Advertisement

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

01:22 AM May 20, 2024 | Team Udayavani |

ಕೋಲ್ಕತಾ: ತೃಣಮೂಲ ಕಾಂಗ್ರೆಸ್‌ ಪಕ್ಷವು ಹದ್ದುಮೀರಿ ವರ್ತಿಸುತ್ತಿದ್ದು, ರಾಮಕೃಷ್ಣ ಮಿಷನ್‌, ಇಸ್ಕಾನ್‌, ಭಾರತ್‌ ಸೇವಾಶ್ರಮ ಸಂಘಗಳ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಲದ ಪುರೂಲಿಯಾದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, “ಟಿಎಂಸಿ ಎಲ್ಲ ಮಿತಿಗಳನ್ನು ಮೀರಿ ಕೀಳು ಮಟ್ಟಕ್ಕೆ ಇಳಿದಿದೆ. ತನ್ನ ವೋಟ್‌ ಬ್ಯಾಂಕ್‌ ಅನ್ನು ಓಲೈಸುವುದಕ್ಕಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಇದೇ ಕಾರಣದಿಂದ ರಾಮಕೃಷ್ಣ ಮಿಷನ್‌, ಇಸ್ಕಾನ್‌, ಭಾರತ್‌ ಸೇವಾಶ್ರಮಗಳ ವಿರುದ್ಧ ಅಪಪ್ರಚಾರ ಮಾಡಿ, ಬೆದರಿಸಲು ಸಿಎಂ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಾವು ರಾಜಕೀಯ ಮಾಡಲ್ಲ
ಬಿಜೆಪಿ ಪರ ಪ್ರಚಾರ ನಡೆಸುವ ಆರೋಪಗಳನ್ನು ರಾಮಕೃಷ್ಣ ಮಿಷನ್‌, ಭಾರತ ಸೇವಾಶ್ರಮದ ಪ್ರತಿನಿಧಿಗಳು ತಿರಸ್ಕರಿಸಿದ್ದಾರೆ. ನಿಗಿದತ ಪಕ್ಷ ಅಥವಾ ವ್ಯಕ್ತಿಗಳ ಪರ ಪ್ರಚಾರ ನಡೆಸುವುದು ಅಥವಾ ಮತ ಹಾಕುವ ಬಗ್ಗೆ ಶಿಫಾರಸು ಮಾಡಿಲ್ಲ ಎಂದು ಹೇಳಿಕೊಂಡಿವೆ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಾಡಿದ ಆರೋಪಗಳಿಂದ ನಮಗೆ ನೋವಾಗಿದೆ ಎಂದು ರಾಮಕೃಷ್ಣ ಮಿಷನ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಧಾರ್ಮಿಕ ವಿಚಾರವನ್ನು ಪ್ರಚಾರ ಮಾಡುತ್ತೇವೆ ಎಂದಿದ್ದಾರೆ.

ಕೇಂದ್ರದ ಆಣತಿಯಂತೆ ಕೆಲಸ ಮಾಡುವ ಸನ್ಯಾಸಿಗಳು: ಮಮತಾ
ಆರಂಭಾಗ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗೋಘಾಟ್‌ ರ್ಯಾಲಿಯಲ್ಲಿ ಮಾತನಾಡಿದ್ದ ಮಮತಾ “ರಾಮಕೃಷ್ಣ ಮಿಷನ್‌, ಭಾರತ್‌ ಸೇವಾಶ್ರಮ ಸಂಘದ ಕೆಲವು ಸನ್ಯಾಸಿಗಳು ಕೇಂದ್ರ ಸರಕಾರ ಆಣತಿಯಂತೆ ಕಾರ್ಯನಿರ್ವ ಹಿಸುತ್ತಿದ್ದರು. ಧಾರ್ಮಿಕ ಕೇಂದ್ರಗಳಲ್ಲಿ ಕೆಲ ವರು ಮಾತ್ರವೇ ಉತ್ತಮ ಕೆಲಸ ಮಾಡುತ್ತಿದ್ದಾರೆ ವಿನಃ ಎಲ್ಲರೂ ಅಲ್ಲ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next