Advertisement
ಹಿರಿದಕ್ಕೆ ಕಿರಿಯದರ ಜತೆಗೆ ಪ್ರೀತಿ, ಒಲುಮೆ ಮೂಡು ವುದು ಸಾಧ್ಯ. ಮರಕ್ಕೆ ತಾನು ಬಹಳ ದೊಡ್ಡದು ಎಂಬುದು ಗೊತ್ತಿರಲಿಲ್ಲ. ಒಲವಿಗೆ ದೊಡ್ಡದು – ಸಣ್ಣ ದೆಂಬುದು ಇಲ್ಲ.
ಮಗು ತನ್ನ ನೆರಳಿನಲ್ಲಿ ಆಟವಾಡಿ ದಾಗ, ಹಣ್ಣುಗಳನ್ನು ತಿಂದಾಗ ಮರಕ್ಕೆ ಅಮಿತಾನಂದವಾಗುತ್ತಿತ್ತು. ಪ್ರೀತಿ ತಾನು ಏನನ್ನಾದರೂ ಕೊಟ್ಟರೆ ಬಹಳ ಸಂತುಷ್ಟ ವಾಗುತ್ತದೆ; ಆದರೆ ಅಹಂ ಪಡೆದು ಕೊಂಡಾಗಲಷ್ಟೇ ಖುಷಿಪಡುತ್ತದೆ. ಬಾಲಕ ಬೆಳೆದು ದೊಡ್ಡವನಾದ. ಮರವೇರಿ ಕೊಂಬೆಗಳಲ್ಲಿ ಜೋಕಾಲಿ ಆಡು ತ್ತಿದ್ದ. ಅದರ ಎಲೆ, ಹೂಗೊಂಚಲು ಗಳನ್ನು ಕಿತ್ತು ಪೋಣಿಸಿ ತಲೆಯ ಮೇಲೆ ಧರಿಸಿ ಕಾಡಿನ ರಾಜನಂತೆ ನಟಿಸುತ್ತಿದ್ದ. ಪ್ರೀತಿಯ ಹೂವುಗಳಿದ್ದಾಗ ರಾಜರಂತಿರ ಬಹುದು. ಆದರೆ ಅಹಂನ ಮುಳ್ಳುಗಳಿ ದ್ದಾಗ ಎಲ್ಲವೂ ನರಕ.
Related Articles
Advertisement
ಒಂದು ದಿನ ಯುವಕ ಹಾದು ಹೋಗುತ್ತಿದ್ದಾಗ ಮರ ಆತನನ್ನು ಬಾ ಬಾ ಎಂದು ಕರೆಯಿತು. ಆತ ಅದರ ಹತ್ತಿರ ಬಂದು, “ನಾನೀಗ ದೊಡ್ಡವನಾಗಿದ್ದೇನೆ. ಈಗ ನನಗೆ ಹಣ ಬೇಕಾಗಿದೆ, ನಿನ್ನ ಪ್ರೀತಿಯಲ್ಲ’ ಎಂದ. ಮರ ಸ್ಥಂಭೀಭೂತ ವಾಯಿತು. “ನನ್ನಲ್ಲಿ ಹಣವಿಲ್ಲ, ಪ್ರೀತಿ ಮಾತ್ರ ಇದೆ. ಬೇಕಿದ್ದರೆ ನನ್ನ ಹಣ್ಣುಗಳನ್ನು ಒಯ್ದು ಮಾರಿಕೋ’ ಎಂದಿತು.
“ಹೌದಲ್ಲ’ ಅನಿಸಿತು ಯುವಕನಿಗೆ. ಆತ ಮರವೇರಿ ಹಣ್ಣುಗಳನ್ನು ಮಾತ್ರ ವಲ್ಲ, ಕಾಯಿಗಳನ್ನೂ ಉದುರಿಸಿದ. ಹಲವು ಎಲೆಗಳು, ಕೊಂಬೆಗಳು ಮುರಿ ದವು. ಆದರೂ ಮರ ಕೃತಾರ್ಥತೆಯನ್ನು ಅನುಭವಿಸಿತು. . ಕೊಡುವ ಪ್ರಕ್ರಿಯೆ ಯಲ್ಲಿ ತಾನು ಘಾಸಿ ಗೊಂಡರೂ ಪ್ರೀತಿ ಸಂತೃಪ್ತ. ಆದರೆ ಅಹಂ ಹಾಗಲ್ಲ; ಎಷ್ಟು ಪಡೆದರೂ ಅದಕ್ಕೆ ಅಸಂತೃಪ್ತಿಯೇ.
