Advertisement

‌ “ದಿಲ್ ಬೇಚಾರ’ಚಿತ್ರದ ಟೈಟಲ್‌ ಸಾಂಗ್ ರಿಲೀಸ್!

07:44 AM Jul 11, 2020 | Lakshmi GovindaRaj |

ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ “ದಿಲ್ ಬೇಚಾರʼ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಚಿತ್ರತಂಡ ಚಿತ್ರದ ಮೊದಲ ಟೈಟಲ್‌ ಟ್ರ್ಯಾಕನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ವೇದಿಕೆ ಮೇಲೆ ಸುಶಾಂತ್​ ಜಬರ್‌ದಸ್ತ್‌ ಸ್ಟೆಪ್‌ ಹಾಕಿದ್ದಾರೆ. ಎ.ಆರ್​. ರೆಹಮಾನ್​ ಸಂಗೀತವಿರುವ ಈ ಹಾಡಿಗೆ ಅಮಿತಾಭ್​ ಭಟ್ಟಾಚಾರ್ಯ ಸಾಹಿತ್ಯವಿದೆ.

Advertisement

ಇದು ಸಾಮಾನ್ಯ ಜನರ ಅಸಾಮಾನ್ಯ ಪ್ರೇಮಕತೆ. ಹಲವಾರು ತಿರುವುಗಳಿಂದ ಕೂಡಿದ ಪ್ರೇಮಿಗಳಿಬ್ಬರ ಜೀವನದಲ್ಲಿ ನಡೆಯುವ ದುರಂತ ಪ್ರೇಮಕತೆಯಾಗಿದ್ದು, ಟ್ರೈಲರ್‌ನಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಹಾಗೂ ಸಂಜನಾ ಸಾಂಘಿ ಇಬ್ಬರು ಮುಗ್ಧ ಹಾಗೂ ಮನೋಜ್ಞ ಅಭಿನಯದಿಂದ ಗಮನಸೆಳೆಯುತ್ತಾರೆ.

ನಟ ಸುಶಾಂತ್​ಗೆ ಇದು ಕೊನೆಯ ಚಿತ್ರವಾದರೆ, ಚಿತ್ರದ ನಾಯಕಿ ಸಂಜನಾ ಸಾಂಘಿಗೆ ಇದು ಮೊದಲನೇ ಚಿತ್ರ. ಮುಖೇಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕನಾಗಿ ಸುಶಾಂತ್‌ ಮನ್ನಿಯಾಗಿ ಹಾಗೂ ಸಂಜನಾ ಕಿಜಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಸೈಫ್ ಅಲಿ ಖಾನ್​ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ನು “ದಿಲ್ ಬೇಚಾರʼ ಚಿತ್ರ ಕಥೆ ಮೂಲತಃ ಜಾನ್ ಗ್ರೀನ್ ಅವರ ಹೆಚ್ಚು ಮಾರಾಟವಾದ ಕಾದಂಬರಿ “ದಿ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ದಿಂದ ಆಧಾರಿತವಾಗಿದೆ. ಚಿತ್ರ ಇದೇ ತಿಂಗಳ ಜುಲೈ 24 ರಂದು  ಡಿಸ್ನಿ- ಹಾಟ್ ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದ್ದು, ಸುಶಾಂತ್ ಸಿಂಗ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ಸಿನಿಮಾವನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಚಿತ್ರತಂಡ ಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next