Advertisement

ನೌಕಾದಳದ ಗೌಪ್ಯ ಕಾರ್ಯಾಚರಣೆಯಿಂದ ಟೈಟಾನಿಕ್‌ ಪತ್ತೆಯಾಯಿತು!

08:46 PM Jul 17, 2019 | mahesh |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ..

Advertisement

1985ರಲ್ಲಿ ಸಾಗರ ತಜ್ಞ ರಾಬರ್ಟ್‌ ಬಲಾರ್ಡ್‌ ಸಾಗರದಾಳದಲ್ಲಿ ಮುಳುಗಿದ್ದ ಟೈಟಾನಿಕ್‌ ಹಡಗನ್ನು ಪತ್ತೆ ಹಚ್ಚುವುದಾಗಿ ಘೋಷಿಸಿದಾಗ ಜಗತ್ತೇ ನಿಬ್ಬೆರಗಾಗಿ ಆತನೆಡೆ ನೋಡಿತ್ತು. ಏಕೆಂದರೆ, ನಿರ್ಮಾಣವಾದಾಗ ಪ್ರಪಂಚದಲ್ಲೇ ಅತಿದೊಡ್ಡ ಹಡಗು ಎಂಬ ಖ್ಯಾತಿಗೆ ಪಾತ್ರವಾಗಿದ್ದ ಟೈಟಾನಿಕ್‌ ಮುಳುಗಿದ್ದು 1912ನೇ ಇಸವಿಯಲ್ಲಿ. ಅಂದುಕೊಂಡಂತೆ ರಾಬರ್ಟ್‌ ತಾನು ಅಭಿವೃದ್ಧಿ ಪಡಿಸಿದ್ದ ತಂತ್ರಜ್ಞಾನದ ಸಹಾಯದಿಂದ ಟೈಟಾನಿಕ್‌ ಹಡಗನ್ನು ಪತ್ತೆ ಹಚ್ಚಿಬಿಟ್ಟ. ಆದರೆ ಜಗತ್ತಿಗೆ ಗೊತ್ತಿಲ್ಲದ ಸಂಗತಿ ಎಂದರೆ ರಾಬರ್ಟ್‌ ನಿಜಕ್ಕೂ ಹೊರಟಿದ್ದು ಟೈಟಾನಿಕ್‌ ಹಡಗು ಇರುವ ಸ್ಥಳವನ್ನು ಪತ್ತೆ ಮಾಡಲಲ್ಲ. ಆತ ಅಮೆರಿಕ ಸೇನೆಯ ಗೌಪ್ಯ ಕಾರ್ಯಾಚರಣೆಯನ್ನು ನಡೆಸಿಕೊಡಲು ಹೊರಟಿದ್ದ.

ಅಮೆರಿಕ ಮತ್ತು ರಷ್ಯಾ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಅಮೆರಿಕದ ಸಬ್‌ಮರೈನ್‌ಗಳೆರಡು ಸಾಗರದಲ್ಲಿ ಮುಳುಗಡೆಯಾಗಿದ್ದವು. ಅದನ್ನು ಪತ್ತೆ ಮಾಡಲು ಅಮೆರಿಕದ ನೌಕಾದಳಕ್ಕೆ ರಾಬರ್ಟ್‌ ಅಭಿವೃದ್ಧಿ ಪಡಿಸುತ್ತಿದ್ದ ತಂತ್ರಜ್ಞಾನದ ಅಗತ್ಯವಿತ್ತು. ಹೀಗಾಗಿ ತನ್ನ ಕಾರ್ಯ ಸಾಧಿಸಲು ಅಮೆರಿಕ, ರಾಬರ್ಟ್‌ಗೆ ಅಗತ್ಯ ನೆರವು ನೀಡಿತು. ರಾಬರ್ಟ್‌ ಒಂದು ಶರತ್ತನ್ನು ವಿಧಿಸಿದ್ದ. ತನಗೆ ಟೈಟಾನಿಕ್‌ ಹಡಗನ್ನು ಪತ್ತೆ ಹಚ್ಚಲು ಸಹಾಯ ಮಾಡಬೇಕೆನ್ನುವುದೇ ಆ ಶರತ್ತು. ತನ್ನ ಸಬ್‌ಮರೈನ್‌ಗಳನ್ನು ಪತ್ತೆ ಮಾಡಿದ ಮೇಲೆ ಏನು ಬೇಕಾದರೂ ಮಾಡಿಕೋ ಎಂದಿತು ಅಮೆರಿಕ. ಅದರಂತೆ ನೌಕಾದಳದ ಕೆಲಸವನ್ನು ಆದಷ್ಟು ಬೇಗನೆ ಮಾಡಿಕೊಟ್ಟ ರಾಬರ್ಟ್‌ ತನ್ನ ಆಸೆಯೆಂತೆ ಟೈಟಾನಿಕ್‌ ಹಡಗನ್ನೂ ಪತ್ತೆ ಹಚ್ಚಿದ.

ಹವನ

Advertisement

Udayavani is now on Telegram. Click here to join our channel and stay updated with the latest news.

Next