Advertisement

ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಚೀನಾ ತಯಾರಾಗಿದೆ; ಮುಲಾಯಂ

04:00 PM Jul 19, 2017 | Team Udayavani |

ನವದೆಹಲಿ: ಪಾಕಿಸ್ತಾನದ ಸಹಭಾಗಿತ್ವದೊಂದಿಗೆ ಚೀನಾ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸಲು ಸಜ್ಜಗಾಗಿದೆ ಎಂದು ವಿರೋಧ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಬುಧವಾರ ಲೋಕಸಭೆಯಲ್ಲಿ ಮಾತನಾಡುತ್ತ ಹೇಳಿದರು.

Advertisement

ಚೀನಾ ದೇಶದಿಂದ ಭಾರತ ಇಂದು ದೊಡ್ಡ ಪ್ರಮಾಣದ ಅಪಾಯವನ್ನು ಎದುರಿಸುತ್ತಿದೆ. ಕೇಂದ್ರ ಸರ್ಕಾರಕ್ಕೆ ನಾನು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದೆ. ಚೀನಾ ಪಾಕಿಸ್ತಾನದೊಂದಿಗೆ ಕೈಜೋಡಿಸಿದೆ. ಹಾಗಾಗಿ ಭಾರತದ ಮೇಲೆ ದಾಳಿ ನಡೆಸಲು ಚೀನಾ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ ಎಂದು ತಿಳಿಸಿದರು.

ಸಿಕ್ಕಿಂನ ಡೋಕ್ ಲಾ ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಕ್ಯಾತೆ ಬಗ್ಗೆ ಮುಲಾಯಂ ಸಿಂಗ್ ಕಲಾಪದಲ್ಲಿ ಮಾತನಾಡಿದರು.  ಭಾರತವನ್ನು ಗುರಿಯಾಗಿರಿಸಿಕೊಂಡು ಚೀನಾ ಅಣ್ವಸ್ತ್ರವನ್ನು ಪಾಕಿಸ್ತಾನದಲ್ಲಿ ಹೂತಿಟ್ಟಿರುವುದಾಗಿಯೂ ಮುಲಾಯಂ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next