸಿ ಬೀಜಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ ಅಭಿಪ್ರಾಯಪಟ್ಟಿದ್ದಾರೆ. ನಗರದ ಆರ್ಟ್‌ ಆಫ್ ಲಿವಿಂಗ್‌ ಆವರಣದಲ್ಲಿ ಶ್ರೀ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ಸಹಜಕೃಷಿ ಮಾರ್ಗಪ್ರವರ್ತಕ ಶೃಂಗಸಭೆಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

“ದೇಶದಲ್ಲಿ ಋಷಿ-ಕೃಷಿ ಅಥವಾ ಸಹಜ ಕೃಷಿ ಕ್ರಾಂತಿಯಲ್ಲಿ ರೈತರ ನಂಬಿಕೆಯನ್ನು ಪುನಃ ದೃಢೀಕರಿಸುವ ಅಗತ್ಯವಿದೆ. ರಸಗೊಬ್ಬರ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹು­ದೆಂಬ ಅವರ ತಪ್ಪು ಕಲ್ಪನೆ ಹೋಗಲಾಡಿಸಿ ಸಹಜ ಕೃಷಿಯಿಂದಲೂ ಅತ್ಯುತ್ತಮ ಆದಾಯ ಗಳಿಸಲು ಸಾಧ್ಯ ಎಂಬುದರ ಕುರಿತು ಜಾಗೃತಿ ಮೂಡಿಸಬೇಕಿದೆ,’ ಎಂದು ಹೇಳಿದರು. 

ಸಹಜ ಕೃಷಿ ಪದ್ಧತಿಯಿಂದ ಉತ್ತಮ ಆದಾಯ ಪಡೆದ ಅನೇಕ ರೈತರ ಉದಾಹರಣೆಗಳು ಇವೆ. ಕಡಿಮೆ ಪ್ರಮಾಣದ ಬೀಜಗಳನ್ನು ಬಳಸಿ ಅಧಿಕ ಇಳುವರಿ ಪಡೆಯಬಹುದಾದ ದೇಸಿ ತಳಿಯ ಬೀಜಗಳನ್ನು ಸಂರಕ್ಷಿಸಬೇಕು. ಸಹಜ ಕೃಷಿಯ ಜ್ಞಾನವನ್ನು ರೈತರಿಗೆ ತಲುಪಿಸಿ ಸಾವಯವ ಗ್ರಹದ ನಿರ್ಮಾಣ ಮಾಡುವ ಮಹತ್ತರ ತೀರ್ಮಾನಕೈಗೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದರೂ ದೇಶದಲ್ಲಿ ನೀರಿನ ಕೊರತೆ ಅನುಭವಿಸುತ್ತಿದೆ. ಜತೆಗೆ ಆಧುನಿಕ ಕೃಷಿ ಪದ್ಧತಿಗೆ ಮಾರುಹೋಗಿರುವ ರೈತರು, ಸಂಪ್ರದಾಯಿಕ ಕೃಷಿ ಪದ್ಧತಿಯನ್ನು ನಿರ್ಲಕ್ಷಿéಸುತ್ತಿದ್ದಾರೆ. ನದಿ, ಕೆರೆಗಳಲ್ಲೂ ಕೂಡ ವಿಷಕಾರಕ ರಸಾಯನಿಕ ವಸ್ತುಗಳು ಹೆಚ್ಚುತ್ತಿದ್ದು, ಇದನ್ನು ತಡೆಯಬೇಕು. ಹಾಗೆಯೇ ಪ್ರತಿಯೊಬ್ಬ ರೈತರು ಸ್ವಾವಲಂಬಿ ಗಳಾಗಲು ಅವಕಾಶ ನೀಡಿದರೆ ಅವರು ಆತ್ಮಹತ್ಯೆಗೆ ಮೊರೆಹೋಗುತ್ತಿರಲಿಲ್ಲ ಎಂದರು. 

ಅತ್ಯಂತ ಕಡಿಮೆ ವೆಚ್ಚದಲ್ಲಿ ದೇಶದ 27 ನದಿಗಳನ್ನು ಪುನರುಜ್ಜೀವನ ಮಾಡಲಾಗಿದೆ. ಆದರೆ, ಕಲುಷಿತವಾಗಿದ್ದ ನದಿಗಳನ್ನು ಸ್ವತ್ಛಮಾಡಿದ ನಮ್ಮ ವಿರುದ್ಧವೇ ಕೆಲವರು ಆರೋಪ ಹೊರಿಸುತ್ತಿರುವುದು ಆಸ್ಯಾಸ್ಪದ­ವಾಗಿದೆ ಎಂದು ಹೇಳಿದರು. 

Advertisement

ವೇದಿಕೆಯಲ್ಲಿದ್ದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳ ಸಚಿವರುಗಳಿಗೆ ತಮ್ಮ ರಾಜ್ಯಗಳನ್ನು ಸಾವಯವ ರಾಜ್ಯಗಳನ್ನಾಗಿ ಮಾಡುವಂತೆ ಮನವಿ ಮಾಡಿದರು. ಇಂಡೋನೇಷ್ಯಾದ ಪ್ರಗತಿಪರ ಸಹಜಕೃಷಿ ತಜ್ಞೆ ಇಬು ಹೆಲಿಯಾಂಟಿ ಹಿಲ್ಮನ್‌ ಹಾಜರಿದ್ದರು.

ಅನುಮತಿಯಲ್ಲಿ ನಮ್ಮ ಪಾಲಿಲ್ಲ: ಸಚಿವಾಲಯ
ನವದೆಹಲಿ: ಕಳೆದ ವರ್ಷ ಯಮುನಾ ನದಿ ದಂಡೆಯಲ್ಲಿ ಆರ್ಟ್‌ ಆಫ್ ಲಿವಿಂಗ್‌ ಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಅನುಮತಿ ನೀಡಿದ್ದರಲ್ಲಿ ತಮ್ಮ ಪಾಲಿಲ್ಲ ವೆಂದು ಕೇಂದ್ರ ಜಲಸಂಪನ್ಮೂಲ ಮತ್ತು ಅರಣ್ಯ ಮತ್ತು ಪರಿಸರ ಸಚಿವಾಲಯಗಳು ಹೇಳಿವೆ. ಅದಕ್ಕೆ ದೆಹಲಿ ಅಭಿವೃದ್ಧಿ ಪ್ರಾಧಿಕಾರವೇ ಹೊಣೆ ಎಂದು ಎರಡೂ ಸಚಿವಾಲಯಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಪ್ರತ್ಯೇಕವಾಗಿ ಸಲ್ಲಿಸಿರುವ ಹೇಳಿಕೆಯಲ್ಲಿ ಅರಿಕೆ ಮಾಡಿಕೊಂಡಿವೆ.

ಉತ್ಸವಕ್ಕೆ ಸಂಬಂಧಿಸಿದ ಸಂಪೂರ್ಣ ಹೊಣೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದ್ದೇ ಆಗಿತ್ತು ಎಂದಿದೆ ಜಲಸಂಪನ್ಮೂಲ ಸಚಿವಾಲಯ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಸಲ್ಲಿಸಿರುವ ಹೇಳಿಕೆಯಲ್ಲಿ ಕಾರ್ಯಕ್ರಮಕ್ಕೆ ಸಚಿವಾಲಯದ ಅನುಮತಿಯೇ ಬೇಕಾಗಿರಲಿಲ್ಲ ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next