Advertisement

ಹೌರಾ ಟಿಎಂಸಿ ನಾಯಕನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

12:26 PM Jun 05, 2018 | udayavani editorial |

ಹೌರಾ, ಪಶ್ಚಿಮ ಬಂಗಾಲ : ಹೌರಾ ಜಿಲ್ಲೆಯಲ್ಲಿಂದು ಓರ್ವ ಸ್ಥಳೀಯ ಟಿಎಂಸಿ ನಾಯಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಹೌರಾ ಜಿಲ್ಲೆಯ ಬಗ್ನಾನ್‌ ಪ್ರದೇಶದ ಬೂತ್‌ ಮಟ್ಟದ ಕಾರ್ಯದರ್ಶಿಯಾಗಿರುವ ಟಿಎಂಸಿ ಯ ಮೊಹಮ್ಮದ್‌ ಮೊಹಿಸಿನ್‌ ಖಾನ್‌ ಅವರು ನಿನ್ನೆ ರಾತ್ರಿ ತಮ್ಮ ಮನೆಗೆ ಮರಳುತ್ತಿದ್ದಾಗ ಅವರನ್ನು ಜಿಲ್ಲೆಯ ಹತೂರಿಯಾ ಗ್ರಾಮದಲ್ಲಿ ಗುಂಡಿಕ್ಕಿ ಕೊಂದರು. ಮೃತ ಖಾನ್‌ ಅವರ ಪತ್ನಿ ಟಿಎಂಸಿ ಗ್ರಾಮ ಪಂಚಾಯತ್‌ ಸದಸ್ಯೆಯಾಗಿದ್ದಾರೆ. 

ಈ ಘಟನೆಯನ್ನು ಅನುಸರಿಸಿ ಗ್ರಾಮಸ್ಥರು ಖಾನ್‌ ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಹತೂರಿಯಾ ಗ್ರಾಮಕ್ಕೆ ಸಮೀಪದ ಎನ್‌ಎಚ್‌ 6ರಲ್ಲಿ ಸುಮಾರು ಎರಡು ತಾಸುಗಳ ಕಾಲ ರಾತ್ರಿ ವಾಹನ ಸಂಚಾರಕ್ಕೆ ತಡೆಯೊಡ್ಡಿದರು. 

ಖಾನ್‌ ಕೊಲೆಗೆ ಸಂಬಂಧಿಸಿ ತಾವು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next