Advertisement

ಚಾರಣಿಗರೇ ಫಿಟ್‌ ಆಗಿರಿ

10:20 PM Jun 10, 2019 | mahesh |

ಚಾರಣ ಎನ್ನುವುದೇ ಅದ್ಭುತ ಅನುಭವ. ಗುಡ್ಡ-ಬೆಟ್ಟ ಹಾಗೂ ಹೊಸ ಹೊಸ ಜಾಗಗಳ‌ನ್ನು ಅನ್ವೇಷಿಸುವ ಈ ಸುಂದರ ಪಯಣ ಪ್ರತಿಯೊಬ್ಬರಿಗೂ ಇಷ್ಟ. ಚಾರಣಿಗರು ಆರೋಗ್ಯಕ್ಕೆ ಪೂರಕವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಚಾರಣಕ್ಕೆ ಹೊರಡುವ ಮುನ್ನ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಮತ್ತು ಫಿಟ್‌ ಆಗಿರಬೇಕು ಎಂಬುದು ಚಾರಣಿಗರ ಮಾತು.

Advertisement

ವಾಕಿಂಗ್‌ ಇರಲಿ
ಚಾರಣ ಹೊರಡುವ ಮುನ್ನ ಅಗತ್ಯವಾಗಿ ಒಂದು ತಿಂಗಳ ಮುಂಚೆಯೇ ದಿನಕ್ಕೆ ಎರಡು ಕಿ.ಮೀ. ತನಕ ವಾಕಿಂಗ್‌ ಮಾಡಬೇಕು. ಈ ಮೂಲಕ ಚಾರಣಿಗರು ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಾಧ್ಯ.

ವ್ಯಾಯಾಮ ಅಗತ್ಯ
ಗುಡ್ಡ-ಬೆಟ್ಟ ಹಾಗೂ ಕಡಿದಾದ ಪ್ರದೇಶಗಳಲ್ಲಿ ಚಾರಣ ಮಾಡಬೇಕಾದರೆ, ಅವರು ದೈಹಿಕವಾಗಿ ಸಬಲರಾಗಿಬೇಕಾಗುತ್ತದೆ. ಈ ಕಾರಣಕ್ಕೆ ಸಣ್ಣ ಪ್ರಮಾಣದ ವ್ಯಾಯಾಮ ಮಾಡಬೇಕು. ದಿನಕ್ಕೆ ಏನಿಲ್ಲವಾದರೂ ಅರ್ಧ ತಾಸು ವ್ಯಾಯಾಮ ಮಾಡಬೇಕು.

ಹಣ್ಣು, ಹಂಪಲ ಸೇವಿಸಿ
ಹಣ್ಣು, ಹಂಪಲ ಸೇವನೆಯಿಂದ ದೇಹಕ್ಕೆ ಬೇಕಾದ ಅಗತ್ಯ ಪ್ರೋಟಿನ್‌ಗಳು ದೊರೆಯುತ್ತವೆ. ಹಣ್ಣು ಹಂಪಲುಗಳು ಯಾವುದೇ ನಿಶ್ಯಕ್ತಿ, ಖನ್ನತೆ, ಬಳಲಿಕೆ ಉಂಟಾಗುವುದಿಲ್ಲ. ಆರೋಗ್ಯದ ಮೇಲೆಯೂ ಗಮನ ಹರಿಸಿ,ಚಾರಣಕ್ಕೂ ಒಂದು ತಿಂಗಳ ಮುನ್ನ ಸಂಪೂರ್ಣದ ದೇಹದ ತಪಾಸಣೆ ಮಾಡಿಕೊಳ್ಳಬೇಕು.

ಧೂಮಪಾನ, ಮದ್ಯ ಸೇವನೆ ಬೇಡ
ಚಾರಣಿಗರು ತುಂಬಾ ದಿನಗಳವರೆಗೆ, ಅವಧಿಗಳವರೆಗೆ ನಡೆಯಬೇಕಾಗಿರುವುದರಿಂದ ನಿಶ್ಯಕ್ತಿ, ಉಬ್ಬಸ ಬರಬಾರದೆಂದರೆ ಮದ್ಯ, ಧೂಮಪಾನ ಸೇವನೆ ಮಾಡಬಾರದು. ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು.

Advertisement
Advertisement

Udayavani is now on Telegram. Click here to join our channel and stay updated with the latest news.

Next