ಬಹಳ ವರ್ಷಗಳ ಬಳಿಕ ಮತ್ತೆ ಬಂದಾಗ ಆತ ಮಧ್ಯವಯಸ್ಕನಾಗಿದ್ದ. ಮನೆ ಕಟ್ಟುವುದಕ್ಕಾಗಿ ಮರ ಕಡಿಯಲು ಬಂದಿದ್ದ. ಮರ ಸಂತೋಷದಿಂದ ಒಪ್ಪಿಕೊಂಡಿತು. ಆತ ಕೊಡಲಿ ತಂದು ಕಡಿದು ಕೊಂಡೊಯ್ದ. ಈಗ ಮರದ ಕಾಂಡ ಮಾತ್ರ ಉಳಿದುಕೊಂಡಿತ್ತು. ಹೋಗುವಾಗ ಕೃತಜ್ಞತೆ ಹೇಳುವುದಕ್ಕೂ ಆತ ತಿರುಗಿ ನೋಡಲಿಲ್ಲ. ಆದರೂ ಮರ ಬಹಳ ಸಂತೋಷಪಟ್ಟಿತು.
ಬಹಳ ವರ್ಷಗಳ ಬಳಿಕ ಮತ್ತೆ ಮರದತ್ತ ಬಂದಾಗ ಆತ ವೃದ್ಧನಾಗಿದ್ದ. “ನನಗೆ ದೂರ ದೇಶಕ್ಕೆ ವ್ಯಾಪಾರಕ್ಕಾಗಿ ಹೋಗುವುದಕ್ಕೆ ದೋಣಿ ಮಾಡ ಬೇಕಾಗಿದೆ. ಅದಕ್ಕೆ ನೀನು ಬೇಕು’ ಎಂದ. ಮರ ಅದಕ್ಕೂ ಖುಷಿಯಿಂದ ಒಪ್ಪಿಕೊಂಡಿತು. ವೃದ್ಧ ಗರಗಸ ತಂದು ಕಾಂಡವನ್ನು ಕತ್ತರಿಸಿ ಒಯ್ದ. ಈಗಲೂ ಕೃತಜ್ಞತೆಯ ಮಾತು ಹೇಳಲಿಲ್ಲ. ಆದರೂ ಮರ ಸಂತೋಷ ಪಟ್ಟಿತು.
ಈಗ ಮರವಿದ್ದಲ್ಲಿ ಒಂದು ಮೋಟು ಕುತ್ತಿ ಮಾತ್ರ ಇದೆ. ದೂರ ದೇಶಕ್ಕೆ ಹೋದ ವೃದ್ಧ ಮರಳಿ ಬಂದಿಲ್ಲ. ಆತ ಮತ್ತೆ ಬಂದಾನು, ಕನಿಷ್ಠ ಅವನು ಹೇಗಿದ್ದಾನೆ ಎಂಬ ಸುದ್ದಿಯಾದರೂ ಕೇಳಿಬರ ಬಹುದು ಎಂದು ಅದು ಕುಟುಕು ಜೀವ ಹಿಡಿದುಕೊಂಡು ಕಾಯುತ್ತಿದೆ. ವೃದ್ಧ ಎಲ್ಲಿ ಹೋಗಿದ್ದಾನೆ, ಚೆನ್ನಾಗಿ ದ್ದಾನೆಯೇ ಎಂಬುದು ನಿಮಗೇ ನಾದರೂ ಗೊತ್ತಿದ್ದರೆ ಅದಕ್ಕೆ ತಿಳಿಸಿಬಿಡಿ.( ಸಾರ ಸಂಗ್ರಹ)