Advertisement

ಗೋವಾದಲ್ಲಿ ಟಿಎಂಸಿ ಗೆದ್ದರೆ, ಬಂಗಾಳದಂತೆ ವಿವಿಧ ಯೋಜನೆಗಳ ಜಾರಿ: ಮಮತಾ ಬ್ಯಾನರ್ಜಿ ಭರವಸೆ

06:52 PM Dec 13, 2021 | Team Udayavani |

ಪಣಜಿ: ಪಶ್ಚಿಮ ಬಂಗಾಳದ ರೀತಿಯಲ್ಲಿಯೇ ಗೋವಾದಲ್ಲಿ ವಿವಿಧ ಯೋಜನೆ ಜಾರಿಗೆ ತರುವ ಉದ್ದೇಶವಿದ್ದು, ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಆರು ತಿಂಗಳ ಒಳಗಾಗಿ ಗೋವಾದಲ್ಲಿಯೂ ಜಾರಿಗೆ ತರಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನುಡಿದಿದ್ದಾರೆ.

Advertisement

ಗೋವಾದ ಬಾಣಾವಲಿಯಲ್ಲಿ ಸೋಮವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷವು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಲು ಯೋಚಿಸಿರಲಿಲ್ಲ. ಆದರೆ ಇತರ ಪಕ್ಷಗಳು ಬಿಜೆಪಿಗೆ ಸ್ಫರ್ಧೆಯೊಡ್ಡುತ್ತಿಲ್ಲ ಎಂಬುದನ್ನು ನಾವು ಅರಿತುಕೊಂಡೆವು. ಬಿಜೆಪಿ ವಿರುದ್ಧ ಯಾರೂ ಹೋರಾಟ ಮಾಡಿಲ್ಲ ಅದಕ್ಕಾಗಿ ನಾವು ಗೋವಾದಲ್ಲಿ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದೆವು. ಯಾರಾದರೂ ಬಿಜೆಪಿಯನ್ನು ಸೋಲಿಸಲು ಬಯಸಿದರೆ, ನಮ್ಮನ್ನು ಬೆಂಬಲಿಸುವುದು ಬಿಡುವುದು ಅವರಿಗೆ ಬಿಟ್ಟ ವಿಷಯ ಎಂದು ಮಮತಾ ಬ್ಯಾನರ್ಜಿ ನುಡಿದರು.

ಪರೋಕ್ಷವಾಗಿ ಕಾಂಗ್ರೇಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪಶ್ಚಿಮ ಬಂಗಾಳದಲ್ಲಿ ನಮ್ಮ ವಿರುದ್ಧ ನೀವು ಜಹೋರಾಡಬಹುದು ಆದರೆ ಗೋವಾದಲ್ಲಿ ನಿಮ್ಮ ವಿರುದ್ಧ ನಾವು ಏಕೆ ಹೋರಾಡಬಾರದು ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಿಂಬಿಸಲು ಬಾಂಗ್ಲಾ ದೇಶದ ದೃಶ್ಯಗಳನ್ನು ಪಶ್ಚಿಮ ಬಂಗಾಳದಲ್ಲಿದೆ ಎಂದು ತೋರಿಸುವ ಮೂಲಕ ಬಿಜೆಪಿ ನಕಲಿ ವೀಡಿಯೊ ಸೃಷ್ಠಿಸಿದೆ ಎಂದು ಆರೋಪಿಸಿದರು. ಈ ವೀಡಿಯೊ ವಿರುದ್ಧ ನಾವು ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಮಮತಾ ಬ್ಯಾನರ್ಜಿ ನುಡಿದರು.

ಎನ್‍ಸಿಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ಚರ್ಚಿಲ್ ಅಲೆಮಾಂವ ಹಾಗೂ ಪುತ್ರಿ ವಾಲಂಕಾ ಅಲೆಮಾಂವ ರವರು ಈ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್  ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next