Advertisement

ಮಾರ್ಚ್‌ನಲ್ಲಿ ಟಚ್‌ ಸ್ಮಾರ್ಟ್‌ ವಾಚ್‌ “ಟೈಟಾನ್‌ ಕನೆಕ್ಟೆಡ್‌ ಎಕ್ಸ್‌”ಮಾರುಕಟ್ಟೆಗೆ

09:57 AM Feb 16, 2020 | Nagendra Trasi |

ನವದೆಹಲಿ: ಕೈಗಡಿಯಾರ ತಯಾರಿಕೆಯಲ್ಲಿ ಜನಪ್ರಿಯವಾಗಿರುವ ಟೈಟಾನ್‌ ಭಾರತದ ಮಾರುಕಟ್ಟೆಗೆ ಸಂಪೂರ್ಣ ಟಚ್‌ ಸ್ಮಾರ್ಟ್‌ ವಾಚ್‌ ಕೆನೆಕ್ಟೆಡ್‌ ಎಕ್ಸ್‌’ ಬಿಡುಗಡೆ ಮಾಡಿದೆ.

Advertisement

ಮುಂದಿನ ಮಾರ್ಚ್‌ ತಿಂಗಳಿನಿಂದ ಗ್ರಾಹಕರು ಕೊಳ್ಳಬಹುದಾಗಿದೆ. ಬಣ್ಣ ಹಾಗೂ ವಿನ್ಯಾಸಲ್ಲಿ ಆಕರ್ಷಕವಾಗಿರುವ ಈ ವಾಚ್‌ನ ದರ 14,995 ರೂ. ಇರಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ದುಬಾರಿ ಮತ್ತು ಐಷಾರಾಮಿ ವಾಚ್‌ ಆಗಿರುವ ಆ್ಯಪಲ್‌ ಸ್ಮಾರ್ಟ್‌ ವಾಚ್‌ ಗಳಿಗೆ ಸ್ಪರ್ಧೆ ನೀಡಲಿದೆ. “ಟಚ್‌’ ಆಯ್ಕೆಯ ಮೂಲಕವೇ ಸ್ಮಾರ್ಟ್‌ವಾಚ್‌ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ.

ಅನಲಾಗ್‌ ವಾಚ್‌, 1.2 ಇಂಚು ಫ‌ುಲ್‌ ಕಲರ್‌ ಟಚ್‌ ಸ್ಕ್ರೀನ್‌ ಹೊಂದಿದ್ದು, ಮೂರು ಮಾದರಿಗಳಲ್ಲಿ ಸಿಗಲಿದೆ. ಹೃದಯ ಬಡಿತದ ವಿವರ, ಹವಾಮಾನ ವರದಿ, ಫೋನ್‌ ಹುಡುಕುವುದು, ಕೆಮರಾ, ಸೆಲ್ಫಿ, ಮ್ಯೂಸಿಕ್‌ ನಿಯಂತ್ರಣ ಮೊದಲಾದವು ಗಳನ್ನು ಈ ವಾರ್ಚ್‌ನಲ್ಲಿ ಮಾಡಬಹುದಾಗಿದೆ.
ಇದರಲ್ಲಿ 13 ವೈಶಿಷ್ಟ್ಯಗಳು ಒಳಗೊಂಡಿವೆ. ದೇಶದಲ್ಲಿ ಟೈಟಾನ್‌ ಕಂಪೆನಿಯು ಎರಡನೇ ಸ್ಥಾನದಲ್ಲಿದೆ.

ಸ್ಯಾಮಸಂಗ್‌ ಗ್ಯಾಲಕ್ಸಿ ಹೋಂ ಮಿನಿ
ಸ್ಯಾಮಸಂಗ್‌ ಕಂಪೆನಿಯೂ ತನ್ನ ನೂತನ ಆವೃತ್ತಿಯ ಸ್ಮಾರ್ಟ್ ಫೋನ್‌ನಾದ ಗ್ಯಾಲಕ್ಸಿ ಝಡ್‌ ಮತ್ತು ಗ್ಯಾಲಕ್ಸಿ ಎಸ್‌.20 ಶ್ರೇಣಿಯ ಮಡಚಬಹುದಾದ ಸ್ಮಾರ್ಟ್‌ಫೋನ್‌ನನ್ನು ಕ್ಯಾಲಿಫೋರ್ನಿಯಾದಲ್ಲಿ ನಡೆಯುವ ಆನ್‌ ಪ್ಯಾಕ್ಡ್-2020 ಎಂಬ ಕಾರ್ಯಕ್ರಮದಲ್ಲಿ
ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ.

ಈ ಸ್ಮಾರ್ಟ್‌ಫೋನ್‌ ಗಳಲ್ಲಿ ಗ್ಯಾಲಕ್ಸಿ ಹೋಂ ಮಿನಿ ಎಂಬ ವಾಯ್ಸ ಅಸಿಸ್ಟೆಂಟ್‌ ಇದರಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಗ್ಯಾಲಕ್ಸಿ ಹೋಂ ಮಿನಿ ಎಂಬ ವಾಯ್ಸ ಅಸಿಸ್ಟೆಂಟ್‌ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದ್ದು ಹೀಗಾಗಿ ಗ್ರಾಹಕರ ಕುತೂಹಲವನ್ನು ಹೆಚ್ಚಿಸಿದೆ. ಸ್ಯಾಮಸಂಗ್‌ ಗ್ಯಾಲಕ್ಸಿ ಹೋಂ ಮಿನಿಯೂ ಗೂಗಲ್‌ ಅಸಿಸ್ಟೆಂಟ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಹಾಡು ಕೇಳಲು, ಅಲಾರಾಂನ್ನು ಹೊಂದಿಸಲು, ಸುದ್ದಿ ಕೇಳಲು ಇದು ಸಹಾಯ ಮಾಡುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next