Advertisement
ವ್ಯಕಿಯೊಬ್ಬ ಹುಟ್ಟಲು ಇರುವ ಅವಕಾಶಗಳೆಷ್ಟು? ಎನ್ನುವ ಪ್ರಶ್ನೆಗೆ ಇರುವ ಉತ್ತರ ಒಂದೇ ಒಂದು ತಾನೇ? ಹಾಗಾಗಿ ನಮಗೆ ಆ ಭಗವಂತ ಕಲ್ಪಿಸಿದ ಒಂದು ಸುಂದರ ಅವಕಾಶವನ್ನು ಸಸೂತ್ರವಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
Related Articles
Advertisement
ಒಳ್ಳೆಯದು ಮತ್ತು ಕೆಟ್ಟದನ್ನು ಸಮಾನವಾಗಿ ಸ್ವೀಕರಿಸಲು ಕಷ್ಟವಾದರೂ ಎರಡನ್ನೂ ಸ್ವೀಕರಿಸಲು ಮಾನಸಿಕವಾಗಿ ಸಿದ್ಧರಾಗಬೇಕು. ಆತ್ಮವಿಶ್ವಾಸ ಬೇಕು ಆದರೆ ಅತಿಯಾದ ಆತ್ಮವಿಶ್ವಾಸ ಬೇಡ. ಈ ಕೆಲಸವನ್ನು ನಾನು ಹೀಗೆ ಮಾಡಬಲ್ಲೆ ಎನ್ನುವ ಛಲವಿರಲಿ. ಆದರೆ ಇದು ಹೀಗೆಯೇ ಆಗಬೇಕು ಎನ್ನುವ ಹಠಮಾರಿತನ ಸಲ್ಲದು. ಏಕೆಂದರೆ ನಾವೆಣಿಸಿದಂತೆ ಎಲ್ಲವೂ ಆಗುವುದಿಲ್ಲ ತಾನೇ? ಜೀವನವೆಂಬ ತಿರುಗು ಚಕ್ರದಲ್ಲಿ ಒಮ್ಮೆ ಮೇಲ್ಭಾಗದಲ್ಲಿರುವ ಭಾಗ, ಮತ್ತೂಮ್ಮೆ ಕೆಳಗೆ ಇಳಿಯಲೇ ಬೇಕು. ಇದು ಪ್ರಕೃತಿ ಸಹಜ ಎನ್ನುವುದನ್ನು ತಿಳಿದರೆ ಬದುಕು ಬರಡಾಗಲು ಖಂಡಿತಾ ಸಾಧ್ಯವಿಲ್ಲ. “ಆಗುವುದು ಎಲ್ಲ ಒಳ್ಳೆಯದಕ್ಕೆ’ ಎಂದು ಭಾವಿಸಿ ಮುನ್ನಡೆಯಬೇಕು.
ತನ್ನನ್ನು ತಾನು ಅತಿಯಾಗಿ ಪ್ರೀತಿಸುವವನಿಗೆ ಪ್ರೇಮಪತ್ರ ಬರೆಯುವ ಪ್ರಮೇಯವೇ ಬರುವುದಿಲ್ಲವಂತೆ. ಮೊದಲಿಗೆ ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿತರೆ ಬದುಕನ್ನು ಪ್ರೀತಿಸುವುದು ತನ್ನಿಂದ ತಾನೇ ಬರುತ್ತದೆ ಎನ್ನುವುದರಲ್ಲಿ ಸಂಶಯ ವಿಲ್ಲ. ಆದುದರಿಂದ ನಾವು ಬದು ಕಿಯೂ ಸತ್ತಂತೆ ಇರುವುದಕ್ಕಿಂತ ಜೀವನದ ಅಲ್ಪಾವಧಿಯಲ್ಲಿ ಸಾಧನೆಯತ್ತ ಮುನ್ನಡೆದು ಬದುಕುವಂಥವರಾಗಬೇಕು. “ಹುಟ್ಟು ಕೇವಲ ಸಾಯುವುದಕ್ಕಲ್ಲ , ಸಾಧಿಸುವುದಕ್ಕೆ’ ಎನ್ನುವುದನ್ನು ತಿಳಿದು ಉನ್ನತವಾದ ಚಿಂತನೆಗಳೊಂದಿಗೆ ಉತ್ತಮವಾದ ಗುರಿ ಹೊಂದಿ ಉತ್ತರೋತ್ತರ ಶ್ರೇಯಸ್ಸಿಗೆ ಇಂದೇ ಅಡಿ ಇಡೋಣ.
- ವಾಣಿಶ್ರೀ ಅಮ್ಮುಂಜೆ, ಉಡುಪಿ