ಮಂಗಳೂರು: ಕಂಬಳಕ್ಕೆ ನೀಡಿರುವ ತಡೆಯಾಜ್ಞೆಯ ವಿಚಾರಣೆ ಹೈಕೋರ್ಟ್‌ನಲ್ಲಿ ಜ. 30ಕ್ಕೆ ನಿಗದಿಯಾಗಿದ್ದು, ಆದ್ಯತೆಯ ನೆಲೆಯಲ್ಲಿ ಆ ವಿಚಾರಣೆಯನ್ನು ದಿನಾಂಕಕ್ಕೆ ಮೊದಲೇ ನಡೆಸಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಕಂಬಳದ ಪರವಾಗಿ ತೀರ್ಪು ಬಂದರೆ ವಿಜಯೋತ್ಸವ ಕಂಬಳ ಅಥವಾ ಕೋರ್ಟ್ ಅವಕಾಶ ನೀಡದಿದ್ದರೆ ಹಕ್ಕೊತ್ತಾಯ ಶಾಂತಿಯುತ ಪ್ರತಿಭಟನ ಮೆರವಣಿಗೆಯನ್ನು ಜ. 28ರಂದು ಮೂಡಬಿದಿರೆಯಲ್ಲಿ ಆಯೋಜಿಸಲಾಗಿದೆ.
ಸೋಮವಾರ ನಗರದಲ್ಲಿ ಮೂಡಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಕೆ. ಅಭಯಚಂದ್ರ ಜೈನ್, ಕೋರ್ಟ್ ಮೂಲಕ ಹೋರಾಟ ನಡೆಸುತ್ತಿರುವ ಕೆ.ಎಸ್. ಅಶೋಕ್ ಕುಮಾರ್ ರೈ ಹಾಗೂ ಕಂಬಳ ವಿದ್ವಾಂಸ ಕೆ. ಗುಣಪಾಲ ಕಡಂಬ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಪ್ರಾಣಿ ದಯಾ ಸಂಘ ಹಾಗೂ ಪೆಟಾ ಸಂಸ್ಥೆಗಳು ಜಲ್ಲಿಧಿಕಟ್ಟು ಕ್ರೀಡೆಯನ್ನು ಹೋಲಿಸಿ ಕಂಬಳಕ್ಕೆ ಹೈಕೋರ್ಟ್‌ಧಿನಿಂದ ತಡೆಯಾಜ್ಞೆ ತಂದಿವೆ. ಆದರೆ ಕಂಬಳ ಅದಕ್ಕಿಂತ ಭಿನ್ನಧಿವಾದ ಜಾನಪದ ಕ್ರೀಡೆಯಾಗಿದೆ. ಕಂಬಳದ ಕುರಿತು ಯಾವುದೇ ಮಾಹಿತಿ ಇಲ್ಲದವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಕರಾವಳಿ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತುಳುನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಕಂಬಳದ ಉಳಿವಿಗಾಗಿ ಕಾನೂನು ಹೋರಾಟದ ಜತೆಗೆ, ಹಕ್ಕೊತ್ತಾಯ ಬೇಡಿಕೆಯನ್ನಿಡಲು 2ನೇ ಸುತ್ತಿನ ಪ್ರತಿಭಟನೆಯನ್ನು ಸಂಘಟಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಜ. 30ಕ್ಕೆ ಮೊದಲು ಆದ್ಯತೆಯ ನೆಲೆಯಲ್ಲಿ ಪರಿಗಣಿಸಲು ಮನವಿ ಮಾಡಲಾಗಿದೆ. ಕೋರ್ಟ್ ಯಾವುದೇ ತೀರ್ಪು ನೀಡಿದರೂ ಮೂಡಬಿದಿರೆಯ ನಿಯೋಜಿತ ಕಾರ್ಯಕ್ರಮ ನಡೆಯಲಿದೆ ಎಂದು ಅಭಯಚಂದ್ರ ಹೇಳಿದರು.
ಜ. 28ರಂದು ಬೆಳಗ್ಗೆ 9ಕ್ಕೆ ಮೂಡಬಿದಿರೆಯ ಸ್ವರಾಜ್ಯ ಮೈದಾನದಿಂದ ಬೈಪಾಸ್ ರಸ್ತೆಯ ಮೂಲಕ ಕಡಲಕೆರೆ ನಿಸರ್ಗಧಾಮದ ಕಂಬಳ ಕ್ರೀಡಾಂಗಣದವರೆಗೆ ಸುಮಾರು 200 ಜತೆ ಕೋಣಗಳೊಂದಿಗೆ ಪಕ್ಷಾತೀತ ಹಾಗೂ ಜಾತ್ಯತೀತ ನೆಲೆಯಲ್ಲಿ ಪ್ರತಿಭಟನೆ ನಡೆಯಲಿದೆ. ಸುಮಾರು 75 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ.
ಕಂಬಳದ ಕುರಿತ ಗೊಂದಲಗಳಿಗೆ ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಸರಕಾರವು ಅಧ್ಯಯನ ತಂಡವೊಂದನ್ನು ರಚಿಸಿದ್ದು, 2 ವರ್ಷಗಳ ಕಾಲ ಅಧ್ಯಯನ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಲಿದೆ ಎಂದು ಕಡಂಬ ತಿಳಿಸಿದರು.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಾಕೂìರು ಶಾಂತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಜೈನ್, ಕೋಶಾಧಿಕಾರಿ ಕೆ.ಪಿ.ಆರ್.ಶೆಟ್ಟಿ, ಪ್ರಮುಖರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಮಿಥುನ್ ರೈ, ರಶ್ಮಿತ್ ಶೆಟ್ಟಿ, ತುಳು ಚಿತ್ರರಂಗದ ವಿಜಯ ಕುಮಾರ್ ಕೋಡಿಯಾಲ್‌ಬೈಲ್, ದೇವದಾಸ್ ಕಾಪಿಕಾಡ್, ನವೀನ್ ಡಿ.ಪಡೀಲ್, ಅರ್ಜುನ್ ಕಾಪಿಕಾಡ್ ಮೊದಲಾದವರು ಉಪಸ್ಥಿತರಿದ್ದರು.