Advertisement
ಧರ್ಮ, ಜಾತಿಯ ಹೆಸರಿನಲ್ಲಿ, ಪಾಶ್ಚಾತ್ಯ ಸಂಸ್ಕೃತಿ ಎಂದು ವ್ಯಾಲೆಂಟೈನ್ಸ್ ಡೇಗೆ ಕೆಲವರು ವಿರೋಸುತ್ತಿರಬಹುದು, ಈ ಆಚರಣೆಯಲ್ಲಿ ತೊಡಗುವವರು ಕಂಡಲ್ಲಿ ಗತಿ ಕಾಣಿಸುತ್ತೇವೆ ಎಂದು ಮತ್ತೂಂದಷ್ಟು ಮಂದಿ ಬೆದರಿಕೆಯನ್ನೂ ಹಾಕಿದರಬಹುದು, ವ್ಯಾಲೆಂಟೇನ್ಸ್ ಡೇ ವಿರೋಸುವವರನ್ನು ವಿರೋಸಲೆಂದು, ಪ್ರೇಮಿಗಳನ್ನು ಬೆಂಬಲಿಸಲು ಇನ್ನೊಂದಷ್ಟು ಮಂದಿ ಹುಟ್ಟಿಕೊಂಡಿರಬಹುದು. ಈ ಇಬ್ಬರ ನಡುವೆ ಸಿಕ್ಕಿಹಾಕಿಕೊಳ್ಳದೆ, ಪ್ರೇಮಿಗಳು ತಮ್ಮೊಲವಿನ ಪ್ರೇಮಿಗೆ ಪ್ರೀತಿ ನಿವೇದನೆ ಮಾಡಲು ಪ್ರಾಶಸ್ತ್ಯ ದಿನ.
Related Articles
Advertisement
ಕೀನ್ಯ, ಇಥಿಯೋಪಿಯಾಗಳು ಗುಲಾಬಿ ಬೆಳೆಯಲ್ಲಿ ಮುಂಚೂಣಿಯಲ್ಲಿದ್ದರೂ, ಕರ್ನಾಟಕದ ಅದರಲ್ಲೂ ಬೆಂಗಳೂರು ಸುತ್ತಮುತ್ತ ಪಾಲಿಹೌಸ್‌ಗಳಲ್ಲಿ ಬೆಳೆಸಿದ ಗುಲಾಬಿ ಹೂವುಗಳು ಹೆಚ್ಚು ಗುಣಮಟ್ಟ ಹೊಂದಿವೆ. ಆದ್ದರಿಂದ ಗುಲಾಬಿ ಹೂವುಗಳಿಗೆ ಬೇಡಿಕೆ ಇದ್ದು, ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಗಾಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ ಎನ್ನುತ್ತಾರೆ ಸೌತ್ ಇಂಡಿಯಾ ಫ್ಲೋರಿಕಲ್ಚರ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ. ಜಯಪ್ರಕಾಶ್ ರಾವ್.
ಸಂತಸಕ್ಕೊಂದು ಸಭೆ: ಲವ್ ಇಂಡಿಯಾ ಫೋರಂ ಪ್ರೇಮಿಗಳ ದಿನದ ಅಂಗವಾಗಿ ಚಿತ್ರಕಲಾ ಪರಿಷತ್‌ನಲ್ಲಿ ಸೌಹಾರ್ದತೆ ಉದ್ದೇಶದಿಂದ ವೆಲೆಟೈನ್ಸ್ ದಿನ ಆಚರಿಸುತ್ತಿದೆ. ಅಂತರ್ಧರ್ಮಿಯ ವಿವಾಹಿತರನ್ನು ಒಂದು ಗೂಡಿಸಿ “ಪ್ರೀತಿನೇ ನಮ್ಮ ಜಾತಿ – ಪ್ರೇಮಾನೇ ನಮ್ಮ ದೇಶ’ ಎಂಬ ಘೋಷ ವಾಕ್ಯದಲ್ಲಿ ಪ್ರೇಮ ಎಲ್ಲ ಧರ್ಮ ಮೀರಿದ್ದೆಂದು ಸಂಭ್ರಮಿಸಲು ಫೋರಂ ಅವಕಾಶ ನೀಡಿದೆ. ಹಾಡು, ನೃತ್ಯ, ಪುಸ್ತಕ ಪ್ರದರ್ಶನ, ಊಟ, ಸಂಭಾಷಣೆ. ಸೌಹಾರ್ದಯುತ ಮಾತು ಅಲ್ಲಿರಲಿದೆ. ಪ್ರೇಮಿಗಳಿಂದಲೇ ಸೌಹಾರ್ದತೆ ಸಾಧ್ಯವೆನ್ನುವ ಸಂತಸ ಕೂಟ ಮಂಗಳವಾರ ಸಂಜೆ 5.30ಕ್ಕೆ ಆರಂಭಗೊಳ್ಳಲಿದೆ.
ಪ್ರೇಮಿಗಳಿಗೆ ಭದ್ರತೆ: ಪ್ರೇಮಿಗಳ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ಪಾರ್ಕ್‌ಗಳು ಸೇರಿದಂತೆ ಆಯಾಕಟ್ಟಿನ ಜಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಇದೆ. ಕಬ್ಬನ್‌ಪಾರ್ಕ್, ಲಾಲ್‌ಬಾಗ್‌ನಲ್ಲಿಯೂ ಅಲ್ಲಿನ ಸಿಬ್ಬಂದಿಗಳು ಕಣYವಲು ನಡೆಸಲಿದ್ದಾರೆ.
ಕಬ್ಬನ್‌ಪಾರ್ಕ್‌ನಲ್ಲಿ ಪ್ರೇಮಿಗಳ ವಿವಾಹವಿಶಿಷ್ಟ ಪ್ರತಿಭಟನೆಗಳ ಹರಿಕಾರ, ವಾಟಾಳ್ ನಾಗರಾಜ್ ಅವರು ಈಗಾಗಲೇ ಪ್ರೇಮಿಗಳ ವಿವಾಹದ ಆಹ್ವಾನ ಪತ್ರಿಕೆಗಳನ್ನು ಎಲ್ಲೆಡೆ ಹಂಚಿದ್ದು, ಫೆ.14ರಂದು ಬೆಳಗ್ಗೆ 11ಕ್ಕೆ ಕಬ್ಬನ್‌ಪಾರ್ಕ್‌ನ ಟೆನ್ನಿಸ್ ಕ್ಲಬ್ ಬಳಿ “ಕೆಂಪಿ-ಕೆಂಪ’ನಿಗೆ ವಿವಾಹ ಮಾಡಲಿದ್ದಾರೆ. ಜತೆಗೆ ಪ್ರೇಮಗೀತೆಗಳು, ಗಟ್ಟಿಮೇಳ, ಪ್ರೇಮಿಗಳಿಗೆ ಗುಲಾಬಿ ಹೂಗಳನ್ನು ವಿತರಿಸುವುದು ಮಾತ್ರವಲ್ಲ ಬೆಳ್ಳಿ ರಥದ ಮೆರವಣಿಗೆಯನ್ನು ಪ್ರಮುಖ ರಸ್ತೆಗಳಲ್ಲಿ ನಡೆಸಲಿದ್ದಾರೆ. ರಸ್ತೆಯುದ್ದಕ್ಕೂ ಪ್ರೇಮಿಗಳ ಪರ ತಾವಿದ್ದೇವೆಂದು ಗುಲಾಬಿ ನೀಡಲಿದ್ದಾರೆ.