Advertisement

2018-19ರಲ್ಲಿ 12,000 ಉಚಿತ ದನ ವಿತರಿಸುವ ತ.ನಾ.ಸರಕಾರ

04:48 PM Mar 15, 2018 | Team Udayavani |

ಚೆನ್ನೈ : ಉಪ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರ ಪ್ರಧಾನ ಸಮಾಜ ಕಲ್ಯಾಣ ಯೋಜನೆಯಡಿ ತಮಿಳುನಾಡು ಸರಕಾರ 2018-19ರಲ್ಲಿ ಒಂದೂವರೆ ಲಕ್ಷ ಫ‌ಲಾನುಭವಿಗಳಿಗೆ 12,000 ಹಾಲು ಕೊಡುವ ದನಗಳನ್ನು, ಆರು ಲಕ್ಷ ಕುರಿ ಅಥವಾ ಆಡುಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಿದೆ. 

Advertisement

ಕೃಷಿಕರಿಗೆ ಉಚಿತವಾಗಿ ಹಾಲು ಕೊಡುವ ದನ, ಕುರಿ, ಆಡುಗಳನ್ನು ಒದಗಿಸುವುದು ಎಐಎಡಿಎಂಕ ಪಕ್ಷದ ಪರಮೋಚ್ಚನಾಯಕಿ, ಮಾಜಿ ಮುಖ್ಯಮಂತ್ರಿ, ದಿ| ಜೆ ಜಯಲಲಿತಾ ಅವರ ಅಚ್ಚುಮೆಚ್ಚಿನ ಯೋಜನೆಯಾಗಿದ್ದು ಅದನ್ನಾಕೆ 2011ರಲ್ಲಿ ಆರಂಭಿಸಿದ್ದರು.

ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ತಮ್ಮ ಬಜೆಟ್‌ ಭಾಷಣದಲ್ಲಿ 2018-19ರಲ್ಲಿ 248.58 ಕೋಟಿ ರೂ. ವೆಚ್ಚದಲ್ಲಿ ಒಂದೂವರೆ ಲಕ್ಷ ಫ‌ಲಾನುಭವಿಗಳಿಗೆ ಒಟ್ಟು 12,000 ಹಾಲು ಕೊಡುವ ದನಗಳನ್ನು ಮತ್ತು ಆರು ಲಕ್ಷ ಕುರಿಗಳನ್ನು ಉಚಿತವಾಗಿ ಪೂರೈಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. 

2011ರಿಂದ ಈ ತನಕ 75,398 ಮಹಿಳೆಯರಿಗೆ ತಲಾ ಒಂದು ದನವನ್ನು, 8.71 ಲಕ್ಷ ಬಡ ಕುಟುಂಬಗಳಿಗೆ 34.85 ಲಕ್ಷ  ಕುರಿ/ಆಡುಗಳನ್ನು ತಮಿಳು ನಾಡು ಸರಕಾರ ಪೂರೈಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next