Advertisement

ವರ್ಚುವಲ್‌ ಎಡವಟ್ಟು: ಮಹಿಳೆ ಜತೆಗಿದ್ದ ವಕೀಲನ ಪರವಾನಗಿಯೇ ರದ್ದು

08:04 PM Dec 22, 2021 | Team Udayavani |

ಚೆನ್ನೈ: ಕೊರೊನಾ ಬಂದ ಬಳಿಕ ನ್ಯಾಯಾಲಯಗಳಲ್ಲಿನ ವಿಚಾರಣೆಯೂ ವರ್ಚುವಲ್‌ ರೀತಿಯಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವೊಂದು ಅನಪೇಕ್ಷಿತ ಘಟನೆಗಳೂ ನಡೆದದ್ದು ಉಂಟು.

Advertisement

ಮದ್ರಾಸ್‌ ಹೈಕೋರ್ಟ್‌ನ ನ್ಯಾ.ಪಿ.ಎನ್‌.ಪ್ರಕಾಶ್‌ ಮತ್ತು ನ್ಯಾ.ಆರ್‌.ಹೇಮಲತಾ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣವೊಂದರ ವಿಚಾರಣೆಯನ್ನು ಆನ್‌ಲೈನ್‌ನಲ್ಲಿ ನಡೆಸುತ್ತಿದ್ದ ವೇಳೆ ನ್ಯಾಯವಾದಿ ಆರ್‌.ಡಿ.ಸಂತಾನಕೃಷ್ಣನ್‌ ಮಹಿಳೆಯ ಜತೆಗೆ ಆತ್ಮೀಯವಾಗಿ ಇದ್ದ ಕ್ಷಣಗಳು ಕಂಡುಬಂದಿವೆ.

ಇದರಿಂದ ಕ್ರುದ್ಧಗೊಂಡ ನ್ಯಾಯಪೀಠ ಇಂಥ ಘಟನೆಗಳ ಬಗ್ಗೆ ಹೈಕೋರ್ಟ್‌ ಮೂಕಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ.

ವಕೀಲ ಸಂತಾನಕೃಷ್ಣ ಅವರನ್ನು ಯಾವುದೇ ಹಂತದ ಕೋರ್ಟ್‌ನಲ್ಲಿ ಕೇಸುಗಳ ಬಗ್ಗೆ ವಾದ ಮಾಡದಂತೆ ನಿರ್ಬಂಧ ವಿಧಿಸಿ, ಆದೇಶ ನೀಡಿದೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮತ್ತೆ ಕನ್ನಡ ಧ್ವಜ ಸುಟ್ಟ ಶಿವಸೇನೆ

Advertisement

ತಮಿಳುನಾಡು ಬಾರ್‌ ಕೌನ್ಸಿಲ್‌ಗೆ ಕೂಡ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಘಟನೆ ಬಗ್ಗೆ ಸಿಐಡಿ ಮೂಲಕ ತನಿಖೆಗೂ ಆದೇಶ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next